No Home Work : ಪೋಷಕರು, ಮಕ್ಕಳಿಗೆ ಸಿಹಿಸುದ್ದಿ: ಇನ್ಮುಂದೇ ನೋ ಹೋಂ ವರ್ಕ್

ಬೆಂಗಳೂರು : ರಾಜ್ಯದ ಶಾಲೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಿಂತ ಹೆಚ್ಚು ಚರ್ಚೆಯಾಗ್ತಿದ್ದ ವಿಚಾರ ಮಕ್ಕಳ ಹೋಂ ವರ್ಕ್ (No Home Work ). ಪುಟ್ಟ ಪುಟ್ಟ ಮಕ್ಕಳಿಗೂ ಶಾಲೆಯಲ್ಲಿ ಶಿಕ್ಷಕರು ನೀಡ್ತಿದ್ದ ಭಾರಿ ಹೋಂ ವರ್ಕ್ ಮಕ್ಕಳ‌ಪಾಲಿಗೆ ಹೊರೆಯಾಗ್ತಿದ್ದರೇ ಪೋಷಕರ ಪಾಲಿಗೆ ದೊಡ್ಡ ತಲೆನೋವಾಗಿತ್ತು. ಇದರಿಂದ ಮಕ್ಕಳ ಮಾನಸಿಕತೆಯ ಮೇಲೂ ಕೆಟ್ಟ ಪ್ರಭಾವ ಬೀರ್ತಿದೆ ಅನ್ನೋ ಮಾತು‌ಕೇಳಿಬಂದಿತ್ತು. ಈಗ ಇದಕ್ಕೊಂದು ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ.

ಹೌದು ಸದ್ಯದಲ್ಲೇ ರಾಜ್ಯದಲ್ಲಿ ಹೋಮ್‌ ವರ್ಕ್ ಪದ್ಧತಿಗೆ ಬ್ರೇಕ್ ಬೀಳಲಿದೆ. ಇನ್ಮುಂದೆ ಶಿಕ್ಷಕರು ಮಕ್ಕಳಿಗೆ ಹೋಮ್ ವರ್ಕ್ (No Home Work )ಕೊಡುವಂತಿಲ್ಲ ಎಂದು ಶಿಕ್ಷಣ ಇಲಾಖೆ ಆದೇಶಿಸಲು ಸಿದ್ಧತೆ ನಡೆಸಿದ್ದು, ಆದರೆ‌ ಇದು ಕೇವಲ ಎರಡನೇ ತರಗತಿವರೆಗಿನ ಮಕ್ಕಳಿಗೆ ಅನ್ನೋದು ಗಮನಿಸಬೇಕಾದ ಸಂಗತಿ. ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಂ ವರ್ಕ್ ನೀಡಬಾರದು ಎಂಬ ನಿಯಮ ಜಾರಿಗೆ ತರಲು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಸರ್ಕಾರಿ ಶಾಲೆಗಳಿಗೆ ಈ ವರುಷದಿಂದಲೇ ಜಾರಿಯಾಗಲಿದ್ದು,ನಲಿ- ಕಲಿ ರೀತಿ ಮಾತ್ರ ಪುಟ್ಟ ಮಕ್ಕಳಿಗೆ ಶಿಕ್ಷಣ ನೀಡಬೇಕು. 1, 2ನೇ ತರಗತಿ ಮಕ್ಕಳಿಗೆ ನೋ ಹೋಂ ವರ್ಕ್ ಎಂದು ಶಿಕ್ಷಣ ಇಲಾಖೆ ಹೇಳಿದೆ.

