ಚಿರು ಬರ್ತಡೇಗೆ ಮೇಘನಾ ಸ್ಪೆಶಲ್ ಗಿಫ್ಟ್…! ಪತಿಯ ನೆನಪಿನಲ್ಲಿ ಪತ್ನಿ ಬರೆದ ಸಾಲುಗಳೇನು ಗೊತ್ತಾ..?!

ಚಿರಂಜೀವಿ ಸರ್ಜಾ… ಇಂದು ತಮ್ಮ ಮಗುವಿನ ಆಗಮನದ ಖುಷಿ ಜೊತೆ ಗ್ರ್ಯಾಂಡ್ ಆಗಿ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಆದರೆ ವಿಧಿಯಾಟ ಅವರ ನೆನಪಿನಲ್ಲಿ ಹುಟ್ಟುಹಬ್ಬ ಆಚರಿಸುವ ಸ್ಥಿತಿ ಬಂದೊದಗಿದೆ.

ಇಂಥ ಸ್ಥಿತಿಯಲ್ಲೂ ಮೇಘನಾ ತನ್ನ ಪತಿಯ ನೆನಪುಗಳ ಜೊತೆ ಹುಟ್ಟುಹಬ್ಬಕ್ಕೆ ಶುಭಕೋರಿದ್ದು, ಇನ್ ಸ್ಟಾಗ್ರಾಂನಲ್ಲಿ ಮನಮುಟ್ಟುವ ಬರಹದ ಜೊತೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಪತಿಯಿಲ್ಲದೇ ಪ್ರತಿಕ್ಷಣ ನೋವಿನಲ್ಲಿ ನೊಂದು ಹೋಗುತ್ತಿರುವ ಮೇಘನಾ ಸರ್ಜಾ ಹುಟ್ಟಲಿರುವ ಮಗುವಿಗಾಗಿ ಎಲ್ಲ ನೋವುಗಳನ್ನು ನಲಿವಾಗಿ ಪರಿವರ್ತಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಅಕ್ಟೋಬರ್ 17 ಮೇಘನಾ ರಾಜ್ ಪಾಲಿಗೆ ಸಂಭ್ರಮದ ದಿನವಾಗಿತ್ತು. ಯಾಕೆಂದರೆ ಅಂದು ಚಿರು ಬರ್ತಡೇ. ಬಹುವರ್ಷಗಳಿಂದ ಚಿರು ಜೊತೆಯಲ್ಲೇ ಈ ದಿನವನ್ನು ಆಚರಿಸುತ್ತ ಬಂದ ಮೇಘನಾ ಮೊದಲ ಬಾರಿಗೆ ಚಿರು ಇಲ್ಲದೇ ಬರ್ತಡೇ ಆಚರಿಸಿಕೊಂಡಿದ್ದಾರೆ.

ಈ ಕೊರಗಿನಲ್ಲೇ ಇನ್ ಸ್ಟಾಂಗ್ರಾನಲ್ಲಿ ಪೋಸ್ಟ್ ಹಾಕಿರುವ ಮೇಘನಾ, ತಮ್ಮ ಸೀಮಂತದ ವಿಡಿಯೋ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ಹುಟ್ಟುವ ಮಗುವನ್ನು ಉದ್ದೇಶಿಸಿ, ನಿನ್ನ ತಂದೆ ಎಂದೂ ಒಂದು ಸಂಭ್ರಮ ಹಾಗೂ ಆಚರಣೆಯಾಗಿದ್ದರು ಎಂದು ಬರೆದುಕೊಂಡಿದ್ದಾರೆ.

https://www.instagram.com/p/CGZ7KioHJm3/

ಸೀಮಂತದ ವಿಡಿಯೋದಲ್ಲಿ ಎಲ್ಲೆಡೆ ಚಿರು ಪೋಟೋಗಳೇ ಇದ್ದು, ಬ್ಯಾಕ್ ಗ್ರೌಂಡ್ ನಲ್ಲಿ ಸ್ವಾಗತಂ ಕೃಷ್ಣ ಎಂಬ ಹಾಡು ಪ್ಲೇ ಆಗುತ್ತಿದೆ. ತುಂಬು ಗರ್ಭೀಣಿ ಮೇಘನಾ ರಾಜ್ ಮಗುವಿನ ನೀರಿಕ್ಷೆಯಲ್ಲಿದ್ದು,  ಚಿರು ಜನ್ಮದಿನವಾದ ಇಂದೇ ಚಿರು ಉತ್ತರಾಧಿಕಾರಿ ಭೂಮಿಗೆ ಬರಲಿದೆ ಎಂಬ  ಮಾತು ಚಿರು ಆಪ್ತವಲಯದಲ್ಲಿ ಕೇಳಿಬಂದಿದೆ.

https://www.instagram.com/p/CGbiUHbHONL/

Comments are closed.