- ಭಾಗ್ಯ ದಿವಾಣ
ಕೆಜಿಎಫ್ ಚಿತ್ರ ಸಿನಿ ಇಂಡಸ್ಟ್ರಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದೇ, ಕೆಜಿಎಫ್ ಚಾಪ್ಟರ್ 2 ಅದ್ಯಾವಾಗ ತೆರೆ ಮೇಲೆ ಬರುತ್ತೋ ಅಂತ ಅಭಿಮಾನಿಗಳು ಕಾತುರದಿಂದ ಕಾಯೋದಿಕ್ಕೆ ಶುರುಮಾಡಿದ್ದಾರೆ..ಅದಕ್ಕೆ ಸರಿಯಾಗಿ ಚಿತ್ರತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದು, ಸದ್ಯ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಚಿತ್ರತಂಡವು ಉಡುಪಿ ಮಲ್ಪೆ ಬೀಜ್ ನಲ್ಲಿ ಚಿತ್ರೀಕರಣ ಮುಗಿಸಿದ್ದು, ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಹೈದ್ರಾಬಾದ್ ಸೇರಿದ್ದಾಗಿದೆ. ಹಾಗಾದ್ರೆ ಕೆಜಿಎಫ್ ಬಗೆಗೆ ಸದ್ಯದ ಸುದ್ದಿಯೇನು ಎಂಬ ಚಿತ್ರಾಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹೌದು, ಕೆಜಿಎಫ್ ಚಾಪ್ಟರ್ 2 ನಲ್ಲಿ ಸಂಜು ಬಾಬಾ ಅರ್ಧಕ್ಕೇ ನಟನೆಯಿಂದ ದೂರ ಸರಿದಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಸಂಜು ಬಾಬಾ ಈ ಚಿತ್ರವೆಂದಲ್ಲ, ಬಾಲಿವುಡ್ ನಲ್ಲೂ ಇನ್ಮುಂದೆ ಯಾವ ಚಿತ್ರದಲ್ಲೂ ನಟಿಸೋದಿಲ್ಲ ಎಂಬಂತೆ ಸಾಕಷ್ಟ ಗಾಳಿ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿತ್ತು.

ಸದ್ಯ ಇಂತಹ ಸುದ್ದಿಗಳಿಗೆ ಬ್ರೇಕ್ ಬಿದ್ದಿದ್ದು, ಕೆಜಿಎಫ್ ಚಾಪ್ಟರ್2 ನಲ್ಲಿ ಸಂಜಯದತ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಹೊರಟಿದ್ದಾರೆ.

ಉಳಿದಿರುವ ಶೂಟಿಂಗ್ ಭಾಗವನ್ನು ಸದ್ಯದಲ್ಲೇ ಪೂರ್ತಿಕರಿಸಲಿದ್ದಾರಂತೆ. ಹೀಗೆ ಖುದ್ದು ಸೋಶಿಯಲ್ ಮೀಡಿಯಾದಲ್ಲಿ ಸಂಜಯ್ ದತ್ ಹೇಳಿಕೊಂಡಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಸಂಜು ದಾದಾ, ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡಿದ್ದು, ಟ್ರೀಟ್ಮೆಂಟ್ ಬಳಿಕ ಮತ್ತೆ ಚಿತ್ರಕ್ಕಾಗಿ ಬಣ್ಣ ಹಚ್ಚಿಕೊಳ್ಳಲು ರೆಡಿಯಾಗಿದ್ದಾರಂತೆ.

ಬಾಲಿವುಡ್ ನ ಫೇಮಸ್ ಹೇರ್ ಸ್ಟೈಲಿಸ್ಟ್ ಒಬ್ಬರು ಸಂಜು ದಾದಾರ ವಿಡಿಯೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವೀಡಿಯೋದಲ್ಲಿ ತನಗೆ ಕ್ಯಾನ್ಸರ್ ಇರೋದನ್ನು ಒಪ್ಪಿಕೊಂಡಿರುವ ಸಂಜಯ್ ದತ್, ಇದರಿಂದ ಬೇಗನೆ ಗುಣಮುಖರಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಹೊಸ ಲುಕ್ ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಸಂಜಯ್, ಗೇರಿಂಗ್ ಅಪ್ ಫಾರ್ ಅಧೀರ, ಕೆಜಿಎಫ್ 2 ಎಂದು ಟ್ವೀಟ್ ಮಾಡಿದ್ದು ಅಭಿಮಾನಿಗಳ ನಿರೀಕ್ಷೆಗೆ ಇನ್ನಷ್ಟು ಹೆಚ್ಚಿದೆ.