ಮೆಟ್ ಗಾಲಾ ಪ್ರದರ್ಶನದಲ್ಲಿ ಮಾಧ್ಯಮ ವಕ್ತಿತ್ವ ಕಿಮ್ ಕಾರ್ಡಶಿಯಾನ್ (Kim Kardashian) ತಮ್ಮ ಉಡುಗೆಯ ಮೂಲಕ ಜಗತ್ತನ್ನು ನಿಬ್ಬೆರಗುಗೊಳಿಸುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ರೆಡ್ ಕಾರ್ಪೆಟ್ಗಳ ಮೇಲೆ ನಡೆಯುವಾಗ ಮೆಟ್ ಗಾಲಾದಲ್ಲಿ ಅದ್ಭುತ ನೋಟಗಳನ್ನು ನೀಡುವಲ್ಲಿ ಕಿಮ್ ಕಾರ್ಡಶಿಯಾನ್ ಎಂದಿಗೂ ಯಶಸ್ವಿಯಾಗುತ್ತಾರೆ. ಈ ಬಾರಿ ಕೂಡ ಕಿಮ್ ಕಾರ್ಡಶಿಯಾನ್ ತಮ್ಮ ಮೆಟ್ ಗಾಲಾ ಉಡುಪಿನ ಮೂಲಕ ಸುದ್ದಿಯಾಗಿದ್ದಾರೆ. ಈ ಬಾರಿಯ ವಿಶೇಷ ಎಂದರೆ ಅವರು ವಿಶ್ವದ ಅತ್ಯಂತ ದುಬಾರಿ ಉಡುಪನ್ನು ಧರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಅಂದಹಾಗೆ ಕಿಮ್ ಕಾರ್ಡಶಿಯಾನ್ ಧರಿಸಿರುವ ಗೌನ್ ಈಗಿನದ್ದಲ್ಲ. ಬದಲಾಯಿ 1962ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ಜನ್ಮ ದಿನದ ಕಾರ್ಯಕ್ರಮದಲ್ಲಿ ಅಂದಿನ ಖ್ಯಾತ ನಟಿ ಮರ್ಲಿನ್ ಮನ್ರೋ ಧರಿಸಿದ ಗೌನ್ ಇದಾಗಿದೆ. ಈ ವಿಂಟೇಜ್ ಗೌನ್ನ್ನು ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ $4.8 ಮಿಲಿಯನ್ ಹಣವನ್ನು ನೀಡಿ ಇದನ್ನು ಖರೀದಿಸಲಾಗಿದೆ. ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಹರಜಾದ ಉಡುಪು ಎಂಬ ವಿಶ್ವ ದಾಖಲೆಯನ್ನೂ ಈ ಗೌನ್ ನಿರ್ಮಿಸಿದೆ. ಮರ್ಲಿನ್ ಮನ್ರೋರ ಈ ಉಡುಪನ್ನು ಧರಿಸುವುದು ಕಿಮ್ ಕಾರ್ಡಶಿಯಾನ್ಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಈ ಉಡುಪಿಗೆ ಫಿಟ್ ಆಗಲು ಕಿಮ್ ಕಾರ್ಡಶಿಯಾನ್ ಮೂರು ವಾರಗಳಲ್ಲಿ 7 ಕೆಜಿ ತೂಕವನ್ನು ಇಳಿಸಿದ್ದಾರಂತೆ. ಕೆಲವೇ ಕೆಲವು ನಿಮಿಷಗಳ ಕಾಲ ಧರಿಸಬೇಕಾದ ಈ ಉಡುಪಿಗಾಗಿ ಕಿಮ್ ಕಾರ್ಡಶಿಯಾನ್ ಇಷ್ಟೆಲ್ಲ ಸರ್ಕಸ್ ಮಾಡಿದ್ದಾರೆ.
