Mother-in-law murdered by nephew: ಲಡಾಕ್‌ ಪ್ರವಾಸಕ್ಕೆ ಹಣ ನೀಡಲು ನಿರಾಕರಿಸಿದ ಅತ್ತೆ: ಸುತ್ತಿಗೆಯಿಂದ ಅತ್ತೆಯ ತಲೆಯನ್ನೇ ಒಡೆದ ಸೋದರಳಿಯ

ಬುಲಂದ್‌ಶಹರ್: (Mother-in-law murdered by nephew) ಲಡಾಖ್ ಪ್ರವಾಸಕ್ಕೆಂದು ಹಣ ಮತ್ತು ಕಾರನ್ನು ಕೊಡಲು ನಿರಾಕರಿಸಿದ ಹಿನ್ನಲೆಯಲ್ಲಿ ಸೋದರಳಿಯ ತನ್ನ ಅತ್ತೆಯ ತಲೆಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಪ್ರಕರಣದ ಕುರಿತು ದೂರು ದಾಖಲಾಗಿದ್ದು, ಆರೋಪಿ ಸಾಗರ್‌ ( 22 ವರ್ಷ) ಪೊಲೀಸರ ಕೈಸೆರೆಯಾಗಿದ್ದಾನೆ.

ಸೋದರಳಿಯನೋರ್ವ ತನ್ನ ಅತ್ತೆಯ ಬಳಿ ತನ್ನ ಗೆಳತಿಯನ್ನು ಲಡಾಖ್‌ಗೆ ಪ್ರವಾಸಕ್ಕೆ ಕರೆದೊಯ್ಯಲು ಹಣ ಮತ್ತು ಕಾರಿನ ಕೀಗಳನ್ನು ಕೇಳಿದ್ದಾನೆ. ಇದನ್ನು ಕೊಡಲು ನಿರಾಕರಿಸಿದ್ದಕ್ಕೆ ಸುತ್ತಿಗೆಯಿಂದ ತನ್ನ ಅತ್ತೆಯ ತಲೆಯನ್ನು ಒಡೆದು ಕೊಲೆ ಮಾಡಿದ್ದಾನೆ. ನಂತರ ಮೃತ ಮಹಿಳೆಯ ಪತಿ ಗಜ್ವೀರ್ ಸಿಂಗ್ ಮುದುವೆಗೆ ಹೋಗಿದ್ದು, ಮದುವೆಯಿಂದ ಮನೆಗೆ ಹಿಂದಿರುಗಿದಾಗ ಆಕೆಯ ದೇಹವು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಆಕೆಯ ತಲೆಯ ಮೇಲೆ ತೀವ್ರವಾದ ಗಾಯದ ಗುರುತುಗಳನ್ನು ಗಮನಿಸಿದ್ದಾರೆ. ಕೂಡಲೆ ಪ್ರಕರಣದ ಕುರಿತು ಮೃತ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ನಿಫರ್ ಡಾಗ್‌ನೊಂದಿಗೆ ಪೊಲೀಸ್ ತಂಡವು ಅಪರಾಧ ಸ್ಥಳಕ್ಕೆ ಆಗಮಿಸಿದ್ದು, ಸ್ನಿಫರ್ ಡಾಗ್ ಗುಟ್ಟಾಗಿ ಮನೆಯ ಮೇಲ್ಛಾವಣಿಯ ಮೂಲಕ ಹೋಗಿ ತನ್ನ ಸ್ನೇಹಿತರ ಜೊತೆಗೆ ಸೋದರಳಿಯ ಸಾಗರ್ ಇದ್ದ ಕೋಣೆಯನ್ನು ತಲುಪಿತು ಮತ್ತು ಅವನ ಮೇಲೆ ಬೊಗಳಲು ಪ್ರಾರಂಭಿಸಿತು. ಅಪರಾಧದಲ್ಲಿ ಭಾಗಿಯಾಗಿರುವ ಶಂಕೆಯಿಂದ ಪೊಲೀಸರು ಆತನನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡರು.

ತನ್ನ ಗೆಳತಿಯನ್ನು ಲಡಾಖ್‌ಗೆ ಪ್ರವಾಸಕ್ಕೆ ಕರೆದೊಯ್ಯಲು ಹಣ ಮತ್ತು ಕಾರಿನ ಕೀಗಳನ್ನು ನೀಡಲು ನಿರಾಕರಿಸಿದ ನಂತರ ಅವನು ತನ್ನ ಅತ್ತೆಯ ತಲೆಯನ್ನು ಸುತ್ತಿಗೆಯಿಂದ ಹೊಡೆದು ಸಾಯಲು ಬಿಟ್ಟಿದ್ದಾಗಿ ಸಾಗರ್ ಪೊಲೀಸರಿಗೆ ವಿಚಾರಣೆಯ ಸಮಯದಲ್ಲಿ ತಿಳಿಸಿದ್ದಾನೆ. ಸಾಗರ್ ಈ ಹಿಂದೆ ಮರ್ಚೆಂಟ್ ಮೆರಿನ್ ಆಗಿ ಕೆಲಕಾಲ ಕೆಲಸ ಮಾಡಿದ್ದು, ಒಂದು ವರ್ಷದ ಹಿಂದೆ ಮನೆಗೆ ಮರಳಿದ್ದರು. ಸಾಗರ್ ಮೊದಲಿಗೆ ಸ್ಥಳೀಯ ವ್ಯಕ್ತಿಯ ಮೇಲೆ ಕೊಲೆಯ ಆರೋಪವನ್ನು ಹೊರಿಸುವ ಮೂಲಕ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದನು. ಆದರೆ ಪೊಲೀಸರು ಆತನ ಅಂಗಿಯ ಮೇಲೆ ಕೆಲವು ರಕ್ತದ ಕಲೆಗಳನ್ನು ಗಮನಿಸಿದ್ದು, ಆತನನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Attack on Indians holding flag: ಖಲಿಸ್ತಾನಿಯರ ಅಟ್ಟಹಾಸ: ಆಸ್ಟ್ರೇಲಿಯಾದಲ್ಲಿ ತ್ರಿವರ್ಣ ಧ್ವಜ ಹಿಡಿದ ಭಾರತೀಯರ ಮೇಲೆ ಹಲ್ಲೆ, ವಿಡಿಯೋ ವೈರಲ್‌

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Mother-in-law murdered by nephew: Mother-in-law refused to pay for Ladakh trip: Nephew smashed mother-in-law’s head with a hammer

Comments are closed.