Samyuktha Hegde: ಸಿನಿಮಾದಂತೆ ಕಿರಿಕ್ ಸುದ್ದಿಗಳ ಮೂಲಕವೇ ಸುದ್ದಿಯಾಗ್ತಿದ್ದ ನಟಿ ಸಂಯುಕ್ತಾ ಹೆಗ್ಡೆ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆಯಿಂದ ನಾಪತ್ತೆಯಾಗಿದ್ದರು. ಆದರೆ ಈಗ ಮತ್ತೆ ಸೋಷಿಯಲ್ ಮೀಡಿಯಾ ಮೂಲಕ ಸಂಯುಕ್ತಾ ಹೆಗ್ಡೆ ಸದ್ದು ಮಾಡಿದ್ದಾರೆ. ಮೈ ಚಳಿ ಬಿಟ್ಟು ಬಿಕನಿ ತೊಟ್ಟು ಸಂಯುಕ್ತಾ ಪಡ್ಡೆಗಳ ಮೈ ಬಿಸಿ ಏರಿಸಿದ್ದಾರೆ.
(Samyuktha Hegde)ಕೆಲ ತಿಂಗಳ ಹಿಂದೆ ನಟಿ ಸಂಯುಕ್ತಾ ಕ್ರೀಂ ಸಿನಿಮಾದ ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಫೈಟಿಂಗ್ ಸೀನ್ ಶೂಟ್ ಮಾಡುವ ವೇಳೆ ನೆಲಕ್ಕೆ ಅಪ್ಪಳಿಸಿದಂತೆ ಬಿದ್ದಿದ್ದ ನಟಿ ಸಂಯುಕ್ತಾ ಮಂಡಿ ಚಿಪ್ಪು ಸೇರಿದಂತೆ ಎಲ್ಲೆಡೆ ಏಟಾಗಿ ಆಸ್ಪತ್ರೆ ಸೇರಿದ್ದರು.ಕಾಲಿಗೆ ತೀವ್ರ ಪ್ರಮಾಣದಲ್ಲಿ ಗಾಯವಾಗಿದ್ದರಿಂದ ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿತ್ತು. ಇದಾದ ಬಳಿಕ ನಟಿ ಸಂಯುಕ್ತಾ ಅಂದಾಜು ಮೂರು ತಿಂಗಳ ಕಾಲ ಬೆಡ್ ರೆಸ್ಟ್ ನಲ್ಲಿದ್ದರು.
ಈಗ ಚೇತರಿಸಿಕೊಂಡ ಸಂಯುಕ್ತಾ ತಾವು ಚೇತರಿಸಿಕೊಂಡು ಓಡಾಡುವ ಸುದ್ದಿ ಕೊಡೋ ಬದಲು, ಬಿಕನಿಯಲ್ಲಿ ಡ್ಯಾನ್ಸ್ ಮಾಡೋ ಪೋಟೋ,ವಿಡಿಯೋ ಹಂಚಿಕೊಳ್ಳೋ ಮೂಲಕ ಅಭಿಮಾನಿಗಳಿಗೆ ಗ್ರ್ಯಾಂಡ್ ಎಂಟ್ರಿಯ ನ್ಯೂಸ್ ಕೊಟ್ಟಿದ್ದಾರೆ.ಹೂವುಗಳ ಚಿತ್ತಾರದ ಬಿಕನಿ ತೊಟ್ಟ ಸಂಯುಕ್ತಾ ಸಖತ್ ಮ್ಯೂಸಿಕ್ ಹಾಗೂ ಸಾಂಗ್ ಗೆ ಸೊಂಟ ಬಳುಕಿಸಿದ್ದಾರೆ. ಮಾತ್ರವಲ್ಲ ಸಖತ್ ಎಕ್ಸಪ್ರೆಶನ್ ಕೂಡ ನೀಡಿ ಪಡ್ಡೆಗಳ ಮನಗೆದ್ದಿದ್ದಾರೆ. ಸಂಯುಕ್ತಾ ಬಿಕನಿ ಪೋಟೋ ಹಾಗೂ ವಿಡಿಯೋ ಸಖತ್ ವೈರಲ್ ಆಗಿದೆ. ಮೈಯಲ್ಲಿನ ಮೂಳೆಗಳೆಲ್ಲ ಅಲ್ಲಾಡುವಂತೆ ಡ್ಯಾನ್ಸ್ ಮಾಡಿರೋ ಸಂಯುಕ್ತಾ, all the attraction, the tension, Don’t u see, baby this is perfection? ಎಂದು ಕ್ಯಾಪ್ಸನ್ ನೀಡಿದ್ದಾರೆ.
ಇದನ್ನೂ ಓದಿ:Karnataka beat Vidarbha : ವಿದರ್ಭ ವಿರುದ್ಧ ಗೆದ್ದ ಕರ್ನಾಟಕ, ಮಯಾಂಕ್ ಬಳಗಕ್ಕೆ ಸತತ 2ನೇ ಜಯ
ಕೇವಲ ವಿಡಿಯೋ ಮಾತ್ರವಲ್ಲ ಇದರೊಂದಿಗೆ ನಟಿ ಸಂಯುಕ್ತಾ ತಮ್ಮ ಮೂರು ತಿಂಗಳ ಬಳಿಕ ಅಪ್ ಮಾಡ್ತಿರೋ ಮೊದಲ ವಿಡಿಯೋ ಎಂದು ಬರೆದಿದ್ದಾರೆ. ಮಾತ್ರವಲ್ಲ ತಮ್ಮ ಚಿಕಿತ್ಸೆ ಬಗ್ಗೆ ವಿವರಣೆ ನೀಡಿದ್ದು, ನನಗೆ ವೈದ್ಯರು ಚೆನ್ನಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಫಿಸಿಯೋಥೇರಪಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದು ಬರೆದಿದ್ದಾರೆ. ತರಿಸಿಕೊಳ್ಳುತ್ತಿರುವುದಕ್ಕೆ ಹರ್ಷವೆನ್ನಿಸುತ್ತಿದೆ ಎಂದು ಬರೆದಿದ್ದಾರೆ. ಇನ್ನು ಸಂಯುಕ್ತಾ ಮತ್ತೆ ಈ ರೀತಿಯ ಬಿಕನಿ ವಿಡಿಯೋ ಜೊತೆ ಮರಳಿದ್ದು ಅಭಿಮಾನಿಗಳಿಗೆ ಖುಷಿ ತಂದಿದ್ದು, ಹಲವರು ಒಳ್ಳೆಯ ಕಮೆಂಟ್ ಮಾಡ್ತಿದ್ದಾರೇ ಹಲವರು ಕೆಟ್ಟದಾಗಿ ಟೀಕಿಸಿ ಸಂಯುಕ್ತಾ ಕಾಲೆಳೆದಿದ್ದಾರೆ.
Kirik Bedagi is back in bikini: Samyuktha Hegde new video is viral