ಕಳೆದೆರಡು ವರ್ಷಗಳಿಂದ ಬಾಲಿವುಡ್‌ನ ಯಾವ ಸ್ಟಾರ್ ನಟನ ಸಿನಿಮಾಗಳೂ ಸಹ ಗೆಲುವು ಕಂಡಿಲ್ಲ. ಮೊದಲು ಸಿನಿಮಾ ಸಾಧಾರಣ ಕಥೆಯನ್ನು ಹೊಂದಿದ್ದರೂ ಕನಿಷ್ಟ ಇನ್ನೂರು ಮುನ್ನೂರು ಕೋಟಿ ರೂಪಾಯಿ ಕಲೆಕ್ಷನ್ (KGF Chapter 2 – Pathan Movie) ಅನ್ನು ಸುಲಭವಾಗಿ ಮಾಡುತ್ತಿತ್ತು. ಆದರೆ ಇತ್ತೀಚೆಗೆ ಬಾಲಿವುಡ್ ಸ್ಟಾರ್ ನಟರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿಯನ್ನೂ ಕಲೆ ಹಾಕದೇ ಹಾಕಿದ್ದ ಬಂಡವಾಳದಷ್ಟೂ ಸಹ ಗಳಿಸಲಾಗದೇ ಸೋಲನ್ನು ಕಂಡಿದೆ. ಹೀಗೆ ಗಳಿಕೆಯಲ್ಲಿ ಗೆಲುವುವನ್ನು ಕಾಣದೆ ಮಲಗಿದ ಬಾಲಿವುಡ್ ಸಿನಿರಂಗವನ್ನು ಶಾರುಖ್ ಖಾನ್ ಮಾತ್ರ ಕಾಪಾಡಲು ಸಾಧ್ಯ, ಆತನ ಸಿನಿಮಾಗಳು ಮಾತ್ರ ಹಳೆಯ ಬಾಲಿವುಡ್ ಸಿನಿಮಾಗಳ ಗತ್ತನ್ನು ವಾಪಸ್ ತರಲು ಸಾಧ್ಯ ಎಂಬ ಅಭಿಪ್ರಾಯ ಹಾಗೂ ವಿಶ್ವಾಸವನ್ನು ಹಲವು ಸಿನಿ ರಸಿಕರು ವ್ಯಕ್ತಪಡಿಸಿದ್ದರು.
ಅದರಂತೆ ಇಂದು ( ಜನವರಿ 25 ) ಬಿಡುಗಡೆಯಾಗುತ್ತಿರುವ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಪಠಾಣ್ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಹಾಗೂ ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಹೌದು, ಸುಮಾರು ನಾಲ್ಕು ವರ್ಷಗಳ ಬಳಿಕ ತೆರೆ ಕಾಣುತ್ತಿರುವ ಶಾರುಖ್ ಖಾನ್ ನಟನೆಯ ಸಿನಿಮಾವನ್ನು ಮೊದಲ ದಿನವೇ ಸಿನಿಮಂದಿರಗಳಲ್ಲಿ ವೀಕ್ಷಿಸಲು ಮುಗಿಬಿದ್ದ ಅಭಿಮಾನಿಗಳು ಹಾಗೂ ಸಿನಿ ರಸಿಕರು ದೊಡ್ಡ ಸಂಖ್ಯೆಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿರುವ ಕಾರಣ ಮೊದಲ ದಿನದ ಅಡ್ವಾನ್ಸ್ ಬುಕಿಂಗ್‌ನಲ್ಲಿ ಪಠಾಣ್ ಸಿನಿಮಾ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನೂ ಸಹ ಹಿಂದಿಕ್ಕಿದೆ.
ಹಾಗಿದ್ದರೆ ಮೊದಲ ದಿನದ ಅಡ್ವಾನ್ಸ್ ಬುಕಿಂಗ್‌ನಲ್ಲಿ ಪಠಾಣ್ ಸಿನಿಮಾದ ಎಷ್ಟು ಟಿಕೆಟ್‌ಗಳು ಮಾರಾಟವಾಗಿವೆ ಹಾಗೂ ಎಷ್ಟು ಹಣವನ್ನು ಗಳಿಸಿದೆ ಗೊತ್ತಾ ? ಭಾರತದಲ್ಲಿ ಇರುವ ಪಿವಿಆರ್, ಐನಾಕ್ಸ್ ಹಾಗೂ ಗೋಪಾಲನ್ ರೀತಿಯ ನ್ಯಾಷನಲ್ ಮಲ್ಟಿಪ್ಲೆಕ್ಸ್ ಚೈನ್‌ನ ಸಿನಿಮಂದಿರಗಳ ಬಿಡುಗಡೆ ದಿನದ ಮುಂಗಡ ಬುಕಿಂಗ್‌ನಲ್ಲಿ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಕೆಜಿಎಫ್ ಚಾಪ್ಟರ್ 2 ಹಿಂದಿ ವರ್ಷನ್‌ನ ಮುಂಗಡ ಬುಕಿಂಗ್ ಅನ್ನು ಹಿಂದಿಕ್ಕಿದೆ. ಬಿಡುಗಡೆ ದಿನಕ್ಕಾಗಿ ನಡೆದ ಅಡ್ವಾನ್ಸ್ ಬುಕಿಂಗ್‌ನಲ್ಲಿ ಪಠಾಣ್ ಸಿನಿಮಾದ 5.56 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದರೆ, ಕೆಜಿಎಫ್ ಚಾಪ್ಟರ್ 2 ಹಿಂದಿ ವರ್ಷನ್‌ನ 5.15 ಟಿಕೆಟ್‌ಗಳು ಮಾರಾಟವಾಗಿದ್ದವು. ಈ ಮೂಲಕ ಪಠಾಣ್ ಮುಂಗಡ ಬುಕಿಂಗ್‌ನಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಹಿಂದಿಕ್ಕಿ ಮುಂಗಡ ಬುಕಿಂಗ್‌ನಲ್ಲಿ ಅತಿಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾಗಳ ಹಿಂದಿ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದೆ.
