ಕರ್ನಾಟಕ ವಿಧಾನಸಭೆ ಚುನಾವಣೆ : ನುಡಿದಂತೆ ನಡೆದ ಸ್ಯಾಂಡಲ್‌ವುಡ್‌ ಬಾದ್‌ ಷಾ ಕಿಚ್ಚ ಸುದೀಪ್

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮತದಾನಕ್ಕೆ ದಿನ ಸಮೀಪಿಸುತ್ತಿದೆ. ಒಂದೆಡೆ ರಾಜ್ಯದಲ್ಲಿ ಏಪ್ರಿಲ್‌ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು, ಇನ್ನೊಂದೆಡೆ ಚುನಾವಣಾ ಅಧಿಕಾರಿಗಳು ಸಹ ಭರ್ಜರಿ ಪ್ರಚಾರ ಕಾರ್ಯಕ್ರಮ ಶುರು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಚುನಾವಣೆಯಲ್ಲಿ ನಟ – ನಟಿಯರು ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವುದು ಸಾಮಾನ್ಯ. ಇದೀಗ ಸ್ಯಾಂಡಲ್​​ವುಡ್​​ ಖ್ಯಾತ ನಟ ಕಿಚ್ಚ ಸುದೀಪ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರ (Kichcha Sudeep – CM Basavaraj Bommai) ಪ್ರಚಾರಕ್ಕೆ ಬೆಂಬಲ ನೀಡುತ್ತೇನೆ ಎಂದು ಹೇಳಿದರು. ಅದರಂತೆ ಸ್ಯಾಂಡಲ್‌ವುಡ್‌ ಬಾದ್‌ ಷಾ ಕಿಚ್ಚ ಸುದೀಪ್‌ ನುಡಿದಂತೆ ನಡೆದುಕೊಂಡಿದ್ದಾರೆ.

ನಟ ಸುದೀಪ್‌ ಜೊತೆಗೆ ಬಿಜೆಪಿ ಪಕ್ಷದ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದರು. ನಟ ಕಿಚ್ಚ ಸುದೀಪ್​ ಮಾತು ಕೊಟ್ಟಂತೆ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಮೊದಲ ಬಾರಿಗೆ ಕಿಚ್ಚ ಸುದೀಪ್​​ ಸಾಥ್​ ನೀಡಿದ್ದರು. ಬಳಿಕ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಪ್ರಚಾರವನ್ನು ಶುರು ಮಾಡಲಿದ್ದಾರೆ. ನಿಮ್ಮ ಎಲ್ಲರ ಸಹಕಾರದಿಂದ ನಮ್ಮ ಬೊಮ್ಮಾಯಿ ಮಾಮಾ ಅವರನ್ನ ಗೆಲ್ಲಿಸಿ ಎಂದ ಕಿಚ್ಚ ಸುದೀಪ್ ಜನರಲ್ಲಿ ಕೇಳಿಕೊಂಡಿದ್ದಾರೆ. ಇದೀಗ ಇಂದು ಆರು ಕಡೆ ಬಿಜೆಪಿ ಪಕ್ಷದ ಪರ ಬಿರುಸಿನ ಪ್ರಚಾರ ನಡೆಸಲಿದ್ದಾರೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ತಿಪ್ಪೇಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಶಾಸಕ ತಿಪ್ಪೇಸ್ವಾಮಿ ಅವರಿಗೆ ಸ್ಯಾಂಡಲ್​​ವುಡ್​​ ಖ್ಯಾತ ನಟ ಕಿಚ್ಚ ಸುದೀಪ್​ ಸಾಥ್​​ ನೀಡಲಿದ್ದಾರೆ. ರೋಡ್ ಶೋ ಮೂಲಕ ನಟ ಕಿಚ್ಚ ಸುದೀಪ್​​ ಬಿಜೆಪಿ ಅಭ್ಯರ್ಥಿಗಳ ಜೊತೆ ಮತಯಾಚನೆ ಮಾಡಲಿದ್ದಾರೆ.

ಇದನ್ನೂ ಓದಿ : ಪುನೀತ್‌ ರಾಜ್‌ಕುಮಾರ್‌, ರಮ್ಯಾ ಅಭಿನಯದ ಅಭಿ ಸಿನಿಮಾಕ್ಕೆ 20 ವರ್ಷ ಸಂಭ್ರಮ

ಇದನ್ನೂ ಓದಿ : ಕರ್ನಾಟಕ ಚುನಾವಣೆ ಪ್ರಧಾನಿ ಮೋದಿ ಮಾಸ್ಟರ್ ಪ್ಲಾನ್ : 6 ದಿನಗಳು, 21 ರ್ಯಾಲಿ, 180 ಕ್ಷೇತ್ರಗಳಲ್ಲಿ ಪ್ರಚಾರ

  • ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ – ತಿಪ್ಪೇಸ್ವಾಮಿ
  • ಜಗಳೂರು – ರಾಮಚಂದ್ರ
  • ಮಾಯಕೊಂಡ – ಎಂ ಬಸವರಾಜ್
  • ಸಂಡೂರು – ಶಿಲ್ಪ ರಾಘವೇಂದ್ರ
  • ದಾವಣಗೆರೆ ಉತ್ತರ – ಲೋಕಿಕೆರೆ ನಾಗರಾಜು
  • ದಾವಣಗೆರೆ ದಕ್ಷಿಣ – ಬಿ.ಅಜೇಯ್ ಕುಮಾರ್

Kichcha Sudeep – CM Basavaraj Bommai : Karnataka Assembly Elections : Sandalwood Badah Shah Kichcha Sudeep

Comments are closed.