Blast in Ludhiana court : ಲೂಧಿಯಾನ ಕೋರ್ಟ್​ನಲ್ಲಿ ಬ್ಲಾಸ್ಟ್​: ಇಬ್ಬರು ಸಾವು, ನಾಲ್ವರಿಗೆ ಗಾಯ

Blast in Ludhiana court :ಪಂಜಾಬ್​​ನ ಲೂಧಿಯಾನ ನ್ಯಾಯಾಲಯದಲ್ಲಿ ಮಧ್ಯಾಹ್ನ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದಾಗಿ ಇಬ್ಬರು ಸಾವನ್ನಪ್ಪಿದ್ದರೆ ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಮಧ್ಯಾಹ್ನ 12:22ರ ಸುಮಾರಿಗೆ ಲುಧಿಯಾನದ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯದ ಸಂಕೀರ್ಣದ ಎರಡನೇ ಮಹಡಿಯಲ್ಲಿರುವ ವಾಶ್​ ರೂಮಿನಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸಂಪೂರ್ಣ ನ್ಯಾಯಾಲಯವನ್ನು ಸುತ್ತುವರಿದಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯವನ್ನು ನಡೆಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ನಡುವೆಯೇ ಸ್ಫೋಟದ ಸಂಬಂಧ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದರು.

ಈ ನಡುವೆ ಪಂಜಾಬ್​ನಾದ್ಯಂತ ಹೈ ಅಲರ್ಟ್ ಘೋಷಣೆಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್, ಪಂಜಾಬ್​ ನ್ಯಾಯಾಲಯ ಸಂಕೀರ್ಣದಲ್ಲಿ ಭದ್ರತೆ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನ್ಯಾಯಾಲಯದಲ್ಲಿ ಸ್ಫೋಟದ ಸದ್ದು ಕೇಳುತ್ತಿದ್ದಂತೆಯೇ ನ್ಯಾಯಾಲಯದ ಹೊದರೆ ಜನಸಮೂಹವೇ ಜಮಾಯಿಸಿದೆ. ಆರು ಅಂತಸ್ತಿನ ಕಟ್ಟಡದಿಂದ ಹೊಗೆಯಾಡುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಇಂದು ವಕೀಲರ ಮುಷ್ಕರ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸ್ಫೋಟದ ವೇಳೆಯಲ್ಲಿ ನ್ಯಾಯಾಲಯದಲ್ಲಿ ಬೆರಳೆಣಿಕೆಯಷ್ಟು ಜನರು ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಂಬ್​ ಸ್ಫೋಟದಿಂದಾಗಿ ವಾಶ್​ರೂಮ್​ನ ಗೋಡೆಗಳು ನೆಲಸಮವಾಗಿವೆ. ಕಿಟಕಿಯ ಗಾಜುಗಳು ಒಡೆದು ಹೋಗಿವೆ. ಈ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಸ್ಫೋಟಕ್ಕೆ ನಿಖರ ಕಾರಣ ಏನೆಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇದನ್ನು ಓದಿ : celebrates purchase of smartphone : ಮೊಬೈಲ್​ ಖರೀದಿಸಿದ ಖುಷಿಗೆ ಈ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ ಶಾಕ್​ ಆಗ್ತೀರಾ..!

ಇದನ್ನೂ ಓದಿ : Women Jump Auto : ಆಟೋ ಚಾಲಕನಿಂದ ಕಿಡ್ನಾಪ್‌ ಯತ್ನ : ಚಲಿಸುತ್ತಿದ್ದ ಆಟೋದಿಂದ ಜಿಗಿದ ಮಹಿಳೆ

ಇದನ್ನೂ ಓದಿ : Delta Omicron Alert : ಡೆಲ್ಟಾಕ್ಕಿಂತ 3 ಪಟ್ಟು ಅಪಾಯಕಾರಿ ಓಮಿಕ್ರಾನ್‌ : ಶಾಕ್‌ ಕೊಟ್ಟ ಆರೋಗ್ಯ ಇಲಾಖೆ, ಕಠಿಣ ಕ್ರಮಕ್ಕೆ ಕೇಂದ್ರದ ಸೂಚನೆ

ಇದನ್ನೂ ಓದಿ : New deadly variant Delmicron : ಓಮೈಕ್ರಾನ್‌ ಬೆನ್ನಲ್ಲೇ ಮಾರಣಾಂತಿಕ ಡೆಲ್ಮಿಕ್ರಾನ್ ಪತ್ತೆ : ಏನಿದರ ರೋಗ ಲಕ್ಷಣ

Blast in Ludhiana court complex, 2 dead & 4 injured; Punjab on high alert

Comments are closed.