ಇನ್ನು ಮೊದಲ ದಿನದ ಟಿಕೆಟ್‌ಗಾಗಿ ನಡೆದ ಮುಂಗಡ ಬುಕಿಂಗ್‌ನಲ್ಲಿ ಅತಿಹೆಚ್ಚು ಟಿಕೆಟ್‌ಗಳು ಮಾರಾಟವಾದ ಸಿನಿಮಾಗಳ ಪಟ್ಟಿಯಲ್ಲಿ ಇಂದಿಗೂ ಸಹ ಎಸ್ ಎಸ್ ರಾಜಮೌಳಿ ಅವರ ದೃಶ್ಯಕಾವ್ಯ ಬಾಹುಬಲಿ 2 ಅಗ್ರಸ್ಥಾನದಲ್ಲಿದೆ. ಬಾಹುಬಲಿ 2 ಸಿನಿಮಾದ ಹಿಂದಿ ವರ್ಷನ್‌ನ ಬರೋಬ್ಬರಿ 6.50 ಲಕ್ಷ ಟಿಕೆಟ್‌ಗಳು ಅಡ್ವಾನ್ಸ್ ಬುಕಿಂಗ್‌ನಲ್ಲಿ ಮಾರಾಟವಾಗಿದ್ದವು. ಅತಿಹೆಚ್ಚು ಮುಂಗಡ ಬುಕಿಂಗ್ ಆದ ಸಿನಿಮಾಗಳ ಪಟ್ಟಿ ಬಿಡುಗಡೆ ದಿನಕ್ಕಾಗಿ ನಡೆದ ಮುಂಗಡ ಬುಕಿಂಗ್‌ನಲ್ಲಿ ಅತಿಹೆಚ್ಚು ಟಿಕೆಟ್ ಮಾರಾಟವಾದ ಹಿಂದಿ ಸಿನಿಮಾಗಳ ( ಡಬ್ ಆದ ಸಿನಿಮಾಗಳನ್ನೂ ಸೇರಿಸಿ ) ಟಾಪ್ 10 ಪಟ್ಟಿ ಈ ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ : ‘ರೋಲೆಕ್ಸ್ ಕೋಮಲ್’ಗೆ ನಾಯಕಿಯಾದ ಕರಾವಳಿ ಬೆಡಗಿ ಸೋನಾಲ್ ಮೊಂಟೆರೋ
ಇದನ್ನೂ ಓದಿ : ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ‘ವಿಕ್ರಮ್’ ಬೆಡಗಿ ಧಾರವಾಡದ ಸ್ವತಿಷ್ಠ ಕೃಷ್ಣನ್
ಇದನ್ನೂ ಓದಿ : ರೇಣು ಮಹಾರಾಜನಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ ಕೆಜಿಎಫ್ ಗ್ಯಾಂಗ್ ಸ್ಟಾರ್ ತಾರಕ್ ಪೊನ್ನಪ್ಪ
- ಬಾಹುಬಲಿ 2 : 6.50 ಲಕ್ಷ ಟಿಕೆಟ್‌ಗಳು
- ಪಠಾಣ್ : 5.56 ಲಕ್ಷ ಟಿಕೆಟ್‌ಗಳು
- ಕೆಜಿಎಫ್ ಚಾಪ್ಟರ್ 2 : 5.15 ಲಕ್ಷ ಟಿಕೆಟ್‌ಗಳು
- ವಾರ್ : 4.05 ಲಕ್ಷ ಟಿಕೆಟ್‌ಗಳು
- ಥಗ್ಸ್ ಆಫ್ ಹಿಂದೂಸ್ತಾನ್ : 3.46 ಲಕ್ಷ ಟಿಕೆಟ್‌ಗಳು
- ಪ್ರೇಮ್ ರಥನ್ ಧನ್ ಪಾಯೊ : 3.40 ಲಕ್ಷ ಟಿಕೆಟ್‌ಗಳು
- ಭಾರತ್ : 3.15 ಲಕ್ಷ ಟಿಕೆಟ್‌ಗಳು
- ಸುಲ್ತಾನ್ : 3.10 ಲಕ್ಷ ಟಿಕೆಟ್‌ಗಳು
- ದಂಗಲ್ : 3.05 ಲಕ್ಷ ಟಿಕೆಟ್‌ಗಳು
- ಬ್ರಹ್ಮಾಸ್ತ್ರ : 3.02 ಲಕ್ಷ ಟಿಕೆಟ್‌ಗಳು
KGF Chapter 2 – Pathan Movie : Shah Rukh Khan’s “Pathan” breaks KGF Chapter 2 record in advance bookings