Royal Enfield Ride : 36 BSF ಮಹಿಳಾ ಯೋಧರಿಂದ ದೆಹಲಿಯಿಂದ ಕನ್ಯಾಕುಮಾರಿಗೆ ರಾಯಲ್ ಎನ್‌ಫೀಲ್ಡ್ ರೈಡ್

BSF ನ 36 ಮಹಿಳಾ ಸೈನಿಕರು ದೆಹಲಿಯಿಂದ ಕನ್ಯಾಕುಮಾರಿವರೆಗೆ ರಾಯಲ್ ಎನ್‌ಫೀಲ್ಡ್‌ನಲ್ಲಿ ಪ್ರಯಾಣಿಸುವ (Royal Enfield Ride) ಯೋಜನೆಯೊಂದನ್ನು ಹಮ್ಮಿಕೊಂಡಿದ್ದಾರೆ. ಮಹತ್ವದ ಉದ್ದೇಶ ಹೊಂದಿರುವ ಈ ಪ್ರಯಾಣವನ್ನು “ಎಂಪವರ್‌ಮೆಂಟ್ ರೈಡ್ – 2022 (Empowerment Ride – 2022)  ಎಂದು ಕರೆಯಲಾಗಿದ್ದು ಮಾರ್ಚ್ 8, 2022 ರಂದು ನವದೆಹಲಿಯ ಇಂಡಿಯಾ ಗೇಟ್‌ನಿಂದ (India Gate to Kanyakumari) ಬಿಎಸ್‌ಎಫ್ ಮಹಿಳಾ ಸಿಬ್ಬಂದಿಗಳು ಆರಂಭಿಸಲಿದ್ದಾರೆ ಎಂದು ರಾಯಲ್ ಎನ್‌ಫೀಲ್ಡ್ (Royal Enfield) ಶುಕ್ರವಾರ ಪ್ರಕಟಿಸಿದೆ. ಈ ರೈಡ್ ಅಂತರಾಷ್ಟ್ರೀಯ ಮಹಿಳಾ ದಿನದ (International Women’s Day 2022) ಪ್ರಯುಕ್ತ ನಡೆಯಲಿದ್ದು 36 ಸದಸ್ಯರು ಈ ಪ್ರಯಾಣವನ್ನು (36 BSF female bikers) ನಡೆಸುತ್ತಾರೆ. BSF Seema Bhavani  All  ಮಹಿಳಾ ಡೇರ್‌ಡೆವಿಲ್ ತಂಡದ ಸದಸ್ಯರೇ ಈ ರಾಯಲ್ ಎನ್‌ಫೀಲ್ಡ್ ಪ್ರಯಾಣ ನಡೆಸಲಿದ್ದಾರೆ.

“ಸಬಲೀಕರಣ ಪ್ರವಾಸ – 2022” (Royal Enfield Ride) ಎಂದು ವ್ಯಾಖ್ಯಾನಿಸಲಾದ ಈ ಪ್ರಯಾಣವು  ದೇಶದ ಉದ್ದ ಮತ್ತು ಅಗಲದುದ್ದಕ್ಕೂ ಕ್ರಮಿಸುವ ನಿರೀಕ್ಷೆಯಿದೆ. ಇದು ಚಂಡೀಗಢ, ಅಮೃತಸರ, ಅಟ್ಟಾರಿ, ಬಿಕಾನೇರ್, ಜೈಪುರ, ಉದಯಪುರ, ಗಾಂಧಿನಗರ, ಭರೂಚ್, ನಾಸಿಕ್, ಪುಣೆ, ಸೊಲ್ಲಾಪುರ, ಹೈದರಾಬಾದ್, ಅನಂತಪುರ ಬೆಂಗಳೂರು, ಸೇಲಂ, ಮಧುರೈ ಮತ್ತು ಕನ್ಯಾಕುಮಾರಿಯಂತಹ ಪ್ರಮುಖ ಭಾರತೀಯ ನಗರಗಳ ಮೂಲಕ ಮಾರ್ಚ್‌ 28, 2022 ರಂದು ಚೆನ್ನೈನಲ್ಲಿ ತನ್ನ ಅಂತಿಮ ಗಮ್ಯಸ್ಥಾನವನ್ನು ತಲುಪಲಿದೆ ಎಂದು ವರದಿಯಾಗಿದೆ.

BSF ಸೀಮಾ ಭವಾನಿ ಆಲ್-ವುಮೆನ್ ಡೇರ್‌ಡೆವಿಲ್ ಮೋಟಾರ್‌ಸೈಕಲ್ ತಂಡವನ್ನು 2016 ರಲ್ಲಿ ಸ್ಥಾಪಿಸಲಾಯಿತು. 2018 ಮತ್ತು 2022 ರಲ್ಲಿ ನವದೆಹಲಿಯ ರಾಜ್‌ಪಥ್‌ನಲ್ಲಿ ಎರಡು ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿತ್ತು ಈ ತಂಡ.

