lover escape : ಕುಂದಾಪುರ : ಗಂಡನ ಬಿಟ್ಟು ಪ್ರಿಯಕರನ ಜೊತೆಗೆ ಎಸ್ಕೇಪ್‌ ಆದ 2 ಮಕ್ಕಳ ತಾಯಿ

ಕುಂದಾಪುರ : ಎರಡು ಮಕ್ಕಳ ತಾಯಿಯೋರ್ವಳು ಗಂಡ ಹಾಗೂ ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆಗೆ ಪರಾರಿಯಾಗಿದ್ದಾಳೆ. ಕೊನೆಗೆ ಪೊಲೀಸರು ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು (lover escape) ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಕೋಗನ್ ತಾತಿ ಎಂಬಾತ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಕಳೆದ ನಾಲ್ಕು ತಿಂಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪೈಚಾರುವಿನಿಂದ ವಾಸವಾಗಿದ್ದು, ಸ್ಥಳೀಯ ಸಂಸ್ಥೆಯೊಂದರಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸವನ್ನು ಮಾಡುತ್ತಿದ್ದ. ಆದರೆ ಕೋಗನ್‌ ತಾತಿಯ ಪತ್ನಿ ಜನವರಿ 25 ರಂದು ನಾಪತ್ತೆಯಾಗಿದ್ದಳು. ಈ ಕುರಿತು ಆತಂಕಕ್ಕೆ ಒಳಗಾಗಿದ್ದ ಪತಿ ಕೂಡಲೇ ಸುಳ್ಯ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು.

ಪ್ರಕರಣ ದಾಖಲು ಮಾಡಿಕೊಂಡ ಸುಳ್ಯ ಠಾಣೆಯ ಪೊಲೀಸರು ಮಹಿಳೆ ಮೊಬೈಲ್‌ ಟ್ರ್ಯಾಕ್‌ ಮಾಡುತ್ತಲೇ, ಮಹಿಳೆ ಕುಂದಾಪುರದಲ್ಲಿ ಇರುವುದು ಪತ್ತೆಯಾಗಿತ್ತು. ಹೀಗಾಗಿ ಕುಂದಾಪುರ ಠಾಣೆಯ ಪೊಲೀಸರಿಗೆ ಮಾಹಿತಿಯನ್ನು ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿ, ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿ ಮಹಿಳೆಯ ಅನೈತಿಕ ಪ್ರೇಮ ಕಥೆ ಬೆಳಕಿಗೆ ಬಂದಿತ್ತು. ಕೋಗನ್‌ ತಾತಿಯ ಪತ್ನಿಗೆ ಮಂಗಳೂರಿನ ಹೋಟೆಲ್‌ವೊಂದರದಲ್ಲಿ ಚೈನೀಸ್‌ ಪುಡ್‌ ಮೇಕರ್‌ ಆಗಿ ಕೆಲಸ ಮಾಡುತ್ತಿದ್ದ ಚಂದನ್‌ ಎಂಬಾತನ ಜೊತೆಗೆ ಪ್ರೀತಿ ಹುಟ್ಟಿತ್ತು. ಚಂದನ್‌ ಕೂಡ ಅಸ್ಸಾಂ ಮೂಲದವನಾಗಿದ್ದ. ಇದೀಗ ಪೊಲೀಸರು ಠಾಣೆಯಲ್ಲಿ ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಮೊಬೈಲ್​ ಖರೀದಿಸಿದ ಪತ್ನಿಯ ಕೊಲೆಗೆ ಸ್ಕೆಚ್​ ಹಾಕಿದ್ದ ಪತಿ ಅಂದರ್​​

