Mayank Agarwal – Ashita Sood : ಮೊದಲ ಮಗುವಿನ ನಿರೀಕ್ಷೆಯಲ್ಲಿ ಮಯಾಂಕ್ ಅಗರ್ವಾಲ್-ಆಶಿತಾ ಸೂದ್ ದಂಪತಿ

ಬೆಂಗಳೂರು: (Mayank Agarwal – Ashita Sood)ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್’ಮನ್, ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಯಾಂಕ್ ಅವರ ಪತ್ನಿ ಆಶಿತಾ ಸೂದ್ ಅಗರ್ವಾಲ್ (Ashita Sood) ಗರ್ಭಿಣಿಯಾಗಿದ್ದು, ದಂಪತಿ ಮೊದಲ ಮಗುವನ್ನು ಎದುರು ನೋಡುತ್ತಿದ್ದಾರೆ

ಕರ್ನಾಟಕದ ಸ್ಟಾರ್ ಕ್ರಿಕೆಟಿಗ, ಮಯಾಂಕ್ ಅಗರ್ವಾಲ್ ಮತ್ತು ಆಶಿತಾ ಸೂದ್ 2018ರ ಜೂನ್ 4ರಂದು ಮದುವೆಯಾಗಿದ್ದರು. ದೀರ್ಘಕಾಲದ ಗೆಳೆಯ-ಗೆಳತಿಯರಾಗಿದ್ದ ಮಯಾಂಕ್ ಮತ್ತು ಆಶಿತಾ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಆಶಿತಾ ಸೂದ್, ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಪುತ್ರಿ. 2018ರ ಜೂನ್ 31ರಂದು ಇಂಗ್ಲೆಂಡ್’ನ ಲಂಡನ್’ನಲ್ಲಿರುವ ಗಗನಚುಂಬಿ ಲಂಡನ್ ಐ (London Eye) ಕಟ್ಟಡದ ತುತ್ತ ತುದಿಯಲ್ಲಿ ಮಯಾಂಕ್ ಅಗರ್ವಾಲ್, ಆಶಿತಾ ಸೂದ್ ಅವರಿಗೆ ನಿಶ್ಚಿತಾರ್ಥದ ಉಂಗುರ ತೊಡಿಸಿದ್ದರು.

31 ವರ್ಷದ ಮಯಾಂಕ್ ಅಗರ್ವಾಲ್ ಭಾರತ ಪರ 21 ಟೆಸ್ಟ್ ಪಂದ್ಯಗಳನ್ನಾಡಿದ್ದು, 6 ಶತಕಗಳ ಸಹಿತ 1488 ರನ್ ಗಳಿಸಿದ್ದಾರೆ. ಇತ್ತೀಚೆಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ಮಯಾಂಕ್ ದೇಶೀಯ ಕ್ರಿಕೆಟ್’ಗೆ ಮರಳಿದ್ದು ಕರ್ನಾಟಕ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಮಯಾಂಕ್ ನಾಯಕತ್ವದಲ್ಲಿ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.

ಇದನ್ನೂ ಓದಿ : Anand Mahindra Raghavindra DVGI : ಟೀಮ್ ಇಂಡಿಯಾ ಆಟಗಾರರ Shoes ಕ್ಲೀನ್ ಮಾಡಿದ ಕನ್ನಡಿಗನ ಬಗ್ಗೆ ಮಹೀಂದ್ರಾ ಚೇರ್ಮನ್ ಟ್ವೀಟ್

ಇದನ್ನೂ ಓದಿ : Virat Kohli birthday : ಕಿಂಗ್ ಕೊಹ್ಲಿಗೆ ಒಂದು ದಿನ ಮೊದಲೇ ಹುಟ್ಟುಹಬ್ಬದ ಶುಭಾಶಯ ಹೇಳಿದ ಪಾಕ್ ಬೌಲರ್

ಇದನ್ನೂ ಓದಿ : New Cricket Stadiums Karnataka : ಪುತ್ತೂರು, ಬಳ್ಳಾರಿಯಲ್ಲಿ ನಿರ್ಮಾಣವಾಗಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ

ಕರ್ನಾಟಕ ತಂಡದ ನಾಯತಕ್ವ ಸಿಕ್ಕಿದ್ರೂ, ಐಪಿಎಲ್’ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಪಟ್ಟ ಮಯಾಂಕ್ ಅಗರ್ವಾಲ್ ಅವರ ಕೈ ತಪ್ಪಿದೆ. ಮಯಾಂಕ್ ಬದಲು ಟೀಮ್ ಇಂಡಿಯಾದ ಅನುಭವಿ ಎಡಗೈ ಓಪನರ್ ಶಿಖರ್ ಧವನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡದ ಹೊಸ ನಾಯಕನನ್ನಾಗಿ ನೇಮಕ ಮಾಡಲಾಗಿದೆ. 2022ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡಡ ಮಯಾಂಕ್ ಅಗರ್ವಾಲ್ ಅವರ ನಾಯಕತ್ವದಲ್ಲಿ ಆಡಿದ 13 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿತ್ತು. ಆದರೆ ಪ್ಲೇ ಆಫ್ ತಲುವಪಲ್ಲಿ ವಿಫಲವಾಗಿತ್ತು.

Mayank Agarwal-Ashita Sood are expecting their first child

Comments are closed.