Tamil Thalaivas vs Bengaluru Bulls : ತಮಿಳ್ ತಲೈವಾಸ್ ಕೊಬ್ಬಿಳಿಸಿ ಅಗ್ರಸ್ಥಾನಕ್ಕೇರಿದ ಕೆಂಪು ಗೂಳಿಗಳು

ಪುಣೆ: (Tamil Thalaivas vs Bengaluru Bulls)ರೋಚಕ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡವನ್ನು 40-34ರ ಅಂತರದಲ್ಲಿ ಬಗ್ಗು ಬಡಿದ ಕೆಂಪು ಗೂಳಿ ಖ್ಯಾತಿಯ ಬೆಂಗಳೂರು ಬುಲ್ಸ್ (Bengaluru Bulls) ತಂಡ, ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ(Pro Kabaddi League) ಅಂಕಪಟ್ಟಿಲ್ಲಿ ಅಗ್ರಸ್ಥಾನಕ್ಕೇರಿದೆ.

ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್ ಪಡೆದ ತಮಿಳ್ ತಲೈವಾಸ್ (Tamil Talaivas) ವಿರುದ್ಧ 6 ಅಂಕಗಳ ಗೆಲುವು ಸಾಧಿಸಿತು. ಇದರೊಂದಿಗೆ ಲೀಗ್’ನಲ್ಲಿ 8ನೇ ಗೆಲುವು ದಾಖಲಿಸಿದ ಬುಲ್ಸ್ ಬಳಗ 46 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಪುಣೇರಿ ಪಲ್ಟನ್ ತಂಡವನ್ನು ಹಿಂದಕ್ಕೆ ತಳ್ಳಿ ಅಗ್ರಸ್ಥಾನಕ್ಕೇರಿತು. ಬೆಂಗಳೂರು ಬುಲ್ಸ್ ಆಡಿರುವ 13 ಪಂದ್ಯಗಳಿಂದ 8 ಗೆಲುವು, 4 ಸೋಲು ಹಾಗೂ ಒಂದು ಟೈನೊಂದಿಗೆ 46 ಅಂಕ ಗಳಿಸಿದ್ದರೆ, ಪುಣೇರಿ ಪಲ್ಟನ್ ತಂಡ 13 ಪಂದ್ಯಗಳಿಂದ 7 ಗೆಲುವು, 4 ಸೋಲು ಹಾಗೂ 2 ಟೈ ಫಲಿತಾಂಶದೊಂದಿಗೆ 44 ಅಂಕ ಗಳಿಸಿ 2ನೇ ಸ್ಥಾನದಲ್ಲಿದೆ

ತಮಿಳ್ ತಲೈವಾಸ್ ವಿರುದ್ಧದ ಪಂದ್ಯದಲ್ಲಿ ಸ್ಟಾರ್ ರೇಡರ್ ಭರತ್ ಹೂಡ 14 ರೇಡ್ ಪಾಯಿಂಟ್ಸ್ ಗಳಿಸಿ ಬುಲ್ಸ್ ತಂಡದ ಗೆಲುವಿಗೆ ಕಾರಣರಾದರು. ತಮಿಳ್ ತಲೈವಾಸ್ ತಂಡದ ಯುವ ರೇಡರ್ ನರೇಂದರ್ ಅವರನ್ನು ಮಟ್ಟಹಾಕಿದ ರೈಟ್ ಕಾರ್ನರ್ ಡಿಫೆಂಡರ್ ಸೌರಭ್ ನಂದಲ್ 5 ಟ್ಯಾಕಲ್ ಪಾಯಿಂಟ್’ಗಳೊಂದಿಗೆ ಮಿಂಚಿದರು.
ದಿನದ ಮತ್ತೊಂದು ಪಂದ್ಯದಲ್ಲಿ 2ನೇ ಆವೃತ್ತಿಯ ಚಾಂಪಿಯನ್ ಯು ಮುಂಬಾ, ಮೂರು ಬಾರಿಯ ಚಾಂಪಿಯನ್ಸ್ ಪಾಟ್ನಾ ಪೈರೇಟ್ಸ್ ಸವಾಲನ್ನು 36-23ರ ಅಂತರದಲ್ಲಿ ಮೆಟ್ಟಿ ನಿಂತಿತು.

Tamil Thalaivas vs Bengaluru Bulls : ಪ್ರೊ ಕಬಡ್ಡಿ ಲೀಗ್-9: ಸೋಮವಾರದ ಪಂದ್ಯಗಳು

  1. ಬೆಂಗಾಲ್ ವಾರಿಯರ್ಸ್ Vs ಪುಣೇರಿ ಪಲ್ಟನ್
  2. ಗುಜರಾತ್ ಜೈಂಟ್ಸ್ Vs ಹರ್ಯಾಣ ಸ್ಟೀಲರ್ಸ್

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಇದನ್ನೂ ಓದಿ : Pro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

ಇದನ್ನೂ ಓದಿ : Pro Kabaddi League: ಇಂದು “ತ್ರಿಪಲ್ ಪಂಗಾ”, ಸತತ 6ನೇ ಸೋಲಿನ ಭೀತಿಯಲ್ಲಿ ಹಾಲಿ ಚಾಂಪಿಯನ್ಸ್ ದಬಾಂಗ್ ಡೆಲ್ಲಿ

ಸ್ಥಳ: ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾಳೇವಾಡಿ; ಪುಣೆ (ಮಹಾರಾಷ್ಟ್ರ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Pro Kabaddi League: Red Bulls beat Tamil Thalaivas to top spot

Comments are closed.