ಮಂಗಳವಾರ, ಏಪ್ರಿಲ್ 29, 2025
HomeCinemaKichcha Sudeep - Sanchith Sanjeev : ಸ್ಯಾಂಡಲ್ ವುಡ್ ಗೆ ಸುದೀಪ್ ಅಳಿಯ ಸಂಚಿತ್:...

Kichcha Sudeep – Sanchith Sanjeev : ಸ್ಯಾಂಡಲ್ ವುಡ್ ಗೆ ಸುದೀಪ್ ಅಳಿಯ ಸಂಚಿತ್: ಮೊದಲ ಸಿನಿಮಾಕ್ಕೆ ಅದ್ದೂರಿ‌ ಮುಹೂರ್ತ

- Advertisement -

ಸಿನಿಮಾ ರಂಗದಲ್ಲಿ ಹೊಸ ತಲೆಮಾರುಗಳ ಸಿನಿಮಾ ಸದ್ದು ಮಾಡ್ತಿದೆ. ಮಾತ್ರವಲ್ಲದೇ ಗೆಲುವಿನ ಕನಸು ಹೊತ್ತು ಹೊಸ ಹೊಸ ಪ್ರತಿಭೆಗಳು ಸ್ಯಾಂಡಲ್ ವುಡ್ ಮೆಟ್ಟಿಲೇರುತ್ತಿದೆ. ಈ ಪೈಕಿ ಬಹುಭಾಷಾ ಬಟ ಸುದೀಪ್ ಸೋದರಳಿಯ ಸಂಚಿತ್ (Kichcha Sudeep – Sanchith Sanjeev) ಕೂಡ ಬಣ್ಣದ ಲೋಕಕ್ಕೆ ಅಂಬೆಗಾಲಿಟ್ಟಿದ್ದು, ಸುದೀಪ್ ಅಳಿಯ ಸಂಚಿತ್ ಮೊದಲ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ. ಬೆಂಗಳೂರಿನ ಬಂಡೆಮಂಕಾಳಿ ದೇವಾಲಯದಲ್ಲಿ ಸಂಚಿತ್ ಮೊದಲ ಸಿನಿಮಾದ ಮುಹೂರ್ತ ನೆರವೇರಿದ್ದು, ಸುದೀಪ್ ಪುತ್ರಿ ಸಾನ್ವಿ ಜೊತೆ ಬಂದು ಅಳಿಯನ ಸಿನಿಮಾ ಮುಹೂರ್ತ ಕ್ಕೆ ಸಾಕ್ಷಿಯಾಗಿದ್ದಾರೆ.

ಸಂಚಿತ್ ಮೊದಲ ಸಿನಿಮಾಕ್ಕೆ ” ಜಿಮ್ಮಿ” ಎಂದು ಟೈಟಲ್ ನೀಡಲಾಗಿದ್ದು, ಸಂಚಿತ್ ಮೊದಲ ಸಿನಿಮಾದಲ್ಲೇ ನಟನೆ ಜೊತೆಗೆ ನಿರ್ದೇಶಕ್ಕೂ ಅಡಿ ಇಟ್ಟಿದ್ದಾರೆ. ಕಿಚ್ಚ ಕ್ರಿಯೇಷನ್ ಹಾಗೂ ವೀನಸ್ ಫಿಲಂಸ್, ಲಹರಿ ಸಂಸ್ಥೆ ಜಂಟಿಯಾಗಿ ನಿರ್ಮಿಸ್ತಿರುವ ಜಿಮ್ಮಿ ಸಿನಿಮಾ ಈಗ ಸಖತ್ ಕುತೂಹಲ‌ ಮೂಡಿಸಿದೆ.