ಇದನ್ನೂ ಓದಿ: Bajaj Pulsar Price Hike: ಬಜಾಜ್ ಪಲ್ಸರ್ ಬೆಲೆ ಹೆಚ್ಚಳ; ಪರಿಷ್ಕೃತ ಬೆಲೆ ಕಾಸಿಗೆ ತಕ್ಕ ಕಜ್ಜಾಯವೇ?

“ಬಾಳಿಕೆ ಬರುವ, ವಿಶ್ವಾಸಾರ್ಹ ಯಂತ್ರಗಳನ್ನು ನಿರ್ಮಿಸುವ ಮೂಲಕ ರಾಯಲ್ ಎನ್‌ಫೀಲ್ಡ್‌ 70 ವರ್ಷಗಳಿಂದ ನಮ್ಮ ದೇಶಕ್ಕೆ ಹೆಮ್ಮೆಯಿಂದ ಸೇವೆ ಸಲ್ಲಿಸಿದ್ದೇವೆ. ಭಾರತೀಯ ಸಶಸ್ತ್ರ ಪಡೆಗಳ ವಿಶ್ವಾಸಾರ್ಹ ಮಿತ್ರರಾಗಿದ್ದೇವೆ. ನಾವು ಅಡೆತಡೆಗಳನ್ನು ಮುರಿಯಲು ಮತ್ತು ದೇಶಾದ್ಯಂತ ಮಹಿಳಾ ಸವಾರರನ್ನು ಸಕ್ರಿಯವಾಗಿ ಬೆಂಬಲಿಸಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದೇವೆ. ಹೆಚ್ಚಿನ ಮಹಿಳೆಯರು ತಮ್ಮ ಭಾವೋದ್ರೇಕಗಳನ್ನು ಅನುಸರಿಸಲು ಪ್ರೋತ್ಸಾಹಿಸುವ ಮೂಲಕ ನಾವು ಸಮುದಾಯಕ್ಕೆ ಮೋಟರ್‌ಸೈಕ್ಲಿಂಗ್‌ನ ಶುದ್ಧ ಅನುಭವವನ್ನು ಅನುಭವಿಸಲು ಹಲವಾರು ಅವಕಾಶಗಳನ್ನು ಒದಗಿಸಿದ್ದೇವೆ ಎಂದು ರಾಯಲ್ ಎನ್‌ಫೀಲ್ಡ್ ತಿಳಿಸಿದೆ.

ಸೀಮಾ ಭವಾನಿ ಶೌರ್ಯ ದಂಡಯಾತ್ರೆಯೊಂದಿಗಿನ ನಮ್ಮ ಒಡನಾಟವು ಸಶಸ್ತ್ರ ಪಡೆಗಳಿಗೆ ನಮ್ಮ ದೀರ್ಘಕಾಲದ ಬದ್ಧತೆಯನ್ನು ಗೌರವಿಸಲು ಮತ್ತು ಅವರ ಪ್ರಯತ್ನಗಳಲ್ಲಿ ಅವರನ್ನು ಬೆಂಬಲಿಸಲು ರೂಪಿಸಿದ್ದಾಗಿದೆ. ನಾವು BSF ಮತ್ತು ಸೀಮಾ ಭವಾನಿ ತಂಡದೊಂದಿಗೆ ಪಾಲುದಾರರಾಗಲು ಸಂತೋಷಪಡುತ್ತೇವೆ. ಈ ಶೌರ್ಯದ ಆಚರಣೆಯಲ್ಲಿ ಅವರಿಗೆ ಶುಭ ಹಾರೈಸುತ್ತೇವೆ ಎಂದು ರಾಯಲ್ ಎನ್‌ಫೀಲ್ಡ್ (Royal Enfield Ride) ಕ್ಲಾಸಿಕ್‌ನ ಗ್ಲೋಬಲ್ ಬ್ರಾಂಡ್ ಮ್ಯಾನೇಜರ್ ಅನುಜ್ ದುವಾ ಹೇಳಿದರು.

ಇದನ್ನೂ ಓದಿ: SBI Job Alert 2022: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಿಯಾಗಲು ಇದೆ ಅವಕಾಶ: ವಿವರ ಓದಿ

(Royal Enfield Ride by 36 BSF Women Soldiers Delhi to Kanyakumari International Womens Day 2022)

Comments are closed.