ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿನಿಮಾ ಮೇಲೆ ಎಲ್ಲರೂ (Kirik Party 2 Movie) ಕಣ್ಣಿಟ್ಟಿದ್ದಾರೆ. ‘777 ಚಾರ್ಲಿ’ ಸಿನಿಮಾ ಅದ್ಭುತ ಸಕ್ಸಸ್ ಬಳಿಕ ರಕ್ಷಿತ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೀಗಾಗಿ ಮುಂದಿನ ಸಿನಿಮಾಗಳು ಯಾವುದು? ಯಾವುದು ಮೊದಲು ಸೆಟ್ಟೇರುತ್ತೆ? ಅನ್ನೋದನ್ನು ಕುತೂಹಲದಿಂದ ನೋಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ಕುಮಾರ್ ಕಾಂಬಿನೇಷನ್‌ನಲ್ಲಿ ಗೆದ್ದಿದ್ದ ಸಿನಿಮಾ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’. ಇದೇ ಕಾಂಬಿನೇಷನ್‌ನಲ್ಲೀಗ ‘ಸಪ್ತ ಸಾಗರದಾಚೆ ಎಲ್ಲೋ’ ರಿಲೀಸ್‌ಗೆ ರೆಡಿಯಾಗುತ್ತಿದೆ.
ಇತ್ತೀಚೆಗೆಗೆ ಕಿರಿಕ್ ಪಾರ್ಟಿ 6 ವರ್ಷಗಳನ್ನು ಪೂರೈಸಿತ್ತು. ಈ ಬೆನ್ನಲ್ಲೇ ಕಳೆದ ಕೆಲವು ದಿನಗಳಿಂದ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಕಾಂಬಿನೇಷನ್‌ನ “ಕಿರಿಕ್ ಪಾರ್ಟಿ 2” ಬಗ್ಗೆ ನೂರೆಂಟು ಸುದ್ದಿ ಓಡಾಡಿತ್ತು. ಆದ್ರೀಗ ರಕ್ಷಿತ್ ಶೆಟ್ಟಿ ‘ಕಿರಿಕ್ ಪಾರ್ಟಿ 2’ ಆಗುತ್ತಾ ಇಲ್ಲವಾ. ಅನ್ನೋದಕ್ಕೊಂದು ಸುಳಿವು ಕೊಟ್ಟಿದ್ದಾರೆ. ಅಷ್ಟಕ್ಕೂ ರಕ್ಷಿತ್ ಶೆಟ್ಟಿ ಮುಂದಿನ ನಡೆಯೇನು? ಎನ್ನುವುದರ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿದೆ. ರಕ್ಷಿತ್ ಶೆಟ್ಟಿಯ ‘ಕಿರಿಕ್ ಪಾರ್ಟಿ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದರೆ, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಯುವಕರಿಗೆ ತುಂಬಾನೇ ಇಷ್ಟ ಆಗಿತ್ತು.
ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಸಕ್ಸಸ್ ಕಂಡಿತ್ತು. ಈ ಸಿನಿಮಾ ತೆರೆಕಂಡು ಇತ್ತೀಚೆಗೆ 6 ವರ್ಷಗಳನ್ನು ಪೂರೈಸಿದೆ. ಈ ಬೆನ್ನಲ್ಲೇ ಮತ್ತೆ ‘ಕಿರಿಕ್ ಪಾರ್ಟಿ 2’ ಆರಂಭ ಆಗುತ್ತೆ ಅನ್ನೋ ಮಾತು ಸುದ್ದಿ ಕಳೆದ ಕೆಲವು ದಿನಗಳಿಂದ ‘ಕಿರಿಕ್ ಪಾರ್ಟಿ 2’ ಬಗ್ಗೆನೇ ಹಲವು ಸುದ್ದಿಗಳು ಹರಿದಾಡುತ್ತಿತ್ತು. ಅದಕ್ಕೀಗ ರಕ್ಷಿತ್ ಶೆಟ್ಟಿ ಟ್ವೀಟ್ ಮೂಲಕ ಉತ್ತರ ಕೊಟ್ಟಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಬಳಿಕ ತನ್ನ ಮುಂದೆ ಹಲವು ಸಿನಿಮಾಗಳಿವೆ. ‘ಕಿರಿಕ್ ಪಾರ್ಟಿ 2 ಬಗ್ಗೆ ನನ್ನ ಬಳಿ ಬೇರೆಯದ್ದೇ ಪ್ಲ್ಯಾನ್ ಇದೆ. ಅದನ್ನು ಮುಂದೆ ನೋಡೋಣ. ನೀವು ಓದುತ್ತಿರುವ ಸುದ್ದಿಗಳು ಸುಳ್ಳು. ಯಾವತ್ತೂ ಸತ್ಯವಾಗಿರಲಿಲ್ಲ’ ಎಂದು ಟ್ವೀಟ್ ಮಾಡುವ ಮೂಲಕ ಸದ್ಯಕ್ಕಂತೂ ‘ಕಿರಿಕ್ ಪಾರ್ಟಿ 2’ ಸೆಟ್ಟೇರುವುದಿಲ್ಲ ಅನ್ನೋದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.