#image_title

ಸುದೀಪ್ ಸಹೋದರಿ ಸುಜಾತಾ ಅವರ ಪುತ್ರರಾಗಿರೋ ಸಂಚಿತ್‌ರನ್ನು ಸುದೀಪ್ ಸಿನಿಮಾ ರಂಗಕ್ಕೆ ಪರಿಚಯಿಸುತ್ತಾರೆ ಎಂದು ಹೇಳುತ್ತಲೇ ಬರಲಾಗಿತ್ತು. ಆದರೆ ಇದುವರೆಗೂ ಆ ಬಗ್ಗೆ ಸುದೀಪ್ ಮಾತನಾಡಿರಲಿಲ್ಲ. ಈಗ ಅಧಿಕೃತವಾಗಿ ಅದ್ದೂರಿ ಮುಹೂರ್ತದ ಜೊತೆಗೆ ಸುದೀಪ್ ತಮ್ಮ ಸೋದರಳಿಯನನ್ನು ಬಣ್ಣದ ಲೋಕಕ್ಕೆ ಕರೆ ತಂದಿದ್ದಾರೆ. ನೋಡೋಕೆ ಬಹುತೇಕ ಸುದೀಪ್ ರನ್ನೇ ಹೋಲುವ ಸಂಚಿತ್, ಮಾವನಂತೆ ಟಾಲ್ ಆ್ಯಂಡ್ ಫಿಟ್ ಪಿಸಿಕ್ ಹೊಂದಿದ್ದಾರೆ.

#image_title

ಸಿನಿಮಾಕ್ಕೆ ಬಣ್ಣ ಹಚ್ಚುವ ಮುನ್ನವೇ ಸಂಚಿತ್ ಸಿನಿಮಾದ ತೆರೆ ಹಿಂದೆ ಕೆಲಸ ಮಾಡಿದ್ದು, ಅನುಭವ ಪಡೆದುಕೊಂಡಿದ್ದಾರೆ. ಸುದೀಪ್‌ರ ಬಹುನೀರಿಕ್ಷಿತ ಸಿನಿಮಾ‌ ವಿಕ್ರಾಂತ್ ರೋಣ ಹಾಗೂ ರನ್ನ ಸಿನಿಮಾದಲ್ಲಿ ಟೆಕ್ನಿಕಲ್ ಸೇರಿದಂತೆ ಹಲವು ‌ವಿಭಾಗದಲ್ಲಿ ಕೆಲಸ ಮಾಡಿರೋ ಸಂಚಿತ್, ಮುಂಬೈನ ಆಕ್ಟಿಂಗ್ ಸ್ಕೂಲ್ ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ವಿ.ಆರ್.ದಿ ಸೇಮ್, ಒಂದಾನೊಂದು ದಿನ ಸೇರಿದಂತೆ ಹಲವು ಕಿರುಚಿತ್ರ ನಿರ್ದೇಶಿಸಿರುವ ಸಂಚಿತ್. ತಮ್ಮ ಚಿತ್ರದ ಆಕ್ಸ್ಯನ್ ಕಟ್ ತಾವೇ ಹೇಳಲು ನಿರ್ಧರಿಸಿದ್ದಾರಂತೆ.

ಇದನ್ನೂ ಓದಿ : Sapta Sagaradaache Yello Movie : ನಟ ರಕ್ಷಿತ್‌ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್

ಕಿಚ್ಚ ಜೂನಿಯರ್ ಸಂಚಿತ್ ಎಂದು ಈಗಾಗಲೇ ಸಂಚಿತ್‌ರನ್ನು ಅಭಿಮಾನಿಗಳು ಸ್ವೀಕರಿಸಿದ್ದು ಕಳೆದ ವರ್ಷವೇ ಸಂಚಿತ್ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುವ ಮಟ್ಟಕ್ಕೆ ಅಭಿಮಾನಿಗಳನ್ನು ಈಗಾಗಲೇ ಸಂಚಿತ್ ಹೊಂದಿದ್ದಾರೆ. ಕೇವಲ ಸುದೀಪ್ ಮಾತ್ರವಲ್ಲದೇ ಹಲವು ಸ್ಟಾರ್ ನಟರ ಸಹೋದರ ಸಂಬಂಧಿಗಳು ಸ್ಯಾಂಡಲ್ ವುಡ್ ಗೆ ಅಡಿ ಇಡ್ತಿದ್ದು, ಇತ್ತೀಚಿಗೆ ನಟ ಉಪೇಂದ್ರ್ ಸಹೋದರನ ಪುತ್ರ, ಶಿವಣ್ಣನ ಸಹೋದರಿ ಪೂರ್ಣಿಮಾ ಪುತ್ರಿ ಧನ್ಯಾ ಹೀಗೆ ಹಲವರು ಚಂದನವನದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

Kichcha Sudeep – Sanchith Sanjeev : Sudeep’s son-in-law Sanchith for Sandalwood: Grand celebration for first film

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular