ಮೂರು ವರ್ಷಗಳ ಕಾಯುವಿಕೆಯ ಬಳಿಕ ಇಂದು ಜಗತ್ತಿನಾದ್ಯಂತ ತೆರೆ ಕಂಡ ಕೆಜಿಎಫ್-2 (KGF Chapter 2) ಸಿನಿಮಾ ನೀರಿಕ್ಷೆ ಮೀರಿ ಯಶಸ್ಸು ಕಂಡಿದೆ. ದೇಶದಾದ್ಯಂತ ಒಟ್ಟು 10 ಸಾವಿರ ಸ್ಕ್ರೀನ್ ನಲ್ಲಿ ಪ್ರದರ್ಶನ ಕಂಡಿರೋ ಸಿನಿಮಾಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಡು, ಫೈಟಿಂಗ್, ಡೈಲಾಗ್ ಹೀಗೆ ಎಲ್ಲವನ್ನೂ ಕಂಡು ಅಭಿಮಾನಿಗಳು ಮನಸೋತಿದ್ದು ಎಲ್ಲಾ ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲೂ ಟಿಕೇಟ್ ಸೋಲ್ಡ್ ಔಟ್ ಆಗಿದೆ. ಅಷ್ಟೇ ಅಲ್ಲ ಮೊದಲ ದಿನದ ಗಳಿಕೆಯಲ್ಲೇ ಕೆಜಿಎಫ್-2 ಹೊಸ ದಾಖಲೆ ಬರೆದಿದೆ.

ಯಶ್ ಅಭಿನಯದ ನಾರಾಚಿ ಸಾಮ್ರಾಜ್ಯ ತೆರೆದಿಡುವ ಈ ಸಿನಿಮಾ ಭಾಕ್ಸಾಫೀಸ್ ನಲ್ಲಿ ಮೋಡಿಮಾಡಿದೆ. ಮಾತ್ರವಲ್ಲ ಬಾಲಿವುಡ್ ನಲ್ಲೂ ತೆರೆ ಕಂಡಿರುವ ಸಿನಿಮಾ ಹೊಸ ದಾಖಲೆಯನ್ನೇ ಬರೆದಿದೆ. ಬಾಕ್ಸ್ ಆಫೀಸ್ ಡಾಟ್ ಕಾಮ್ ಸಮೀಕ್ಷೆಯ ಪ್ರಕಾರ ಕೆಜಿಎಫ್ 2 ಸಿನಿಮಾ ಬಾಲಿವುಡ್ ನಲ್ಲೇ ಹೊಸ ದಾಖಲೆ ಬರೆದಿದೆ. ಈ ಸಂಗತಿಗಳನ್ನು ಮಾಧ್ಯಮ ಗಳು ವರದಿ ಮಾಡಿದ್ದು, ಮೊದಲ ದಿನವೇ ಬಾಲಿವುಡ್ ನಲ್ಲಿ ದಾಖಲೆ ಬರೆದ ಚಿತ್ರ ಕೆಜಿಎಫ್- 2 ಎಂದು ಘೋಷಿಸಿವೆ.

ದಾಖಲೆಗಳ ಪ್ರಕಾರ 5 ಕ್ಕೂ ಅಧಿಕ ಭಾಷೆಯಲ್ಲಿ ರಿಲೀಸ್ ಆಗಿರೋ ಕೆಜಿಎಫ್-2 ಸಿನಿಮಾ ಮೊದಲ ದಿನವೇ 125 ಕೋಟಿ ಗಳಿಸಿದೆ ಎನ್ನಲಾಗ್ತಿದೆ. ಇದರೊಂದಿಗೆ ಹಿಂದಿ ಭಾಷೆಯಲ್ಲಿ ರಿಲೀಸ್ ಆದ ಮೊದಲನೇ ದಿನವೇ ಅತಿ ಹೆಚ್ಚು ಹಣ ಗಳಿಸಿದ ಮೊದಲ ಸಿನಿಮಾ ಎಂಬ ಖ್ಯಾತಿಗೂ ಕೆಜಿಎಫ್ 2 ಪಾಲಾಗಿದೆ. ಈ ಹಿಂದೆ ರಿಲೀಸ್ ಆದ ಬಾಹುಬಲಿ ದಿ ಬಿಗಿನಿಂಗ್ ಸಿನಿಮಾ ಮೊದಲ ದಿನ 37 ಕೋಟಿ ರೂಪಾಯಿ ಗಳಿಸಿತ್ತು. ಇದಾದ ಬಳಿಕ ಈಗ ಕೆಜಿಎಫ್-2 (KGF 2 ) 39 ಕೋಟಿ ಗಳಿಸಿದೆ.

ಟೈಗರ್ ಶ್ರಾಫ್ ಹಾಗೂ ಹೃತಿಕ್ ರೋಶನ್ ನಟನೆಯ ವಾರ್ ಸಿನಿಮಾ ಮೊದಲ ದಿನವೇ 29 ಕೋಟಿ ಬಾಚಿಕೊಂಡಿತ್ತು. ಅಮೀರ್ ನಟನೆಯ ತಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಕೂಡ 26 ಕೋಟಿ ಗಳಿಸಿತ್ತು. ಇನ್ನೂ ಸಲ್ಮಾನ್ ಖಾನ್ ನಟನೆಯ ಟೈಗರ್ ಜಿಂದಾ ಹೈ ಸಿನಿಮಾ 24 ಕೋಟಿ ರೂಪಾಯಿ ಗಳಿಸಿತ್ತು. ಈಗ ಈ ಎಲ್ಲ ದಾಖಲೆ ಮುರಿದು ಕೆಜಿಎಫ್-2 ಸಿನಿಮಾ ಹೊಸ ದಾಖಲೆ ಬರೆದಿದೆ. ಇನ್ನು ಭಾರತೀಯ ಚಿತ್ರರಂಗದಲ್ಲಿ 1200 ಕೋಟಿ ಗಳಿಸಿದ ಬಾಹುಬಲಿ ಹೊಸ ದಾಖಲೆ ಬರೆದಿತ್ತು. ಇದಾದ ಮೇಲೆ ತೆರೆಗೆ ಬಂದ ಆರ್ ಆರ್ ಆರ್ ಸಿನಿಮಾ 1000 ಕೋಟಿ ಗಳಿಸಿದೆ. ಈಗ ಕೆಜಿಎಫ್-2 ಈ ಎಲ್ಲ ದಾಖಲೆ ಮುರಿಯುವ ಭರವಸೆ ಮೂಡಿಸಿದೆ.
ಇದನ್ನೂ ಓದಿ : Kanthara : ಕರಾವಳಿಯ ಕತೆ ಹೇಳೋಕೆ ಬರ್ತಿದೆ ಕಾಂತಾರ : ರಿಲೀಸ್ ಆಯ್ತು ಟೀಸರ್
ಇದನ್ನೂ ಓದಿ : ಸಪ್ತಪದಿ ತುಳಿದ ರಣಬೀರ್ – ಆಲಿಯಾ ಜೋಡಿ
KGF Chapter 2 First Day 125 Crore Collections