Delhi Crime News : ವಕೀಲರ‌ ನಡುವೆ ವಾಗ್ವಾದ, ನ್ಯಾಯಾಲಯದಲ್ಲಿ ಗುಂಡಿನ ದಾಳಿ

ದೆಹಲಿ : ನ್ಯಾಯಾಲಯದಲ್ಲಿ ವಕೀಲರ ಪರ ವಿರೋಧದ ವಾದ ನಂತರ ಗುಂಡಿನ (Delhi Crime News) ದಾಳಿಯೊಂದು ನಡೆದಿದೆ. ವಕೀಲರ ನಡುವಿನ ವಾಗ್ವಾದದಿಂದಾಗಿ ಗುಂಡಿನ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಈ ಆಘಾತಕಾರಿ ಘಟನೆಯು ದೆಹಲಿಯ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ಗುಂಡಿನ ದಾಳಿ ನಡೆದಿರುವುದು ವರದಿಯಾಗಿದೆ. ಇಲ್ಲಿಯವರೆಗೆ ಯಾವುದೇ ಗಾಯದ ವರದಿಯಾಗಿಲ್ಲ. ವಕೀಲರ ನಡುವಿನ ವಾಗ್ವಾದವು ತಾರಕ್ಕೇರಿದ್ದರಿಂದ ಗುಂಡಿನ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದೆ.

ಇದನ್ನೂ ಓದಿ : Madhya Pradesh urination case : ಯುವಕನ ಮೇಲೆ‌ ಮೂತ್ರ ವಿಸರ್ಜನೆ, ಆರೋಪಿ ಅರೆಸ್ಟ್ : ಸಿಎಂ ಚೌಹಾಣ್ ಹೇಳಿದ್ದೇನು ?

ಇದನ್ನೂ ಓದಿ : Actress Anugowda : ಸ್ಯಾಂಡಲ್‌ವುಡ್‌ ನಟಿ ಅನುಗೌಡ ಮೇಲೆ ಹಲ್ಲೆ : ಸಾಗರದ ಸ್ಥಳೀಯ ನಿವಾಸಿಗಳ ಮೇಲೆ ದೂರು ದಾಖಲು

ಪೊಲೀಸರ ಪ್ರಕಾರ ಘಟನೆಯು ಸಬ್ಜಿ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯಾಹ್ನ 1.35 ಕ್ಕೆ ಸಂಭವಿಸಿದೆ. ವಕೀಲರ ಎರಡು ಗುಂಪುಗಳ ನಡುವಿನ ವಾಗ್ವಾದದ ನಂತರ ಗುಂಡಿನ ದಾಳಿ ನಡೆದಿದೆ. ಬಂದೂಕನ್ನು ಗಾಳಿಯಲ್ಲಿ ಹೊರಹಾಕಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಪರಿಸ್ಥಿತಿ ಸಾಮಾಧನಕರವಾಗಿದೆ, ಆದರೆ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Delhi Crime News : Argument between lawyers, firing in court

Comments are closed.