ಭಾನುವಾರ, ಏಪ್ರಿಲ್ 27, 2025
HomeCinemaKGF vs Vikrant Rona : ಕೆಜಿಎಫ್ ಮೀರಿಸುತ್ತಾ ವಿಕ್ರಾಂತ್ ರೋಣ: ಪ್ರಶ್ನೆಗೆ ಸುದೀಪ್ ಕೊಟ್ಟ...

KGF vs Vikrant Rona : ಕೆಜಿಎಫ್ ಮೀರಿಸುತ್ತಾ ವಿಕ್ರಾಂತ್ ರೋಣ: ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರವೇನು ಗೊತ್ತಾ?!

- Advertisement -

ಯಾವುದೇ ಭಾಷೆಯ ಸಿನಿಮಾ ಇರಲಿ. ಒಂದೊಳ್ಳೇ ಸಿನಿಮಾ ತೆರೆಗೆ ಬಂದು ಹಿಟ್ ಆದ್ರೆ ಮುಂಬರುವ ಎಲ್ಲಾ ಸಿನಿಮಾಗಳನ್ನು ಆ ಸಿನಿಮಾದ ಜೊತೆಗೆ ಹೋಲಿಸೋದು ಕಾಮನ್. ಈಗ ಸುದೀಪ್ ಬಹುನೀರಿಕ್ಷಿತ ಚಿತ್ರ ವಿಕ್ರಾಂತ್ ರೋಣಕ್ಕೂ ಅದೇ ಸ್ಥಿತಿ ಎದುರಾಗಿದ್ದು, ವಿಕ್ರಾಂತ್ ರೋಣವನ್ನು ಕೆಜಿಎಫ್ ಗೆ (KGF vs Vikrant Rona) ಹೋಲಿಸಲಾಗುತ್ತಿದೆ. ಸುದೀಪ್ ಸಂದರ್ಶನವೊಂದರಲ್ಲಿ ಈ ಬಗ್ಗೆ ನೇರ ಪ್ರಶ್ನೆ ಕೇಳಲಾಗಿದ್ದು ಅದಕ್ಕೆ ಅಷ್ಟೇ ಸಮಾಧಾನ ದಲ್ಲಿ ನಟ ಸುದೀಪ್ (Sudeep) ಸಮಂಜಸ ಉತ್ತರ ನೀಡಿದ್ದಾರೆ.

ಫೆ.24 ರಂದು ಸುದೀಪ್ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣ ತೆರೆಗೆ ಬರುತ್ತಿದೆ. ಹೀಗಾಗಿ ನಟ ಸುದೀಪ್ ವಿಕ್ರಾಂತ್ ರೋಣ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮಾಧ್ಯಮ ಸಂದರ್ಶನವೊಂದರಲ್ಲಿ ಸುದೀಪ್ ಗೆ ವಿಕ್ರಾಂತ್ ರೋಣ ಕೆಜಿಎಫ್ ಮೀರಿಸುತ್ತಾ ಎಂದು ಪ್ರಶ್ನಿಸಲಾಗಿದೆ. ಈ ಪ್ರಶ್ನೆಗೆ ಅತ್ಯಂತ ಸಮಂಜಸವಾಗಿ ಉತ್ತರಿಸಿದ ನಟ ಸುದೀಪ, ಯಾರೊಬ್ಬರು ಬೇರೆಯವರ ಸಿನಿಮಾವನ್ನು ಮೀರಿಸಬೇಕೆಂದು ಸಿನಿಮಾ ಮಾಡೋದಿಲ್ಲ. ಭಾರತೀಯ ಸಿನಿಮಾ ರಂಗದಲ್ಲಿ ಅವರು ತಮ್ಮ ಶ್ರಮ ಹಾಗೂ ಪ್ರತಿಭೆಯಿಂದ ಒಂದು ಸ್ಥಾನ ಪಡೆದಿದ್ದಾರೆ.

