ಸ್ಯಾಂಡಲ್ ವುಡ್ ನಿಂದ ಪಯಣ ಆರಂಭಿಸಿ ಬಹುಭಾಷಾ ನಟನಾಗಿ ಬೆಳೆದು ನಿಂತಿರೋ ಕಿಚ್ಚ ಸುದೀಪ್ (Kiccha Sudeep Emotional talk) ಸದ್ಯ ವಿಕ್ರಾಂತ್ ರೋಣ ರಿಲೀಸ್ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ಹಾಡು ಹಾಗೂ ಟ್ರೇಲರ್ ಮೂಲಕ ಸದ್ದು ಮಾಡಿರೋ ವಿಕ್ರಾಂತ್ ರೋಣ ಸಿನಿಮಾಕ್ಕಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಈ ಮಧ್ಯೆ ವಿಕ್ರಾಂತ್ ರೋಣ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಸುದೀಪ್ ಈ ಸಿನಿಮಾ ತಮ್ಮ ಪಾಲಿಗೆ ಎಷ್ಟು ಮುಖ್ಯ ಎಂಬುದನ್ನು ಬಹಿರಂಗಗೊಳಿಸಿದ್ದಾರೆ.
ಹೌದು ವಿಕ್ರಾಂತ್ ರೋಣ ತೆರೆಗೆ ಬರಲಿರೋ ಸುದೀಪ್ ರ ಕನಸಿನ ಕೂಸು. ಫ್ಯಾನ್ ಇಂಡಿಯಾ ಸಿನಿಮಾವಾಗಿರೋ ವಿಕ್ರಾಂತ್ ರೋಣಗಾಗಿ ಸುದೀಪ್ ಸಾಕಷ್ಟು ಶ್ರಮವಹಿಸಿದ್ದಾರೆ. ಮೊದಲು ಫ್ಯಾಂಟಮ್ ಎಂದಿದ್ದ ಈ ಸಿನಿಮಾದ ಟೈಟಲ್ ನ್ನು ಬುರ್ಜಾ ಖಲೀಫಾ ದ ಮೇಲೆ ವಿಕ್ರಾಂತ್ ರೋಣ ಎಂದು ಬದಲಾಯಿಸಲಾಗಿತ್ತು. ಸದ್ಯ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಮೊನ್ನೆ ಮೊನ್ನೆಯಷ್ಟೇ ರಿಲೀಸ್ ಆಗಿರೋ ಟ್ರೇಲರ್ ಕೂಡ ಕೋಟಿಗಟ್ಟಲೇ ವೀವ್ಸ್ ಪಡೆದುಕೊಂಡು ಹೊಸ ದಾಖಲೆ ಬರೆಯುತ್ತಿದೆ. ಈ ಮಧ್ಯೆ ನಟ ಸುದೀಪ್ ತಮ್ಮ ಬಹುನೀರಿಕ್ಷಿತ ಪ್ಯಾನ್ ಇಂಡಿಯಾ ಸಿನಿಮಾದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ.
ಸಿನಿಮಾ ಕುರಿತು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಸುದೀಪ್ ತಮ್ಮ ತ್ರೀಡಿ ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಅವರನ್ನು ಪ್ರಶ್ನಿಸಿದ ಆ್ಯಂಕರ್, ಸುದೀಪ್ ಸರ್ ನೀವು ಬಹುಭಾಷಾ ನಟರಾಗಿ ಬೆಳೆದಿದ್ದೀರಿ. ಆದರೂ ನೀವೆ ಯಾಕೆ ಬೇರೆ ಬೇರೆ ಭಾಷೆಗಳಲ್ಲೂ ಪ್ರಮೋಶನ್ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಬಯಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ತುಂಬಾ ಅರ್ಥಪೂರ್ಣ ಉತ್ತರ ನೀಡಿದ ನಟ ಸುದೀಪ್ , ನನಗೂ ಒಬ್ಬ ಮಗಳಿದ್ದಾಳೆ. ಅವಳನ್ನು ಕಾಲೇಜ್ ಗೆ ಎಡ್ಮಿಶನ್ ಮಾಡಿಸಲು ನಾನು ಹೋಗಬೇಕಾಗುತ್ತದೆ. ಆಗ ನಾನು ಯಾರು ಗೊತ್ತಾ ಎಂದು ಹೇಳಲು ಆಗೋದಿಲ್ಲ. ಒಬ್ಬ ಪೋಷಕನಾಗಿ ಅದು ನನ್ನ ಜವಾಬ್ದಾರಿ. ನನ್ನಮಗಳಿಗೂ ಈ ಸಿನಿಮಾಗೂ ಏನು ವ್ಯತ್ಯಾಸ ? ನನ್ನ ಈ ಸಿನಿಮಾ ಹೊಸತು. ವಿಕ್ರಾಂತ್ ರೋಣ ನನ್ನ ಮಗು ಇದ್ದಂತೆ. ಈ ಚಿತ್ರದ ಯೋಗ್ಯತೆ ಹೀಗಿದೆ. ನೋಡಿ ಬೆಂಬಲಿಸಿ ಅಂತಾ ಹೇಳೋದು ಕೂಡ ನನ್ನ ಕರ್ತವ್ಯ ಎಂದಿದ್ದಾರೆ.
ಸಿನಿಮಾದ ಬಗ್ಗೆ ಸುದೀಪ್ ನೀಡಿದ ಹೇಳಿಕೆ ಈಗ ಸಖತ್ ವೈರಲ್ ಆಗಿದೆ. ಸುದೀಪ್ ಅಭಿಮಾನಿಗಳು ಕಳೆದ ಎರಡು ಮೂರು ವರ್ಷದಿಂದ ತಮ್ಮನೆಚ್ಚಿನ ನಟನನ್ನು ಸ್ಕ್ರಿನ್ ಮೇಲೆ ನೋಡೋಕೆ ಕಾದಿದ್ದು, ಜುಲೈ 28 ರಂದು ಸಿನಿಮಾ ತೆರೆಗೆ ಬರಲಿದೆ.
ಇದನ್ನೂ ಓದಿ : Sara Annaiah Bikini Photoshoot : ಬಿಕನಿ ಅವತಾರದಲ್ಲಿ ಮಿಂಚಿದ ಕನ್ನಡತಿ ನಟಿ ಸಾರಾ ಅಣ್ಣಯ್ಯ
ಇದನ್ನೂ ಓದಿ : tamilnadu : ನನಗೊಂದು ಸಂಗಾತಿ ಹುಡುಕಿಕೊಡಿ ಎಂದು ಪೋಸ್ಟರ್ ಅಂಟಿಸಿದ ಯುವಕ : ನೆಟ್ಟಿಗರು ಶಾಕ್
kiccha Sudeep Emotional talk about Vikrant Rona