Muskmelon : ಕರಬೂಜ ಹಣ್ಣು! ಬೇಸಿಗೆಗೆ ತಂಪು ನೀಡುವ ಮ್ಯಾಜಿಕ್‌ ಹಣ್ಣು !!

ಬೇಸಿಗೆ (Summer) ಎಂದರೆ ತಂಪು ತಂಪು ಜ್ಯೂಸ್‌ಗಳನ್ನು ಸೇವಿಸುತ್ತಾ, ದೇಹದ ಉಷ್ಣತೆ ಕಾಪಾಡಿಕೊಳ್ಳುವುದಾಗಿದೆ. ಅತಿಯಾದ ಕೊಬ್ಬಿನಂಶವಿರುವ ಊಟ, ತಿಂಡಿಗಳನ್ನು ತಿನ್ನುವ ಬಯಕೆ ತಡೆಯಲು, ಹಣ್ಣುಗಳಿಂದ (Muskmelon) ಮಾಡಿದ ತಂಪಾದ ಪಾನೀಯಗಳ ಮೊರೆ ಹೋಗುವುದೇ ಒಳ್ಳೆಯದು. ಪಾನೀಯಗಳನ್ನು ಸೇವಿಸುವ ಉತ್ತಮ ಮಾರ್ಗವೆಂದರೆ ಬೇಸಿಗೆ ಹಣ್ಣುಗಳಿಂದ ಮಾಡಿದ ಜ್ಯೂಸ್‌. ಬೇಸಿಗೆಯ ಹಣ್ಣುಗಳೆಂದೇ ಹೆಸರಾದ ಮಾವು, ಕಲ್ಲಂಗಡಿ, ಕರಬೂಜ (Muskmelon), ಲಿಚಿ ಇವೆಲ್ಲವುಗಳಿಂದ ಜ್ಯೂಸ್‌ ಮಾಡಬಹುದು. ನೀವು ಈಗಾಗಲೇ ಮ್ಯಾಂಗೋ ಶೇಕ್‌, ಕಲ್ಲಂಗಡಿ ಹಣ್ಣಿನ ಜ್ಯೂಸ್‌ ಗಳೆಲ್ಲವನ್ನು ಸವಿದಿದ್ದರೆ ಈಗ ಕರಬೂಜದ ಹಣ್ಣಿನ ಪಾನೀಯಗಳನ್ನು ಸೇವಿಸಲು ಇದು ಸಕಾಲ. ಮೃದುವಾದ, ರಸಭರಿತ ಕರಬೂಜದ ಪಾನೀಯಗಳು ಬಹಳ ರುಚಿಯಾಗಿರುತ್ತವೆ.

ಕರಬೂಜ ರುಚಿಗಷ್ಟೆ ಬೆಸ್ಟ್‌ ಅಲ್ಲ, ಇದು ಪೌಷ್ಟಿಕಾಂಶದ ಪ್ರಯೋಜನಗಳನ್ನು ಸಹ ನೀಡುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್‌ C ಮತ್ತು ವಿಟಮಿನ್‌ A ಯನ್ನು ಹೊಂದಿದೆ. ಇದರಲ್ಲಿಯ ಆಂಟಿಒಕ್ಸಿಡೆಂಟ್‌ ದೇಹ ಮತ್ತು ತ್ವಚೆಯಯನ್ನು ಶುದ್ಧೀಕರಿಸುತ್ತದೆ. ನಾರಿನಾಂಶ ಅಧಿಕವಾಗಿರುವುದರಿಂದ ಚಯಾಪಚಯ ಕ್ರಿಯೆ ಸುಲಭವಾಗಿ ಆಗುತ್ತದೆ.

ಇದನ್ನೂ ಓದಿ : Dry Fruits : ನೀವು ಡ್ರೈ ಫ್ರುಟ್ಸ್‌ ಪ್ರಿಯರೇ? ಹಾಗಾದರೆ, ಡ್ರೈ ಫ್ರುಟ್ಸ್‌ ತಿನ್ನುವ ಸರಿಯಾದ ಕ್ರಮ ಇಲ್ಲಿದೆ ನೋಡಿ

ಕರಬೂಜ ಹಣ್ಣಿ (Muskmelon) ನಿಂದ ಮಾಡಬಹುದಾದ ರಿಫ್ರೆಶಿಂಗ್‌ ಪಾನೀಯಗಳು:

