Eshwarappa : ರಾಜೀನಾಮೆಯಲ್ಲ, ಈಶ್ವರಪ್ಪ ಅರೆಸ್ಟ್ ಆಗಬೇಕು : ಸಂತೋಷ್ ಸಹೋದರನ ಒತ್ತಾಯ

ಬೆಂಗಳೂರು : ಪ್ರತಿಪಕ್ಷಗಳ ಹೋರಾಟದ ಫಲವಾಗಿ ಕೊನೆಗೂ ಬಿಜೆಪಿಯ ಹಿರಿಯ ಸಚಿವ ಹಾಗೂ ನಾಯಕ ಈಶ್ವರಪ್ಪ (Eshwarappa ) ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಶಿವಮೊಗ್ಗದಲ್ಲಿ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದು ನಾಳೆ ಬೆಂಗಳೂರಿನಲ್ಲಿ ಸಿಎಂ ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ. ಆದರೆ ರಾಜೀನಾಮೆ ನಾವು ಕೇಳಿಲ್ಲ.‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪನವರ ಬಂಧನವಾಗಬೇಕು ಎಂದು ಸಂತೋಷ್ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

ಹೌದು, ಕಾಂಗ್ರೆಸ್ ನ ಉಗ್ರ ಹೋರಾಟ ಹಾಗೂ ಸಂತೋಷ್ ಕುಟುಂಬಸ್ಥರ ಆಕ್ರೋಶದ ಫಲವಾಗಿ ೪೦ ಪರ್ಸೆಂಟ್ ಕಮೀಷನ್ ಪಡೆದ ಆರೋಪ ಎದುರಿಸುತ್ತಿರುವ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆ.ಎಸ್.ಈಶ್ವರಪ್ಪ ನನ್ನನ್ನು ಈ ಎತ್ತರಕ್ಕೆ ಬೆಳೆಸಿದ್ದು ಪಕ್ಷ. ನನ್ನಿಂದ ಪಕ್ಷಕ್ಕೆ ಮುಜುಗರವಾಗಬಾರದೆಂದು ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ. ಆದರೆ ಈಶ್ವರಪ್ಪ ರಾಜೀನಾಮೆ ಮೃತ ಗುತ್ತಿಗೆದಾರ ಸಂತೋಷ್ ಕುಟುಂಬಸ್ಥರಿಗೆ ಸಮಾಧಾನ ತಂದಿಲ್ಲ. ನಾವು ರಾಜೀನಾಮೆ ಕೇಳಿಲ್ಲ, ಅದು ಸರ್ಕಾರಕ್ಕೆ ಬಿಟ್ಟಿದ್ದು, ಪ್ರಕರಣದ ಕುರಿತು ಎಫ್ಐಆರ್ ದಾಖಲಾಗಿದೆ, ಆರೋಪಿಗಳ ಬಂಧನ ಆಗಬೇಕು ಇದು ನಮ್ಮ ಬೇಡಿಕೆ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಂತೋಷ್ ಪಟೇಲ್ ಸಹೋದರ ಪ್ರಶಾಂತ್ ಪಟೇಲ್, ಕೆ.ಎಸ್.ಈಶ್ವರಪ್ಪ ಬಂಧನ ಆಗಬೇಕು ಎಂದು ಆಗ್ರಹಿಸಿದ್ದಾರೆ. ನನ್ನ ತಮ್ಮ ಮಾಡಿದ ಕಾಮಗಾರಿಯ ಬಿಲ್ 4 ಕೋಟಿ 12 ಲಕ್ಷ ಪಾವತಿ ಮಾಡಬೇಕು. ನನ್ನ ತಮ್ಮನ ಪತ್ನಿಗೆ ಸರ್ಕಾರಿ ನೌಕರಿ ಕೊಡಿಸಬೇಕು, ಸೂಕ್ತ ಪರಿಹಾರ ಕೊಡಬೇಕು. ಎಫ್ಐಆರ್ ದಾಖಲಾದ ಪ್ರಕಾರ ಎ1, ಎ2, ಎ3 ಆರೋಪಿಗಳ ಬಂಧನ ಆಗಬೇಕು. ಇವಿಷ್ಟೇ ನಮ್ಮ ಬೇಡಿಕೆ ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಈ‌ ಮಧ್ಯೆ ಕಾಂಗ್ರೆಸ್ ಕೂಡ ಈಶ್ವರಪ್ಪ ರಾಜೀನಾಮೆಯಿಂದ ಸಮಾಧಾನಗೊಂಡಿಲ್ಲ. ಹೀಗಾಗಿ ತಮ್ಮ ಧರಣಿಯನ್ನು ಕಾಂಗ್ರೆಸ್ ಅಹೋರಾತ್ರಿಗೆ ಮುಂದುವರೆಸಲು ಕಾಂಗ್ರೆಸ್ ಮುಂದಾಗಿದೆ. ವಿಧಾನಸೌಧದ ಅಂಗಳದಲ್ಲಿ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ನಾಯಕರು ಈಶ್ವರಪ್ಪ ರಾಜೀನಾಮೆ ಕೊಡೋ ಮಾತನ್ನು ನಂಬೋಕೆ ಸಾಧ್ಯವಿಲ್ಲ. ಅದಲ್ಲದೇ ನಾವು ಅವರ ರಾಜೀನಾಮೆಗೆ ಅಗ್ರಹಿಸಿಲ್ಲ. ಬದಲಾಗಿ ಎಫ್ ಆಯ್ ಆರ್ ದಾಖಲಾಗಿರೋದರಿಂದ ಅವರನ್ನು ಬಂಧಿಸಬೇಕೆಂದು ಆಗ್ರಹಿಸುತ್ತೇವೆ ಎಂದಿದ್ದಾರೆ. .ಒಟ್ಟಿನಲ್ಲಿ ಸಂತೋಷ್ ಆತ್ಮಹತ್ಯೆ ಪ್ರಕರಣ ಈಶ್ವರಪ್ಪ ಪಾಲಿಗೆ ಕಂಟಕ ವಾಗಿ ಪರಿಣಮಿಸಿದ್ದು, ಈಶ್ವರಪ್ಪ ರಾಜೀನಾಮೆ ಬಳಿಕ ಬಂಧನಕ್ಕೆ ಒತ್ತಡ ಹೆಚ್ಚಿದೆ.

ಇದನ್ನು ಓದಿ :  ಈಶ್ವರಪ್ಪ ಬಚಾವ್ ಮಾಡಲು ಸಿಎಂ ಮಾಸ್ಟರ್ ಪ್ಲ್ಯಾನ್ : ಸಿಐಡಿ ತನಿಖೆಗೆ ಸಂತೋಷ್ ಕೇಸ್

ಇದನ್ನೂ ಓದಿ : ಸಂತೋಷ್ ಪಾಟೀಲ್ ತಂಗಿದ್ದ ಹೊಟೇಲ್ ನಲ್ಲಿ ಏನಾಯ್ತು? ಇಲ್ಲಿದೆ Exclusive Details

Eshwarappa should become Arrest, not resignation demand Santhosh brother

Comments are closed.