ವೋಗ್‌ಗೆ ನೀಡಿದ ಸಂದರ್ಶನದಲ್ಲಿ, ಗರಿಷ್ಟ 68 ಡಿಗ್ರಿ ಮತ್ತು 40-50 ರಷ್ಟು ಆರ್ದ್ರತೆಯಲ್ಲಿ ನಿಯಂತ್ರಿಸಲ್ಪಡುವ ಗಾಢವಾದ ವಾಲ್ಟ್‌ನಲ್ಲಿ ಸಂಗ್ರಹವಾಗಿರುವ ಉಡುಪನ್ನು ಅದರ ಮಸ್ಲಿನ್-ಆವೃತವಾದ ಉಡುಗೆ ರೂಪದಿಂದ ವಿರಳವಾಗಿ ಪ್ರತ್ಯೇಕಿಸಲಾಗಿದೆ ಎಂದು ಕಿಮ್ ಬಹಿರಂಗಪಡಿಸಿದರು. ಆದ್ದರಿಂದ ಈ ಉಡುಪನ್ನ ಟ್ರಯಲ್ ಮಾಡಲು ಕಿಮ್ರನ್ನು ಕರೆಸಿದಾಗ ಬಟ್ಟೆಗೆ ಕಾವಲುಗಾರರನ್ನು ನೇಮಿಸಲಾಗಿತ್ತು ಹಾಗೂ ಈ ಉಡುಪನ್ನು ಮುಟ್ಟುವ ಮುನ್ನ ಕಿಮ್ ಗ್ಲೌಸ್ಗಳನ್ನು ಧರಿಸಬೇಕಾಗಿತ್ತು.
ಸಂದರ್ಶನದಲ್ಲಿ ಮಾತನಾಡಿದ ಕಿಮ್, ನಾನು ಮರ್ಲಿನ್ ತುಂಬಾ ಕರ್ವಿ ಇದ್ದಾರೆ ಎಂದು ಭಾವಿಸಿದ್ದೇನೆ. ಆಕೆಯ ದೇಹದ ವಿನ್ಯಾಸ ಹಾಗೂ ನನ್ನ ದೇಹದ ವಿನ್ಯಾಸದಲ್ಲಿ ತುಂಬಾನೇ ವ್ಯತ್ಯಾಸವಿತ್ತು. ಹೀಗಾಗಿ ಆ ಡ್ರೆಸ್ ನನಗೆ ಫಿಟ್ ಆಗಿರಲಿಲ್ಲ. ಅದನ್ನು ಮರು ವಿನ್ಯಾಸಗೊಳಿಸಲೂ ಕೂಡ ಅವಕಾಶ ಇರಲಿಲ್ಲ. ನನಗೆ ಒಮ್ಮೆಲೆ ಅಳಬೇಕು ಎಂದೆನಿಸುತ್ತಿತ್ತು. ಆದರೆ ಕೊನೆಗೆ ದೃಢ ಸಂಕಲ್ಪದಿಂದ ಮೂರು ವಾರಗಳಲ್ಲಿ 7 ಕೆಜಿಗಳನ್ನು ಕರಗಿಸಿ ನಾನು ಈ ಉಡುಪು ಧರಿಸಿದೆ ಎಂದು ಹೇಳಿದರು.
ಇದನ್ನು ಓದಿ : Amit Shah ಆಗಮನದ ಹೊತ್ತಲ್ಲೇ ಅಶ್ವತ್ಥ ನಾರಾಯಣ್ ಗೆ ಶಾಕ್ : ಭ್ರಷ್ಟಾಚಾರದ ಆರೋಪ ಕೆಂಡಾಮಂಡಲ
ಇದನ್ನೂ ಓದಿ : BJP Secret Meeting : ಸಿಎಂ ಬೊಮ್ಮಾಯಿ ಬದಲಾವಣೆ ? ಕುತೂಹಲ ಮೂಡಿಸಿದೆ ಬಿಜೆಪಿ ತ್ರಿಮೂರ್ತಿಗಳ ಸಭೆ
Kim Kardashian lost 7kg in 3 weeks to fit in Marilyn Monroe’s USD 5 million gown for Met Gala: It was this or nothing