ಹೀಗಾಗಿ ಅವರನ್ನು ಮೀರಿಸಬೇಕು ಎಂದುಕೊಳ್ಳುವುದು ನಿಮ್ಮ ಶ್ರಮದ, ಪ್ರತಿಭೆಯ ಸರಿಯಾದ ಪ್ರತಿಫಲ ಎಲ್ಲ ಎನ್ನಿಸುತ್ತದೆ. ನಮ್ಮ ಶ್ರಮವನ್ನು ,ಕರ್ತವ್ಯವನ್ನು ನಾನು ಮಾಡಬೇಕು. ಅವರ ಕೆಲಸವನ್ನು ಅವರು ಮಾಡಿದ್ದಾರೆ ಎಂದಿದ್ದಾರೆ. ಅಲ್ಲದೇ ಕೆಜಿಎಫ್ ಬಗ್ಗೆ ಕೇಳಲಾದ ಪ್ರಶ್ನೆಗೂ ತಾಳ್ಮೆಯಿಂದ ಉತ್ತರಿಸಿದ ಸುದೀಪ್, ಕೆಜಿಎಫ್ ಕರ್ನಾಟಕದ ಸಿನಿಮಾ ರಂಗದಲ್ಲಿ ಏನಾದ್ರು ಬದಲಾವಣೆ ತಂದಿದ್ಯಾ ಎಂಬುದಕ್ಕೆ ಹೌದು ಎಂದಿರುವ ಸುದೀಪ್, ಒಂದು ಒಳ್ಳೆಯ ಕತೆಯನ್ನು ಇಟ್ಟುಕೊಂಡು ಹೆಚ್ಚು ಜನರಿಗೆ ತೋರಿಸುವ ಪ್ರಯತ್ನವನ್ನು ಜನರು ಮೆಚ್ಚುತ್ತಾರೆ ಎಂಬುದನ್ನು ಕೆಜಿಎಫ್ ತೋರಿಸಿಕೊಟ್ಟಿದೆ ಎಂದು ಹೊಗಳಿದ್ದಾರೆ.

ಮಾತ್ರವಲ್ಲ ಕೇವಲ ಹಣ ಖರ್ಚು ಮಾಡಿದ್ರೇ ಲಾಭ ವಿಲ್ಲ‌. ಅವರ ಪ್ರಯತ್ನ,ಯೋಜನೆ ಚೆನ್ನಾಗಿತ್ತು. ಅಪ್ರೋಚ್ ಸರಿಯಾಗಿತ್ತು. ಹೀಗಾಗಿ ಅವರು ಗೆದ್ದಿದ್ದಾರೆ ಎಂದು ಸುದೀಪ್ ಕೆಜಿಎಫ್ ಸಿನಿಮಾ ತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನಾವು ಕೆಜಿಎಫ್ ಜೊತೆ ಸ್ಪರ್ಧೆಗೆ ನಿಂತಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಿರುವ ಸುದೀಪ್, ನಾವು ಕೆಜಿಎಫ್ ಬಗ್ಗೆ ಹೆಮ್ಮೆ ಪಡುತ್ತೇವೆ. ಅವರು ಕೂಡ ವಿಕ್ರಾಂತ್ ರೋಣ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತೇವೆ ಎಂದು ಸುದೀಪ್ ಹೇಳಿದ್ದಾರೆ.

ಸುದೀಪ್ ವೃತ್ತಿಬದುಕಿನ ಮಹತ್ವದ ಸಿನಿಮಾ ಎನ್ನಿಸಿರುವ ವಿಕ್ರಾಂತ್ ರೋಣ ಫೆ.೨೪ ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದ್ದು ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬಂದಿದೆ. 10 ಭಾಷೆಯಲ್ಲಿ ಮೂಡಿ ಬರ್ತಿರೋ ಸಿನಿಮಾ ತ್ರಿಡಿ ತಂತ್ರಜ್ಞಾನದಲ್ಲೂ ರಿಲೀಸ್ ಆಗ್ತಿದೆ.

ಇದನ್ನೂ ಓದಿ :‌ ಬಿಡುಗಡೆಗೂ ಮುನ್ನ ಮತ್ತೊಂದು ದಾಖಲೆ ಬರೆದ ಕೆಜಿಎಫ್-2: ಟೀಸರ್ ವೀವ್ಸ್ ಎಷ್ಟು ಗೊತ್ತಾ?

ಇದನ್ನೂ ಓದಿ : ಕಿಚ್ಚ ಸುದೀಪ್​​ರ ವಿಕ್ರಾಂತ್​ ರೋಣ ರಿಲೀಸ್​​​ಗೆ ಮುಹೂರ್ತ ಫಿಕ್ಸ್​ ಮಾಡಿದ ಚಿತ್ರತಂಡ..!

(KGF vs Vikrant Rona Overtaking KGF, You know what Sudeep gave to the question)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular