Gruha lahakshmi Yojana : ಗೃಹಲಕ್ಷ್ಮೀ ಯೋಜನೆ : ರಾಜ್ಯದಲ್ಲಿ ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು : (Gruha lahakshmi Yojana) ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಗ್ಯಾರಂಟಿ ಯೋಜನೆಯಲ್ಲಿ ಶಕ್ತಿ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಿದ್ದು, ಇನ್ನುಳಿದ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತರಲು ಮುಂದಾಗಿದೆ. ಅದರಲ್ಲಿ ಮನೆ ಯಜಮಾನಿಗೆ 2000ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ನಾಳೆಯಿಂದ (ಜೂನ್‌ 16) ಆನ್‌ಲೈನ್‌, ಆಫ್‌ಲೈನ್‌ನಲ್ಲಿ ಸರ್ಜಿ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಘೋಷಣೆ ಮಾಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ಸಲ್ಲಿಸಲು ಬಿಪಿಎಲ್‌, ಅಂತ್ಯೋದಯ ಕಾರ್ಡ್‌ದಾರರು ನಾಲೆಯಿಂದ ಅರ್ಜಿ ಸಲ್ಲಿಸಬಹುದಾಗಿದೆ. ಗೃಹಣಿಯರು ತಮ್ಮ ಅರ್ಜಿಯನ್ನು ಹತ್ತಿರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇನ್ನು ಯೋಜನೆಯಡಿ ಅರ್ಜಿ ಸಲ್ಲಿಸಲು ಮಹಿಳೆ ಆಧಾರ್‌ ಕಾರ್ಡ್‌, ಪತಿ ಆಧಾರ್‌ ಕಾರ್ಡ್‌ ಮಾಹಿತಿ ನೀಡಬೇಕಾಗಿದೆ.

ಸದ್ಯ ಈ ಯೋಜನೆ ಬಗ್ಗೆ ಯಾವುದೇ ಗೊಂದಲಗಳಿದ್ದರೆ ಸಹಾಯವಾಣಿ ಸಂಖ್ಯೆ 1902ಕ್ಕೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಅಂತಾ ಇರುವುದಿಲ್ಲ. ಹೀಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ವರ್ಷ ಪೂರ್ತಿ ಇರುತ್ತದೆ ಎಂದು ಸಹ ಹೇಳಿದ್ದಾರೆ.

ಇದನ್ನೂ ಓದಿ : KCET Results 2023 : ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ : ಇಂಜಿನಿಯರಿಂಗ್‌ ವಿಭಾಗದಲ್ಲಿ ವಿಘ್ನೇಶ್‌ ಅಗ್ರಸ್ಥಾನ

ಈ ಯೋಜನೆಯ ಲಾಭ ತೆರಿಗೆ ಕಟ್ಟುವವರಿಗೆ ಲಭ್ಯವಾಗುವುದಿಲ್ಲ. ಇ ಗವರ್ನೆನ್ಸ್‌ ಮೂಲಕ ಅರ್ಜಿ ಹಾಕುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಅರ್ಜಿದಾರರ ಪತಿ ಟ್ಯಾಕ್ಸ್‌ ಪೇಯರ್ಸ್‌ ಆಗಿದ್ದರೆ ಸ್ವೀಕಾರ ಆಗುವುದಿಲ್ಲ. ಆದ್ದರಿಂದ ಸುಳ್ಳು ಮಾಹಿತಿ ನೀಡಿಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

Gruha lahakshmi Yojana : Application submission starts from tomorrow in the state

Comments are closed.