ತನ್ನ ಅನುಮತಿಯಿಲ್ಲದೆಯೇ ಸ್ಮಾರ್ಟ್​ ಫೋನ್​ ಖರೀದಿ ಮಾಡಿದ್ದಾಳೆ ಎಂಬ ಒಂದೇ ಕಾರಣಕ್ಕೆ ಕೋಪಗೊಂಡಿದ್ದ ಪತಿಯು ತನ್ನ ಪತ್ನಿಯನ್ನು ಕೊಲೆ ಮಾಡಲು ಸುಪಾರಿ ಕೊಲೆಗಾರ ರನ್ನು ನೇಮಿಸಿದ ಶಾಕಿಂಗ್​ ಘಟನೆಯೊಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ಪೊಲೀಸರು 40 ವರ್ಷದ ಪತಿಯನ್ನು ಬಂಧಿಸಿದ್ದಾರೆ. ಸುಪಾರಿ ಕೊಲೆಗಾರ ಮಹಿಳೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಹರಿತವಾದ ಆಯುಧದಿಂದ ಮಹಿಳೆಯ ಗಂಟಲಿಗೆ ಗಂಭೀರ ಗಾಯವನ್ನು ಮಾಡಿದ್ದು ಪರಿಣಾಮ ಮಹಿಳೆಯ ಗಂಟಲಿನ ಬಳಿ ಪೊಲೀಸರು 7 ಹೊಲಿಗೆಗಳನ್ನು ಹಾಕಿದ್ದಾರೆ. ದಕ್ಷಿಣ ಕೊಲ್ಕತ್ತಾದ ನರೇಂದ್ರಪುರ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಪತಿಯ ಜೊತೆಯಲ್ಲಿ ಪೊಲೀಸರು ಸುಪಾರಿ ಹಂತಕನನ್ನೂ ಬಂಧಿಸಿದ್ದಾರೆ. ಈ ಹಂತಕ ನೇಮಿಸಿದ್ದ ಇನ್ನೊಬ್ಬ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇನ್ನು ಈ ಪ್ರಕರಣದ ವಿಚಾರವಾಗಿ ಮಾತನಾಡಿದ ನರೇಂದ್ರಪುರ ಪೊಲೀಸ್​ ಠಾಣೆಯ ಹಿರಿಯ ಅಧಿಕಾರಿ, ಮಹಿಳೆಯು ನೀಡಿರುವ ಮಾಹಿತಿಯ ಪ್ರಕಾರ ಕೆಲವು ತಿಂಗಳ ಹಿಂದೆ ಈಕೆಯು ತನ್ನ ಪತಿ ಬಳಿಯಲ್ಲಿ ತನಗೊಂದು ಮೊಬೈಲ್ ಕೊಡಿಸುವಂತೆ ಕೇಳಿದ್ದಾಳೆ. ಇದಕ್ಕೆ ಪತಿಯು ನಿರಾಕರಿಸಿದ್ದ. ಟ್ಯೂಷನ್​ ಕ್ಲಾಸ್​ ನಡೆಸುತ್ತಿದ್ದ ಮಹಿಳೆಯು ತಾನೇ ಹಣವನ್ನು ಒಟ್ಟುಗೂಡಿಸಿ ಜನವರಿ 1ನೇ ತಾರೀಖಿನಂದು ಹೊಸ ಸ್ಮಾರ್ಟ್​ ಫೋನ್​ ಖರೀದಿ ಮಾಡಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಕೆಂಡಾಮಂಡಲರಾದ ಪತಿಯು ನಿನ್ನನ್ನು ಕೊಲೆ ಮಾಡುತ್ತೇನೆಂದು ಪತ್ನಿಗೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದರು. ಗುರುವಾರ ರಾತ್ರಿ ವ್ಯಕ್ತಿಯು ಮನೆಯ ಮುಖ್ಯದ್ವಾರವನ್ನು ಬಂದ್​ ಮಾಡಲು ಹೋಗಿದ್ದಾನೆ. ಆದರ ಆತ ಕೋಣೆಗೆ ವಾಪಸ್ಸಾಗಲಿಲ್ಲ. ಇದರಿಂದ ಅನುಮಾನಗೊಂಡ ಪತ್ನಿಯು ತನ್ನ ಪತಿಯನ್ನು ಹುಡುಕುತ್ತಾ ಮನೆಯಿಂದ ಹೊರ ಬಂದಿದ್ದಾಳೆ. ಈ ವೇಳೆಯಲ್ಲಿ ಇಬ್ಬರು ಸುಫಾರಿ ಹಂತಕರು ಮಹಿಳೆಯ ಮೇಲೆ ದಾಳಿ ಮಾಡಿದ್ದಾರೆ.

ರಕ್ತಸಿಕ್ತವಾಗಿದ್ದ ಮಹಿಳೆಯು ಹೇಗೋ ಹರಸಾಹಸ ಪಟ್ಟು ಮನೆಗೆ ಬರುವಲ್ಲಿ ಯಶಸ್ವಿಯಾಗಿದ್ದಾಳೆ. ಹಾಗೂ ನೆರೆಹೊರೆಯವರನ್ನು ಎಚ್ಚರಿಸಿದ್ದಾಳೆ. ಕೂಡಲೇ ನೆರೆಹೊರೆಯವರು ಮಹಿಳೆಯ ರಕ್ಷಣೆಗೆ ಧಾವಿಸಿದ್ದಾರೆ. ನೆರೆಹೊರೆಯವರೇ ಪತಿಯನ್ನು ಹಾಗೂ ಒಬ್ಬ ಕೊಲೆಗಾರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಮತ್ತೊಬ್ಬ ಸುಪಾರಿ ಹಂತಕ ಸ್ಥಳದಿಂದ ಎಸ್ಕೇಪ್​ ಆಗಿದ್ದಾನೆ. ಬಂಧಿತ ಪತಿಯನ್ನು ರಾಜೇಶ್​ ಝಾ ಎಂದು ಗುರುತಿಸಲಾಗಿದೆ. ಹಾಗೂ ಪೊಲೀಸರ ವಶಕ್ಕೆ ಸಿಕ್ಕ ಸುಪಾರಿ ಹಂತಕನನ್ನು ಸುರಜೀತ್​ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಬಾಲಕಿಯನ್ನು ಖರೀದಿಸಲು ಮುಂದಾಗಿದ್ದ ವೃದ್ಧ ಅರೆಸ್ಟ್​

ಇದನ್ನೂ ಓದಿ : ಮೊಬೈಲ್​ ಫೋನ್​ ಬಳಸಿದ್ದಕ್ಕೆ ಪುತ್ರಿ ಮೇಲೆ ತಂದೆಯಿಂದಲೇ ರೇಪ್​

( mother of 2 children with husband and lover escape)

Comments are closed.