KGF Song Controversy : ಕಾಂತಾರ ಸಿನಿಮಾದ ಮ್ಯೂಸಿಕ್ ಹಕ್ಕುಸ್ವಾಮ್ಯದ ಸಮಸ್ಯೆ ಎದುರಿಸುತ್ತಿರುವಾಗಲೇ, ಕಾಂಗ್ರೆಸ್ ನ ಬಹುಮಹತ್ವದ ಭಾರತ ಜೋಡೋ ಯಾತ್ರೆಗೂ ಇಂತಹುದೇ ಸಂಕಟ ಎದುರಾಗಿದೆ. ಭಾಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಭಾರತ ಜೋಡೋ ಯಾತ್ರೆಯ ವೀಡಿಯೋಗಳಿಗೆ ಹಕ್ಕುಸ್ವಾಮ್ಯದ ಶಾಕ್ ಎದುರಾಗಿದ್ದು, ಹೊಂಬಾಳೆ ಫಿಲ್ಮ್ಸ್ ನ ಕೆಜಿಎಫ್ ಸಿನಿಮಾದ ಹಾಡು(KGF Song Controversy) ಬಳಕೆಗಾಗಿ ಎಫ್ ಆಯ್ ಅರ್ ದಾಖಲಾಗಿದೆ.
ಭಾರತ ಜೋಡೋ ಯಾತ್ರೆಯ ವಿಡಿಯೋಗಾಗಿ ಕೆಜಿಎಫ್ ನ ಮ್ಯೂಸಿಕ್ ಬಳಸಿರೋ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಎಂಅರ್ ಟಿ ಸಂಸ್ಥೆಯು ಕಾನೂನು ಸಮರಕ್ಕೆ ಮುಂದಾಗಿದೆ. ಸಂಸ್ಥೆಯ ಅನುಮತಿ ಪಡೆಯದೇ ಮ್ಯೂಸಿಕ್ (KGF Song Controversy)ಬಳಕೆಗಾಗಿ ಕಾನೂನು ಸಮರಕ್ಕೆ ಮುಂದಾಗಿದೆ. MRT ಸಂಸ್ಥೆಯ ಅನುಮತಿ ಪಡೆಯದೇ ಹಾಡನ್ನು ಭಾರತ ಜೋಡೋ ವಿಡಿಯೋ ಎಡಿಟ್ ಗೆ ಬಳಸಿರೋದಿಕ್ಕೆ ಭಾರತ ಜೋಡೋ ಯಾತ್ರೆಯ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಹಾಗೂ ಭಾರತ ಜೋಡೋ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರೋ ಮಾಜಿ ಸಚಿವ ಜೈರಾಂ ರಮೇಶ್ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ : Actress Bipasha Basu : ಬೇಬಿ ಬಂಪ್ ಪೋಟೋ ಶೂಟ್ ನಲ್ಲೂ ಕಿಚ್ಚು ಹಚ್ಚಿದ ನಟಿ ಬಿಪಾಶಾ ಬಸು
ಕಾಂಗ್ರೆಸ್ ವಿರುದ್ಧ ಎಂಆರ್ ಟಿ ಸಂಸ್ಥೆಯು ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ರಾಹುಲ್ ಗಾಂಧಿ ಹಾಗೂ ಇತರರ ಮೇಲೆ ಯಶ್ವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಜಿಎಫ್ ಸಿನಿಮಾದ ಸುಲ್ತಾನಾ ಹಾಡನ್ನು ಭಾರತ ಜೋಡೋ ವಿಡಿಯೋ ಎಡಿಟಿಂಗ್ ಗೆ ಬಳಸಲಾಗಿತ್ತು. ದೇಶಾದ್ಯಂತ ನಡೆದ ಭಾರತ ಜೋಡೋ ಯಾತ್ರೆಯಲ್ಲಿ ಆ ರಾಜ್ಯದ ನಾಯಕರು ಪಾಲ್ಗೊಂಡಿದ್ದರು. ಹಿಂದಿ ಭಾಷೆಯಲ್ಲಿ ಸಿದ್ಧವಾದ ವಿಡಿಯೋಗಳಿಗೆ ಸುಲ್ತಾನಾ ಹಾಡು ಬಳಸಲಾಗಿತ್ತು.
ಇದನ್ನೂ ಓದಿ : Actress Bipasha Basu : ಬೇಬಿ ಬಂಪ್ ಪೋಟೋ ಶೂಟ್ ನಲ್ಲೂ ಕಿಚ್ಚು ಹಚ್ಚಿದ ನಟಿ ಬಿಪಾಶಾ ಬಸು (newsnext.live)
ಈ ಹಾಡುಗಳನ್ನು ಕಾಂಗ್ರೆಸ್ ನ ಅಧಿಕೃತ ಸೋಷಿಯಲ್ ಮೀಡಿಯಾ ಪೇಸ್ ಗಳಾದ ಟ್ವಿಟರ್, ಪೇಸ್ ಬುಕ್ ಹಾಗೂ ಯೂಟ್ಯೂಬ್ ಗಳಲ್ಲೂ ಬಳಸಲಾಗಿತ್ತು. ಆದರೆ ಇದಕ್ಕೆ ಅನುಮತಿ ಪಡೆಯದ ಕಾರಣಕ್ಕೆ ಎಂಆರ್ ಟಿ ಸಂಸ್ಥೆ ಈಗ ಕಾನೂನು ಸಮರಕ್ಕೆ ಸಿದ್ಧವಾಗಿದೆ. ಸುಲ್ತಾನಾ ಕೆಜಿಎಫ್ ಸಿನಿಮಾದ ನಾಯಕನನ್ನು ಬಣ್ಣಿಸುವ ಹಾಡಾಗಿದ್ದು ಸಿನಿಮಾದ ಗೆಲುವಿಗೆ ಈ ಹಾಡು ಕಾರಣ ಎಂಬ ಮಾತಿದೆ. ಇಂಥ ಹಾಡನ್ನು ಅನುಮತಿ ಪಡೆಯದೇ ಬಳಸಿದ್ದಕ್ಕೇ ಈಗ ಕಾಂಗ್ರೆಸ್ ಭಾರತ ಜೋಡೋ ಯಾತ್ರೆ ವಿವಾದಕ್ಕೆ ಗುರಿಯಾಗಿದೆ. ರಾಹುಲ್ ಗಾಂಧಿಯನ್ನು ವೈಭಕರಿಸಲು ಹೋದ ಸೋಷಿಯಲ್ ಮೀಡಿಯಾ ತಂಡ ಈಗ ಸಂಕಷ್ಟ ಕ್ಕೆ ಸಿಲುಕಿದೆ.
KGF Song Controversy: While Kantara is facing the issue of music copyright, Congress’s Bharat Jodo Yatra is facing a similar problem. Bhastri’s Congress party’s Bharat Jodo Yatra videos face copyright shock, FIR filed for use of Hombale Films’ KGF Song Controversy