ಸಾಕಷ್ಟು ದಿನದಿಂದ ಚರ್ಚೆಯಲ್ಲಿದ್ದ ಅನೂಪ್ ಬಂಡಾರಿ ಮತ್ತು ಅಭಿನಯ ಚಕ್ರವರ್ತಿ ಕಾಂಬಿನೇಷನ್ ನ ಫ್ಯಾಂಟಮ್ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದೆ.

ಕಿಚ್ಚ ಸುದೀಪ್ ತಮ್ಮ ಪಾತ್ರದ ಬಗ್ಗೆ ನಾಯ್ಬಿಟ್ಟಿದ್ದು, ವಿಕ್ರಾಂತ್ ರೋಣ ಎಂಬ ಖಡಕ್ ಪಾತ್ರದಲ್ಲಿ ಮಿಂಚಲಿದ್ದಾರೆ.

ರಂಗ ಬಿಲ್ಲಾ ಬಾಷ ಚಿತ್ರ ಅನೌನ್ಸ್ ನಂತರ ಕಾರಣಾಂತರಗಳಿಂದ ಆ ಪ್ರಾಜೆಕ್ಟ್ ಬಿಟ್ಟು ಇದೀಗ ಫ್ಯಾಂಟಮ್ ನಲ್ಲಿ ತನ್ನ ತೊಡಗಿಸಿಕೊಂಡಿದ್ದಾರೆ ಅಭಿನಯ ಚಕ್ರವರ್ತಿ. ಚಿತ್ರೀಕರಣಕ್ಕೆ ಸಹ ಚಾಲನೆ ನೀಡಿದ್ದಾರೆ.

ರಂಗಿತರಂಗ, ರಾಜರಥ ನಂತರ ಅನೂಪ್ ಭಂಡಾರಿ ಅಭಿನಯ ಚಕ್ರವರ್ತಿಗೆ ಸಿನಿಮಾ ಮಾಡುತ್ತಿರೋದು ಸಹಜವಾಗಿ ಚಂದನವನದಲ್ಲಿ ಬಹುದೊಡ್ಡ ನಿರೀಕ್ಷೆ ಮೂಡಿಸಿದೆ. ಶಾಲಿನಿ ಮಂಜುನಾಥ್ ಮತ್ತು ಜಾಕ್ ಮಂಜು ನಿರ್ಮಾಣ ಮಾಡುತ್ತಿರೋ ಈ ಫ್ಯಾಂಟಮ್ ಕಿಚ್ಚನ ಅಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ ಮನೋರಂಜನೆಯ ಹಬ್ಬದೂಟ ಉಣಬಡಿಸೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಫ್ಯಾಂಟಮ್ ಶೋಟಿಂಗ್ ಗೆ ಹೈದರಾಬಾದ್ ದಲ್ಲಿ ದೊಡ್ಡ ಸೆಟ್ ಹಾಕಿದ್ದು, ಎರಡು ದಿನದ ಮುಂಚೆ ಸಿನಿಮಾಕ್ಕಾಗಿ ಫೋಟೊಶೂಟ್ ಮುಗಿಸಿದೆ ಚಿತ್ರತಂಡ, ವಿಶೇಷವಾಗಿ ಅನೂಪ್ ಭಂಡಾರಿ ತಮ್ಮ ನಿರೂಪ್ ಭಂಡಾರಿ ಸಹ ಒಂದು ಸ್ಪೆಷಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಅಭಿನಯ ಚಕ್ರವರ್ತಿ ಅಭಿನಯದ ಕೋಟಿಗೊಬ್ಬ-3 ಬಿಡುಗಡೆ ಸಿದ್ಧವಾಗಿ ನಿಂತಿದ್ದು, ಅಭಿಮಾನಿಗಳಿಗೆ ಸಂಭ್ರಮಾಚರಣೆ ಮಾಡಲು ದಿನಾಂಕ ಸಹ ನಿಗದಿಯಾಗಿದೆ. ಫ್ಯಾಂಟಮ್ ಚಿತ್ರೀಕರಣ ಸುಗಮವಾಗಲಿ, ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಒಂದೊಳ್ಳೆ ಸಿನಿಮಾವಾಗಿ ಮೂಡಿಬರಲಿ ಎಂಬುದೇ ನಮ್ ಆಶಯ.