My line ups are quite clear after SSE. i.e. RA, PK 1 and 2, M2M… these are the only four films which gives me sleepless nights. No KP2 as well… but I have different plans for KP2. Let’s see. Anything else u read on the internet isn’t true. Was never true… Love you all 🤗
— Rakshit Shetty (@rakshitshetty) January 30, 2023
ಸದ್ಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಳಿಕ ರಕ್ಷಿತ್ ನಾಲ್ಕು ಸಿನಿಮಾಗಳು ಕೈಯಲ್ಲಿವೆ. ಮೊದಲನೆಯದು ‘ರಿಚರ್ಡ್ ಆಂಟೋನಿ’ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ರಕ್ಷಿತ್ ಶೆಟ್ಟಿನೇ ಈ ಸಿನಿಮಾವನ್ನು ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಆ ಬಳಿಕ ಪುಣ್ಯಕೋಟಿ 1 ಮತ್ತು 2 ಸಿನಿಮಾವಿದೆ. ನಂತರ ‘ಮಿಡ್‌ನೈಟ್ ಟು ಮೋಕ್ಷ’. ಈ ಸಿನಿಮಾಗಳಿಗಾಗಿ ರಾತ್ರಿ ನಿದ್ದೆ ಮಾಡುತ್ತಿಲ್ಲ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಕ್ಸಸ್ ವೇಳೆನೇ ಈ ಮಾತನ್ನು ಹೇಳಿದ್ದರು.
ಇದನ್ನೂ ಓದಿ : ನಟ ದರ್ಶನ್ ಅಭಿನಯದ ಕ್ರಾಂತಿ 100 ಕೋಟಿ ರೂ. ಕ್ಲಬ್ ಸೇರಿದ 4ನೇ ಸಿನಿಮಾ
ಇದನ್ನೂ ಓದಿ : ರಿಲೀಸ್ ದಿನ ಅಬ್ಬರಿಸಿದ್ದ ಕ್ರಾಂತಿ ನಂತರ 3 ದಿನಗಳಲ್ಲಿ ಗಳಿಸಿದೆಷ್ಟು ಗೊತ್ತಾ ?
ಇದನ್ನೂ ಓದಿ : AI ಪೋಟೋಸ್ ಗೆ ಮನಸೋತ ಸ್ಯಾಂಡಲ್ ವುಡ್: ನಟಿಮಣಿಯರ ಪೋಟೋಸ್ ವೈರಲ್
ಬೇರೆ ಬೇರೆ ಪ್ರೊಡಕ್ಷನ್ ಹೌಸ್‌ಗಳಿಂದ ಆಫರ್ ಬರುತ್ತಿದ್ದರೂ ತನಗೆ ಸಮಯವಿಲ್ಲ ಎಂದು ಹೇಳಿದ್ದರು. ಈಗಾಗಲೇ ಐದು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದೇನೆ. ಆ ಸಿನಿಮಾಗಳು ಮುಗಿದ ಬಳಿಕವೇ ಹೊಸ ಸಿನಿಮಾಗಳ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದು ಹೇಳಿದ್ದರು. ಇತ್ತ ರಿಷಬ್ ಶೆಟ್ಟಿ ಕೂಡ ಬ್ಯುಸಿಯಾಗಿದ್ದಾರೆ. ಹೀಗಾಗಿ ಇಬ್ಬರ ಕಾಂಬಿನೇಷನ್‌ನಲ್ಲೇ ‘ಕಿರಿಕ್ ಪಾರ್ಟಿ 2’ ಬರುತ್ತಾ? ಅನ್ನೋದು ರಕ್ಷಿತ್ ಶೆಟ್ಟಿ ಟ್ವೀಟ್ ಬಳಿಕ ದೊಡ್ಡ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
Kirik Party 2 Movie : Is it happening in Kirik Party 2 or not? Rakshit Shetty clarified through a tweet