ಸರ್ಕಾರಿ ಶಾಲೆ ರೀತಿ ಖಾಸಗಿ ಶಾಲೆಗೂ ಈ ಆದೇಶ ಹೊರಡಿಸಲು ಶಿಕ್ಷಣ ಇಲಾಖೆ (Karnataka) ತಯಾರಿ ನಡೆಸಿದ್ದು, ಮದ್ರಾಸ್ ಹೈಕೋರ್ಟ್ ಹಾಗೂ ಕೇಂದ್ರ ಶಿಕ್ಷಣ ಸಚಿವರ ಹೇಳಿಕೆ ಹಿನ್ನೆಲೆ ರಾಜ್ಯದಲ್ಲಿ ಮಕ್ಕಳಿಗೆ ಹೋಮ್ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ನಿರ್ಧಾರ ಕೈಗೊಂಡಿದೆ. ಎನ್ ಇ ಪಿ (NEP) ಶಿಕ್ಷಣ ಕ್ರಮದ ಪ್ರಕಾರ ಮಕ್ಕಳಿಗೆ ಇನ್ಮುಂದೇ ಹೋಮ್ ವರ್ಕ್ ಇಲ್ಲ. ಆದರೆ ಖಾಸಗಿ ಶಾಲೆಯಲ್ಲಿ ಅತಿ ಹೆಚ್ಚು ಹೋಂ ವರ್ಕ್ ನೀಡುತ್ತಾರೆ ಎಂಬ ಆರೋಪವಿದೆ. ಅಲ್ಲದೇ ಇದನ್ನು ಕಂಪ್ಲೀಟ್ ಮಾಡುವಂತೆ ಮಕ್ಕಳಿಗೆ ಮನೆಯಲ್ಲಿಯೂ ಒತ್ತಡ ಹೇರಲಾಗುತ್ತೆ. ಖಾಸಗಿ ಶಾಲೆಗಳಲ್ಲಿ ಬಾಲ್ಯಾವಸ್ಥೆಯ ಮಕ್ಕಳಿಗೆ ವಿದ್ಯಾಭ್ಯಾಸದ ಒತ್ತಡ ಬೇಡ ಆಟವಾಡುತ್ತ, ಸಮಾಜದೊಂದಿಗೆ ಬೆರೆತು ತಿಳಿದುಕೊಳ್ಳುವ ವಯಸ್ಸು. ಇಂಥ ವಯಸ್ಸಿನಲ್ಲಿ ಕನಿಷ್ಟ 2ನೇ ತರಗತಿವರೆಗೆ ಹೋಂ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ಒಲವು ತೋರಿದೆ.

ಎನ್ ಇ ಪಿಯಲ್ಲಿ ಸ್ಪಷ್ಟವಾಗಿ 2ನೇ ತರಗತಿವರೆಗೆ ಮಕ್ಕಳಿಗೆ ಹೋಂ ವರ್ಕ್ ನೀಡುವಂತಿಲ್ಲ ಎಂದಿರೋದರಿಂದ ಈಗಾಗಲೇ ಸರಕಾರಿ ಶಾಲೆಗಳಲ್ಲಿ ನಲಿಕಲಿ ಪದ್ಧತಿ ಜಾರಿಯಲ್ಲಿದೆ.ಇನ್ ಇ ಪಿ‌ ಜಾರಿ ಮುನ್ನವೇ ಖಾಸಗಿ ಶಾಲೆಯಲ್ಲಿ ಹೋಂ ವರ್ಕ್ ಸ್ಥಗಿತಗೊಳಿಸುವ ಕುರಿತ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ವಿಚಾರ ವನ್ನು ಪೋಷಕರು ಸ್ವಾಗತಿಸಿದ್ದು ಸದ್ಯ ಈ ಆದೇಶದಿಂದಲಾದರೂ ಮಕ್ಕಳ ಶಾಲಾ‌ಒತ್ತಡ ನೀಗಲಿದೆ ಎಂದಿದ್ದಾರೆ.

ಇದನ್ನೂ ಓದಿ :  ರಾಜ್ಯದಲ್ಲಿ ಏರುತ್ತಲೇ ಇದೆ ತಾಪಮಾನ : ಶಾಲಾರಂಭ ಮುಂದೂಡಿಕೆ ಸಾಧ್ಯತೆ

ಇದನ್ನೂ ಓದಿ : ಬಿಸಿ ಅಲೆ, ಕೋವಿಡ್‌ ಪ್ರಕರಣ ಹೆಚ್ಚಳ : CBSEಯಿಂದ ಹೊಸ ಮಾರ್ಗಸೂಚಿ ಪ್ರಕಟ

Good News for Students and Parents No Home Work for students

Comments are closed.