ಸೋಮವಾರ, ಏಪ್ರಿಲ್ 28, 2025
HomeCinemaKichcha Sudeepa : ಅಭಿನಯ ಚಕ್ರವರ್ತಿ ಸುದೀಪ್‌ ಹೃದಯವಂತಿಕೆ, ಸರಳತೆಗೆ ಈ ವಿಡಿಯೋ ಸಾಕ್ಷಿ

Kichcha Sudeepa : ಅಭಿನಯ ಚಕ್ರವರ್ತಿ ಸುದೀಪ್‌ ಹೃದಯವಂತಿಕೆ, ಸರಳತೆಗೆ ಈ ವಿಡಿಯೋ ಸಾಕ್ಷಿ

- Advertisement -

ಕನ್ನಡ ಸಿನಿರಂಗದಲ್ಲಿ ಬಹುತೇಕ ಹೆಚ್ಚಿನ ನಟ-ನಟಿಯರು ತೆರೆಮೇಲೆ ಮಾತ್ರವಲ್ಲದೇ ತೆರೆಹಿಂದೆ ಕೂಡ ರಿಯಲ್‌ ಹೀರೊಗಳಾಗಿ ಆಗಾಗ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಅಭಿನಯ ಚಕ್ರವರ್ತಿ ಸುದೀಪ್‌ (Kichcha Sudeepa) ಹೃದಯವಂತಿಕೆ, ಸರಳತೆ ಬಗ್ಗೆ ಹೊಸದಾಗಿ ಕರುನಾಡ ಜನತೆಗೆ ತಿಳಿಸುವ ಅಗತ್ಯವಿಲ್ಲ. ನಟ ಸುದೀಪ್‌ ಅಭಿಮಾನಿಗಳಿಗೆ ಒಮ್ಮೆಯಾದರೂ ಭೇಟಿಯಾಗಬೇಕು. ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕೆನ್ನುವ ಆಸೆ ಪ್ರತಿಯೊಬ್ಬ ಕಿಚ್ಚನ ಅಭಿಮಾನಿಗಳಿಗೂ ಇದ್ದೇ ಇರುತ್ತದೆ. ಆ ಆಸೆ ಈಡೇರಿಸಿಕೊಳ್ಳಲು ಸಮಯ, ಸಂದರ್ಭ ಕೂಡಿ ಬರಬೇಕು ಅಷ್ಟೇ. ಇದೀಗ ಕಿಚ್ಚ ಸುದೀಪ್‌ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ವಿಡಿಯೋ ಇದ್ದಕ್ಕೆ ಸಾಕ್ಷಿಯಾಗಿದೆ.

ಸದ್ಯ ಕ್ಯಾನ್ಸರ್ ನಿಂದ ಬಳಲುತ್ತಿರುವ ಸಾಕ್ಷಿ ಎಂಬ ಬಾಲಕಿ ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿಯಂತೆ. ಜೀವನದಲ್ಲಿ ಒಂದು ಬಾರೀ ಆದರೂ ತಮ್ಮ ನೆಚ್ಚಿನ ಸ್ಟಾರ್ ನಟನನು ಭೇಟಿಯಾಗಬೇಕು ಎಂಬುದು ಸಾಕ್ಷಿ ಆಸೆ ಆಗಿತ್ತು. ಬಾಲಕಿಯ ಆಸೆ ಮತ್ತು ಆರೋಗ್ಯ ಸಮಸ್ಯೆ ಬಗ್ಗೆ ತಿಳಿದುಕೊಂಡ ಕಿಚ್ಚ ಸುದೀಪ್ ತನ್ನ ಅಭಿಮಾನಿ ಹಾಗೂ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಕ್ಷಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ : Actress Anugowda : ಸ್ಯಾಂಡಲ್‌ವುಡ್‌ ನಟಿ ಅನುಗೌಡ ಮೇಲೆ ಹಲ್ಲೆ : ಸಾಗರದ ಸ್ಥಳೀಯ ನಿವಾಸಿಗಳ ಮೇಲೆ ದೂರು ದಾಖಲು

ಇದನ್ನೂ ಓದಿ : Shah Rukh Khan Injured : ಶೂಟಿಂಗ್‌ ಸೆಟ್‌ನಲ್ಲಿ ಅವಘಡ : ಅಮೇರಿಕಾದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ

ತಮ್ಮ ಪುಟ್ಟ ಅಭಿಮಾನಿ ಸಾಕ್ಷಿಯನ್ನು ಭೇಟಿ ಮಾಡಿ ‘ಆಟೋಗ್ರಾಫ್’ ನೀಡಿ ಪ್ರೀತಿಯಿಂದ ಅಪ್ಪುಗೆ ನೀಡಿದ್ದಾರೆ. ಸುದೀಪ್ ಭೇಟಿಯಾದ ಖುಷಿ ಕ್ಷಣಗಳನ್ನು ಹಂಚಿಕೊಂಡಿರುವ ಸಾಕ್ಷಿ, ನನಗೆ ಸುದೀಪ್ ಸರ್ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪುಟ್ಟ ಅಭಿಮಾನಿ ಸಾಕ್ಷಿ ರನ್ನ ಸಿನಿಮಾದ ಥಿತಲಿ ಹಾಡು ನನಗೆ ಸ್ಪೂರ್ತಿ ಎಂದಿದ್ದಾರೆ. ಕೋಟಿಗೊಬ್ಬನ್ನು ನೋಡಿ ಆ ಪುಟ್ಟ ಅಭಿಮಾನಿಯ ಖುಷಿಗೆ ಪಾರವೇ ಇಲ್ಲ. ಕಿಚ್ಚನ ಈ ಹೃದಯವಂತಿಕೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಸಲಾಂ ಎಂದಿದ್ದಾರೆ.

Kichcha Sudeepa met a little fan suffering from cancer

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular