ಕೆಜಿಎಫ್ ಹಾಗೂ ಕೆಜಿಎಫ್-2 ಸಿನಿಮಾದ ಯಶಸ್ಸಿನ ಬಳಿಕ ಸ್ಯಾಂಡಲ್ ವುಡ್ ಸ್ಟಾರ್ ಯಶ್ ನ್ಯಾಶನಲ್ ಸ್ಟಾರ್ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಯಶ್ ಕೆಜಿಎಫ್-2 ಸಿನಿಮಾ ಈಗಾಗಲೇ ಸಾವಿರ ಕೋಟಿ ಕ್ಲಬ್ ಸೇರಿದ್ದು, ಇನ್ನೂ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಈ ಮಧ್ಯೆ ಸಿನಿಮಾದ ಗೆಲುವು ಯಶ್ ಜನಪ್ರಿಯತೆಯನ್ನು ಮುಗಿಲೆತ್ತರಕ್ಕೆ ಏರಿಸಿದ್ದು, ಸೋಷಿಯಲ್ ಮೀಡಿಯಾ ಜನಪ್ರಿಯತೆಯಲ್ಲಿ ಯಶ್ (Yash Instagram ) ಹೊಸ ದಾಖಲೆ ಬರೆದಿದ್ದಾರೆ.

ಸೋಷಿಯಲ್ ಮೀಡಿಯಾ ಇನ್ ಸ್ಟಾಗ್ರಾಂನಲ್ಲಿ ಯಶ್ ಬರೋಬ್ಬರಿ 9 ಕೋಟಿ ಫಾಲೋವರ್ಸ್ ಹೊಂದೋ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಕೆಜಿಎಫ್ ಗೂ ಮುನ್ನ ಯಶ್ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೊಂದು ಸಕ್ರಿಯವಾಗಿರಲಿಲ್ಲ. ಆದರೆ ಕೆಜಿಎಫ್ ಹಾಗೂ ಕೆಜಿಎಫ್-2 ಸಿನಿಮಾದ ಹೊತ್ತಿಗೆ ಯಶ್ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ಆಕ್ಟಿವ್ ಆಗಿದ್ದು ಒಂದಾದ ಮೇಲೊಂದರಂತೆ ಸಿನಿಮಾ ಅಪ್ಡೇಟ್ ಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ಹಂಚಿಕೊಳ್ಳುತ್ತ ಬಂದಿದ್ದರು.
ಈಗ ಯಶ್ ಇನ್ ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಸತತ ಏರಿಕೆ ಕಂಡಿದ್ದು, ಬರೋಬ್ಬರಿ 9 ಮಿಲಿಯನ್ ಫಾಲೋವರ್ಸ್ ಗಳಿಸೋ ಮೂಲಕ ಸೌತ್ ಇಂಡಿಯಾ ಸ್ಟಾರ್ಸ್ ನಲ್ಲೇ ನಂಬರ್ ಒನ್ ಸ್ಥಾನಕ್ಕೆ ಏರಿದ್ದಾರೆ. ಕನ್ನಡದಲ್ಲಿ ಯಶ್ ರನ್ನು ಬಿಟ್ಟರೆ ಪುನೀತ್ ರಾಜ್ ಕುಮಾರ್ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದು, ಇದಾದ ಮೇಲೆ ಸುದೀಪ್ ಕೂಡ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಸುದೀಪ್ ನಂತರದ ಸ್ಥಾನದಲ್ಲಿ ದರ್ಶನ್ ಇದ್ದಾರೆ.

ಇತ್ತೀಚಿಗೆ ನಟ ಯಶ್ ತಮ್ಮನ್ನು ಪುತ್ರಿ ಐರಾ ಫನ್ನಿಯಾಗಿ ರಾಕ್ ರಾಕ್ ರಾಖಿ ಬಾಯ್ ಎಂದು ರೇಗಿಸುವ ವಿಡಿಯೋವನ್ನು ಹಂಚಿಕೊಂಡಿದ್ದರು. ಇದೇ ವಿಡಿಯೋ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದ್ದು ಲೈಕ್ಸ್ ಸುರಿಮಳೆಯೇ ಹರಿದು ಬಂದಿತ್ತು.
ಕೆಜಿಎಫ್-2 ಸಿನಿಮಾದಂತೆಯೇ ಈಗ ಯಶ್ ಇನ್ ಸ್ಟಾಗ್ರಾಂ ಕೂಡ ದಾಖಲೆ ಬರೆಯಲಾರಂಭಿಸಿದೆ. ಸದ್ಯ ಕೆಜಿಎಫ್-2 ಗೆಲುವಿನ ಖುಷಿಯಲ್ಲಿ ಗೋವಾದಲ್ಲಿ ಬಿಡು ಬಿಟ್ಟಿರೋ ನಟ ಯಶ್ ಇತ್ತೀಚಿಗಷ್ಟೇ ಗೋವಾದಲ್ಲಿ ಚಿತ್ರದ ಗೆಲುವನ್ನು ಸಂಭ್ರಮಿಸಿದ್ದು, ಪಾರ್ಟಿ ಮಾಡಿ ಪೋಟೋಸ್ ಹಂಚಿಕೊಂಡಿದ್ದರು. ಮಾತ್ರವಲ್ಲ ಗೋವಾದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸುದ್ದಿಯಾಗಿದ್ದರು. ಈಗ ಸದ್ಯ ಇನ್ ಸ್ಟಾಗ್ರಾಂ ನಲ್ಲಿ ಯಶ್ ಹವಾ ಜೋರಾಗಿದ್ದು ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಂಡು ಮಿಂಚುತ್ತಿದ್ದಾರೆ.
ಇದನ್ನೂ ಓದಿ : ಕಬ್ಜ ಸುಂದರಿ ಹಾಟ್ ಅವತಾರ : ಶ್ರೀಯಾ ಶರಣ್ ಬಿಕನಿ ಪೋಟೋ ವೈರಲ್
ಇದನ್ನೂ ಓದಿ : ಸ್ನೇಹಿತನೊಂದಿಗೆ ಫೋಟೋ ಶೇರ್ ಮಾಡಲು ಹೋಗಿ ಯರ್ರಾಬಿರ್ರಿ ಟ್ರೋಲ್ ಆದ ಮಂದಿರಾ ಬೇಡಿ
KGF Rocky boy Yash Instagram new Record