Strange incident-man died: ವಿಚಿತ್ರ ಘಟನೆ: ಮಾಲೀಕನನ್ನೆ ಗುಂಡು ಹಾರಿಸಿ ಕೊಂದ ನಾಯಿ

ಯುಎಸ್‌ಎ: (Strange incident-man died) ಸಾಕು ನಾಯಿಗಳಿಗೆ ಗುಂಡು ಹಾರಿಸಿ ಮಾಲೀಕರೇ ಕೊಂದಿರುವ ಅದೆಷ್ಟೋ ಉದಾಹರಣೆಗಳನ್ನು ನಾವು ಕೇಳಿದ್ದೇವೆ. ಆದರೆ ಇದು ಅದಕ್ಕೆ ವಿರುದ್ದವಾದ ಘಟನೆ. ನಾಯಿಯೇ ಗುಂಡು ಹಾರಿಸಿ ಮಾಲೀಕನನ್ನು ಕೊಂದ ಘಟನೆ ನಡೆದಿದೆ.

ಹೌದು..! ಈ ಘಟನೆ ಎಲ್ಲರಿಗೂ ಅಚ್ಚರಿ ಮೂಡಿಸಬಹುದು. ಏನಪ್ಪಾ ಇದು ಸಾಕು ನಾಯಿ ಮಾಲೀಕನನ್ನೇ ಗುಂಡು ಹಾರಿಸಿ ಕೊಂದಿದೆಯಾ? ಅದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲೂ ಕಾಡಬಹುದು. ಅಮೇರಿಕಾದಲ್ಲಿ ನಡೆದ ಈ ಘಟನೆಯಲ್ಲಿ ಅಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ. ಆದರೆ ವ್ಯಕ್ತಿಗೆ ಗುಂಡು ತಗುಲಲು ಕಾರಣ ಅತನ ಸಾಕು ನಾಯಿ.

ವ್ಯಕ್ತಿಯೋರ್ವ ಪ್ರಾಣಿ ಬೇಟೆಗೆಂದೂ ಗನ್‌ ಜೊತೆಗೆ ನಾಯಿಯನ್ನು ಕರೆದುಕೊಂಡು ಹೊರಟಿದ್ದ. ಬೇಟೆಗಾಗಿ ಬಳಸುವ ಗನ್‌ ಅನ್ನು ತನ್ನ ವಾಹನದ ಹಿಂದಿನ ಸೀಟ್‌ ನಲ್ಲಿ ಇಟ್ಟಿದ್ದ. ನಾಯಿಯನ್ನು ಅದೇ ಸೀಟಿನಲ್ಲಿ ಬಿಟ್ಟಿದ್ದ. ಅಕಸ್ಮಿಕವಾಗಿ ನಾಯಿ ತನ್ನ ಪಕ್ಕದ ಸೀಟ್‌ ನಲ್ಲಿಟ್ಟಿದ್ದ ಗನ್‌ ಟ್ರಿಗರ್‌ ಮೇಲೆ ಕೈ ಇಟ್ಟಿದೆ. ಗನ್‌ ಲೋಡ್‌ ಅಗಿದ್ದ ಪರಿಣಾಮ ನಾಯಿಯ ಕೈ ತಾಕಿದ ಕೂಡಲೇ ಗುಂಡು ಹಾರಿದೆ.

ಇದನ್ನೂ ಓದಿ : Honour killing : ನ್ಯಾಯಲಯದಲ್ಲಿ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ

ಇದನ್ನೂ ಓದಿ : ಕ್ಯಾಲಿಫೋರ್ನಿಯಾದಲ್ಲಿ ಗುಂಡಿನ ಚಕಮಕಿ : 7 ಮಂದಿ ಸಾವು

ಇದನ್ನೂ ಓದಿ : Kannada flag in London: ಲಂಡನ್‌ನಲ್ಲೂ ರಾರಾಜಿಸಿದ ಕನ್ನಡದ ಬಾವುಟ

ಈ ವೇಳೆ ವಾಹನದ ಮುಂಭಾಗದ ಸೀಟ್‌ ನಲ್ಲಿ ಕುಳಿತಿದ್ದ ವ್ಯಕ್ತಿಗೆ ಗುಂಡು ತಗುಲಿದೆ. ಆತ ಅಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಘಟನೆ ವಿಚಿತ್ರ ಎನಿಸಿದರೂ ಕೂಡ ಭಯಾನಕವಾಗಿದೆ. ಅಲ್ಲದೇ ಗ್ರಹಚಾರ ಕೆಟ್ಟರೆ ಹೇಗೆ ಬೇಕಾದರು ಮನುಷ್ಯನ ಜೀವನ ಕೊನೆಗೊಳ್ಳಬಹುದು ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ.

Strange incident-man died: A dog shot and killed its owner

Comments are closed.