  • ಕರಬೂಜದ ಜ್ಯೂಸ್‌
    ಕಲ್ಲಂಗಡಿ ಹಣ್ಣಿನ ಜ್ಯೂಸ್‌ ಮಾಡುವಂತೆ ಕರಬೂಜದ ಜ್ಯೂಸ್‌ ಕೂಡಾ ಮಾಡಿ. ಮೊದಲಿಗೆ ಕರಬೂಜವನ್ನು ಕತ್ತರಿಸಿ ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿಕೊಳ್ಳಿ. ಜ್ಯೂಸರ್‌ ಜಾರ್‌ಗೆ ಹಾಕಿ. ಅದಕ್ಕೆ ಸ್ವಲ್ಪ ನೀರು ಹಾಕಿ. ಸ್ವಲ್ಪ ಸಕ್ಕರೆ, ಕಾಳು ಮೆಣಸಿನ ಪುಡಿ, ಮತ್ತು ಕಲ್ಲುಪ‍್ಪು ಸೇರಿಸಿ. ಈಗ ರೆಡಿಯಾಯಿತು ಉಲ್ಲಾಸ ಹೆಚ್ಚಿಸುವ ಕರಬೂಜದ ಜ್ಯೂಸ್‌.
  • ಕರಬೂಜ ಮತ್ತು ಕಿವಿ ಹಣ್ಣಿನ ಸ್ಮೂಥಿ
    ಕರಬೂಜ ಮತ್ತು ಕಿವಿ ಹಣ್ಣು ಸೇರಿಸಿ ಮಾಡಿದ ಸ್ಮೂಥಿ ಬಹಳ ರುಚಿಯಾಗಿರುತ್ತದೆ. ಒಂದು ಕಿವಿ ಹಣ್ಣು, ಒಂದು ಕಪ‌್‌ ಕರಬೂಜ ಹಣ್ಣು , ಒಂದು ಕಪ್‌ ಹಾಲು, ಒಂದು ಚಮಚ ಜೇನುತುಪ್ಪ. ಇವೆಲ್ಲವನ್ನು ಮಿಕ್ಸರ್‌ ಜಾರ್‌ ಗೆ ಹಾಕಿ ಮಿಕ್ಸಿ ಮಾಡಿ. ನಂತರ ಸ್ವಲ್ಪ ಸಮಯ ಫ್ರಿಡ್ಜ್‌ನಲ್ಲಿಡಿ . ಆಮೇಲೆ ಸೇವಿಸಿ.
  • ಕರಬೂಜದ ಮಿಲ್ಕ್‌ಶೇಕ್‌
    ಮ್ಯಾಂಗೋ ಮಿಲ್ಕ್‌ ಶೇಕ್‌ಗೆ ಒಮ್ಮೆ ಬ್ರೆಕ್‌ ಕೊಡಿ, ರುಚಿಯಾದ, ರಸಭರಿತ ಕರಬೂಜದ ಮಿಲ್ಕ್‌ಶೇಕ್‌ ಟ್ರೈ ಮಾಡಿ. ಒಂದು ಕಪ್‌ ಕರಬೂಜ, ಒಂದು ಕಪ್‌ ಹಾಲು, ಬೇಕಾದರೆ ವೆನಿಲ್ಲಾ ಎಸ್ಸೆನ್ಸ್‌ ಅರ್ಧ ಚಮಚ ಇವೆಲ್ಲವನ್ನೂ ಜ್ಯೂಸ್‌ ಜಾರ್‌ಗೆ ಹಾಕಿ ಮಿಕ್ಸ್‌ ಮಾಡಿ. ಮೇಲಿಂದ ಸ್ವಲ್ಪ ಕ್ರೀಮ್‌ ಮತ್ತು ಐಸ್‌ ಕ್ಯೂಬ್‌ ಹಾಕಿ. ರುಚಿಯಾದ ತಂಪು ತಂಪು ಕರಬೂಜದ ಮಿಲ್ಕ್‌ ಶೇಕ್‌ ರೆಡಿ.

ಇದನ್ನೂ ಓದಿ: Horse Gram : ಹುರುಳಿ ಕಾಳಿನ ದಿಢೀರ್‌ ಸಾರು! ಮಾಡುವುದು ಹೇಗೆ ಗೊತ್ತೇ?

(Muskmelon is the best summer fruit to make refreshing drinks)

Comments are closed.