ತಮ್ಮ ಹಾಲು ಬಿಳುಪಿನ ಮೈಬಣ್ಣ ಹಾಗೂ ಸೌಂದರ್ಯ, ನೀಳಕಾಯದಿಂದಲೇ ಪಡ್ಡೆಗಳ ಎದೆ ಬಡಿತ ಹೆಚ್ಚಿಸುವ ಸುಂದರಿ ಶ್ರದ್ಧಾ ದಾಸ್ (Shraddha Das) ಸದ್ಯ ಮತ್ತೊಂದು ಹಾಟ್ ಹಾಟ್ ಪೋಟೋದ ಮೂಲಕ ಯುವಜನತೆಯ ಹೃದಯ ಕದ್ದಿದ್ದಾರೆ. ತಮ್ಮ ಸೌಂದರ್ಯಕ್ಕೆ ಸ್ಪರ್ಧೆ ಒಡ್ಡುವಂತಹ ಸೀರೆಯಲ್ಲಿ ಸಖತ್ ಹಾಟ್ ಹಾಟ್ ಅವತಾರದಲ್ಲಿ ಶೃದ್ಧಾ ದಾಸ್ ಮಿಂಚಿದ್ದು, ಪೋಟೋಸ್ ಸಖತ್ ವೈರಲ್ ಆಗಿದೆ.

ಅಚ್ಚ ಬಿಳುಪಿನ ಸುಂದರಿ ಶೃದ್ಧಾ ದಾಸ್ (Shraddha Das ) ಕಪ್ಪು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡರೇ ಹೇಗಿರುತ್ತೇ ಹೇಳಿ? ಆಹಾ ಅಂತ ನೀವು ಊಹಿಸಿಕೊಳ್ಳೋದು ಬೇಡ ಯಾಕೆಂದರೇ ಸ್ವತಃ ಶೃದ್ಧ ದಾಸ್ ಪಾರ್ಟಿ ವೇರ್ ಬ್ಲ್ಯಾಕ್ ಸ್ಸಾರಿಯಲ್ಲಿ ಮಿಂಚಿದ್ದಾರೆ. ಕೇವಲ ಸೀರೆ ಉಟ್ಟಿರೋದು ಮಾತ್ರವಲ್ಲ ಕಪ್ಪು ಸೀರೆಯ ಮನಸೆಳೆಯುವ ಪೋಟೋವನ್ನು ಶೃದ್ಧಾ ದಾಸ್ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದಾರೆ.

ಬ್ಲ್ಯಾಕ್ ಬ್ಲೌಸ್ ಅದಕ್ಕೊಪ್ಪುವ ಪಿಂಕ್ ಡಿಸೈನ್ ನ ಕಪ್ಪು ಪಾರ್ಟಿ ವೇರ್ ಸ್ಸಾರಿ ಹಾಗೂ ಸಿಂಪಲ್ ಮೇಕಪ್‌ನಲ್ಲಿ ಶೃದ್ಧಾ ಸೌಂದರ್ಯ ಮತ್ತಷ್ಟು ಇಮ್ಮಡಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಬೋಲ್ಡ್ ಪೋಟೋಗಳನ್ನು ಹಂಚಿಕೊಳ್ಳುತ್ತಲೇ ಸದ್ದು ಮಾಡುತ್ತಿದ್ಧ ಶೃದ್ಧಾ ದಾಸ್ ಈ ಸೀರೆ ಪೋಟೋದ ಮೂಲಕ ಮತ್ತಷ್ಟು ಕಿಚ್ಚು ಹಚ್ಚಿದ್ದಾರೆ.

2008 ರಲ್ಲಿ ತೆಲುಗು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶೃದ್ಧಾ ದಾಸ್ (Shraddha Das ), ಇದುವರೆಗೂ ಹಲವು ಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಕನ್ನಡದ ಮಂದಿಗೂ ಚಿರಪರಿಚಿತರಾಗಿರೋ ಶೃದ್ಧಾ ದಾಸ್ 2021 ರಲ್ಲಿ ತೆರೆಕಂಡ ಕೋಟಿಗೊಬ್ಬ -3 ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಗಮನ ಸೆಳೆದಿದ್ದರು. ಮಹಾರಾಷ್ಟ್ರ ಮೂಲದ ಶೃದ್ಧಾ ದಾಸ್ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಶೃದ್ಧಾ ದಾಸ್, ಏಕ್ ಮಿನಿ ಕಥಾ,ಆರ್ಥಮ್ ಸೇರಿದಂತೆ ಹಲವು ಗಮನಸೆಳೆವ ಸಿನಿಮಾ ಶೋದಲ್ಲಿ ಮಿಂಚಿದ್ದಾರೆ.

ಕೇವಲ ನಟನೆ ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಆಗಿರೋ ಶೃದ್ಧಾ ದಾಸ್ (Shraddha Das ) ಇನ್ ಸ್ಟಾಗ್ರಾಂನಲ್ಲಿ 2.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅದರಲ್ಲೂ ಈಗ ಶೃದ್ಧಾ ದಾಸ್ ಶೇರ್ ಮಾಡಿರೋ ಬ್ಲ್ಯಾಕ್ ಸ್ಸಾರಿ ಪೋಟೋದ ಬಳಿಕ ಫಾಲೋವರ್ಸ್ ಸಂಖ್ಯೆ ಮತ್ತಷ್ಟು ಹೆಚ್ಚೋದು ಖಚಿತ ಎನ್ನಲಾಗ್ತಿದೆ.
ಇದನ್ನೂ ಓದಿ : Actor JK to marry : ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ನಟ ಜೆಕೆ : ಇವರೇ ನೋಡಿ ಜೆಕೆ ಹುಡುಗಿ
ಇದನ್ನೂ ಓದಿ : ನನ್ನರಸಿ ರಾಧೆಯ ನಾಯಕಿ ಇಂಚರಾ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟೆರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ
Kotigobba 3 Beauty Shraddha Das Black Saree Photoshoot