Daily Covid Count :ದೇಶದಲ್ಲಿ ದೈನಂದಿನ ಕೋವಿಡ್​ ಪ್ರಕರಣದಲ್ಲಿ ದಿಢೀರ್​ ಏರಿಕೆ 

ದೆಹಲಿ : Daily Covid Count, : ದೇಶದಲ್ಲಿ ಕೊರೊನಾ ವೈರಸ್​ ಹತೋಟಿಗೆ ಬಂದು ಎಂದುಕೊಳ್ಳುವಷ್ಟರಲ್ಲಿಯೇ ಕೋವಿಡ್​ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಹೀಗಾಗಿ ದೇಶದಲ್ಲಿ ಕೊರೊನಾ ನಾಲ್ಕನೇ ಅಲೆಯ ಭೀತಿ ಕೂಡ ಎದುರಾಗಿದೆ. ದೇಶದಲ್ಲಿ ಸೋಮವಾರಂದು ಕೊರೊನಾ ದೈನಂದಿನ ಪ್ರಕರಣದಲ್ಲಿ ಹಠಾತ್​ ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 17,073 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 4,34,07,046ಕ್ಕೆ ತಲುಪಿದೆ . ಭಾನುವಾರಕ್ಕೆ ಹೋಲಿಕೆ ಮಾಡಿದರೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬರೋಬ್ಬರಿ 45 ಪ್ರತಿಶತ ಏರಿಕೆ ಕಂಡಂತಾಗಿದೆ.

ಭಾನುವಾರದಂದು ದೇಶದಲ್ಲಿ 11,739 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿದ್ದವು. ಹಾಗೂ ಭಾನುವಾರದಂದು 25 ಕೋವಿಡ್​ ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿತ್ತು .

ಸೋಮವಾರದ ವೇಳೆಗೆ ದೇಶದಲ್ಲಿ 21 ಮಂದಿ ಕೋವಿಡ್​​ನಿಂದ ಮೃತಪಟ್ಟಿದ್ದು ಈ ಮೂಲಕ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಒಟ್ಟೂ ಸಂಖ್ಯೆ 5,25,020 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.


ಈ ಮೂಲಕ ದೇಶದಲ್ಲಿ ದೈನಂದಿನ ಪಾಸಿಟಿವಿಟಿ ದರವು ಶೇಕಡಾ 5.62 ಪ್ರತಿಶತವಾದರೆ ವಾರದ ಪಾಸಿಟಿವಿಟಿ ದರವು ಶೇಕಡಾ 3.39 ಪ್ರತಿಶತವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ದತ್ತಾಂಶದಲ್ಲಿ ತಿಳಿದುಬಂದಿದೆ.


ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆದವರ ಸಂಖ್ಯೆ 4,27,87,606 ಕ್ಕೆ ಏರಿಕೆ ಕಂಡಿದೆ. ಕೊರೊನಾ ಒಟ್ಟೂ ಪ್ರಕರಣದಲ್ಲಿ ಸಾವಿನ ಪ್ರಮಾಣವು ಶೇಕಡಾ 1.21 ಪ್ರತಿಶತದಷ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೇಳಿದೆ.


ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡಿರುವ ಮಾಹಿತಿಯ ಪ್ರಕಾರ ದೇಶಾದ್ಯಂತ ಇದುವರೆಗೆ 197.11 ಕೋಟಿ ಡೋಸ್​ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ.

ಇದನ್ನು ಓದಿ : Kapil Dev Gift Sudeep : ಕಿಚ್ಚನಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್.. ಗಿಫ್ಟ್ ನೋಡಿ ಸುದೀಪ್ ಕ್ಲೀನ್ ಬೌಲ್ಡ್

ಇದನ್ನೂ ಓದಿ : ಚಿನ್ನಸ್ವಾಮಿ ಮೈದಾನದಲ್ಲೇ ಸೋತಿದ್ದ ನಾಯಕ, ಅದೇ ಮೈದಾನದಲ್ಲಿ ರಣಜಿ ಟ್ರೋಫಿ ಎತ್ತಿ ಹಿಡಿದ !

India Sees 45% Jump In Daily Covid Count, 17,073 Fresh Cases

Comments are closed.