ಸ್ಯಾಂಡಲ್ ವುಡ್ ನ ಸುದೀಪ್ ( Kichcha Sudeep ) ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ವೊಂದು ವಿಕ್ರಾಂತ್ ರೋಣ ರೂಪದಲ್ಲಿ ಕಾಯುತ್ತಿದೆ. ಆದರೆ ಸಿನಿಮಾದ ರಿಲೀಸ್ ಡೇಟ್ ಇನ್ನೂ ರಿಲೀಸ್ ಆಗಿಲ್ಲ. ಹೀಗಿದ್ದರೂ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಜೋರಾಗಿಯೇ ನಡೆದಿದೆ. ಈ ಮಧ್ಯೆ ಸಿನಿಮಾ ರಿಲೀಸ್ ಗೂ ಮುನ್ನವೇ ಸುದೀಪ್ ರಾಯರ ಮೊರೆ ಹೋಗಿದ್ದು, ಸಿನಿಮಾ ರಿಲೀಸ್ ಗೆ ಆಶೀರ್ವಾದ ಕೋರಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.
ಮಂತ್ರಾಲಯಕ್ಕೆ ಭೇಟಿ ನೀಡಿದ ಸುದೀಪ್ (Kichcha Sudeep) ಮಂತ್ರಾಲಯದಲ್ಲಿ ನಡೆಯುತ್ತಿರುವ ಶ್ರೀಗುರು ವೈಭವೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಮಾತ್ರವಲ್ಲ ಮಂತ್ರಾಲಯದ ಸುಭುದೇಂದ್ರ ಶ್ರೀಗಳಿಂದ ಆಶೀರ್ವಾದ ಪಡೆದಿದ್ದಾರೆ.ಇನ್ನು ನಟ ಸುದೀಪ್ ಮಂತ್ರಾಲಯಕ್ಕೆ ಆಗಮಿಸಿರೋ ಸುದ್ದಿ ಮಿಂಚಿನಂತೆ ಹರಡಿದ್ದು ತಕ್ಷಣವೇ ಸಾವಿರಾರು ಸುದೀಪ್ ಅಭಿಮಾನಿಗಳು ಮಂತ್ರಾಲಕ್ಕೆ ಭೇಟಿ ನೀಡಿ ಸುದೀಪ್ ಜೊತೆ ಸೆಲ್ಪಿ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.

ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದಾಗಿನಿಂದಲೂ ಟೆಂಪಲ್ ರನ್ ಆರಂಭಿಸಿದ್ದು, ಕೆಲದಿನಗಳ ಹಿಂದೆಯಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಶಕ್ತಿ ಕೇಂದ್ರಗಳಿಗೆ ಸುದೀಪ್ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಈಗ ಸಿನಿಮಾದ ಪ್ರಮೋಶನ್ ಕಾರ್ಯ ಆರಂಭಿಸುವ ಹೊತ್ತಿನಲ್ಲಿ ಅಶೀರ್ವಾದ ಪಡೆಯಲು ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ನಟ ಧ್ರುವ್ ಸರ್ಜಾ ಕೂಡ ಮಂತ್ರಾಲಯಕ್ಕೆ ತೆರಳಿದ್ದರು.

ಮಂತ್ರಾಲಯ ಸ್ಯಾಂಡಲ್ ವುಡ್ ನ ಶ್ರದ್ಧಾ ಕೇಂದ್ರವಾಗಿದ್ದು ನಟ ಡಾ.ರಾಜ್ ಕುಮಾರ್ ರಿಂದ ಆರಂಭಿಸಿ ಜಗ್ಗೇಶ್ ಹಾಗೂ ಸುದೀಪ್, ಪುನೀತ್ ವರೆಗೂ ಎಲ್ಲರೂ ಮಂತ್ರಾಲಯಕ್ಕೆ ಭೇಟಿ ನೀಡುವ ಅಭ್ಯಾಸವಿಟ್ಟುಕೊಂಡಿದ್ದಾರೆ. ಇನ್ನೂ ಸುದೀಪ್ (Kichcha Sudeep) ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣ ವಿಚಾರಕ್ಕೆ ಬರೋದಾದರೇ ಇದೇ ಮೊದಲ ಬಾರಿಗೆ ಕನ್ನಡದ ನಟರೊಬ್ಬರು ಇಂಗ್ಲಿಷ್ ನಲ್ಲಿ ಡಬ್ ಮಾಡಿದ ಖ್ಯಾತಿಗೆ ಪಾತ್ರವಾಗಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ಆಗಿರೋ ವಿಕ್ರಾಂತ್ ರೋಣಾಗೆ ಇಂಗ್ಲೀಷ್ ನಲ್ಲೂ ಕೂಡ ನಟ ಸುದೀಪ್ (Kichcha Sudeep) ಡಬ್ ಮಾಡಿದ್ದು ಈ ವಿಚಾರವನ್ನು ನಿರ್ದೇಶಕ ನಿರೂಪ್ ಭಂಡಾರಿ ಹಂಚಿಕೊಂಡಿದ್ದಾರೆ. ಸಿನಿಮಾದ ಸಾಂಗ್,ಟ್ರೇಲರ್ ಎಲ್ಲವೂ ರಿಲೀಸ್ ಗೆ ಸಿದ್ಧವಾಗಿದೆ. ಯಾವ ಯಾವಾಗ ಏನೇನು ತೆರೆಗೆ ಬರುತ್ತೆ ಅನ್ನೋದನ್ನು ಚಿತ್ರತಂಡ ತನ್ನ ರೂಡ್ ಮ್ಯಾಪ್ ಮೂಲಕ ವಿವರಿಸಿ ಗಮನ ಸೆಳೆದಿದೆ.
Just the beginning of a Big Something.#VikrantRona
— Kichcha Sudeepa (@KicchaSudeep) March 2, 2022
🥂🥂 https://t.co/eTZ4nTs8lv
ಇದನ್ನೂ ಓದಿ : Rudra Movie : ಕ್ರೈಂ ಸಿರೀಸ್ ನಲ್ಲಿ ಮಿಂಚಿದ ಬಾಲಿವುಡ್ ನಟ ಅಜಯ್ ದೇವಗನ್
ಇದನ್ನೂ ಓದಿ : Actor Chethan : ನನಗೆ ಜೀವ ಬೆದರಿಕೆ ಇದೆ : ಗನ್ ಮ್ಯಾನ್ ಸೌಲಭ್ಯ ನೀಡಿ : ನಟ ಚೇತನ್
( Kichcha Sudeep Visited Mantralayam)