Actor JK to marry : ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ನಟ ಜೆಕೆ : ಇವರೇ ನೋಡಿ ಜೆಕೆ ಹುಡುಗಿ

Actor JK to marry : ಸ್ಯಾಂಡಲ್​ವುಡ್​ ನಟ ಜಯರಾಮ್​ ಕಾರ್ತಿಕ್​​​ ಸಿನಿಮಾಗಳಿಗಿಂತ ಹೆಚ್ಚಾಗಿ ಕಿರುತೆರೆಯಲ್ಲಿಯೇ ಹೆಚ್ಚು ಸದ್ದು ಮಾಡಿದಂತವರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ ಜೆಕೆ ಎಂಬ ಪಾತ್ರದಲ್ಲಿ ನಟಿಸಿದ್ದ ಜಯರಾಮ್​ ಕಾರ್ತಿಕ್​ ಅಲಿಯಾಸ್​ ಜೆಕೆ ಮನೆ ಮಾತಾಗಿದ್ದರು. ಇವರು ಹೆಂಡ್ತಿ ಎಂದು ಕರೆಯುತ್ತಿದ್ದ ರೀತಿಯಂತೂ ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. ಈ ಧಾರವಾಹಿ ಮೂಲಕ ಕರ್ನಾಟಕದ ಮನೆ ಮನೆಗಳಲ್ಲಿ ಜನಪ್ರಿಯವಾಗಿದ್ದ ನಟ ಜೆಕೆ ಬಳಿಕ ಬಿಗ್​ಬಾಸ್​ನಲ್ಲಿಯೂ ಸ್ಪರ್ಧಿಯಾಗಿ ಆಗಮಿಸಿದ್ದರು.


ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ ರಫ್​ & ಟಫ್​ ಆಗಿದ್ದ ಜೆಕೆಯನ್ನು ನೋಡುತ್ತಿದ್ದ ಪ್ರೇಕ್ಷಕರು ಇವರು ನಿಜ ಜೀವನದಲ್ಲಿಯೂ ಹೀಗೆ ಇದ್ದಿರಬಹುದು ಎಂದು ಅಂದುಕೊಳ್ತಿದ್ರು. ಆದರೆ ಬಿಗ್​ ಬಾಸ್​ ಇವರು ಸಖತ್​ ಕೂಲ್​ ಆಗಿ ಇದ್ದುದನ್ನು ಕಂಡು ರಿಯಲ್​ ಜೆಕೆ ಬೇರೆಯ ರೀತಿಯೇ ಇದ್ದಾರೆ ಎಂಬುದು ಮನವರಿಕೆ ಆಗಿತ್ತು. ಕನ್ನಡ ಕಿರುತೆರೆ ಹಾಗೂ ಸ್ಯಾಂಡಲ್​ವುಡ್​ ಜೊತೆಗೆ ಜಯರಾಮ್​ ಕಾರ್ತಿಕ್​ ಹಿಂದಿ ಕಿರುತೆರೆಯಲ್ಲಿಯೂ ನಟಿಸಿದ್ದಾರೆ. ರಾವಣನ ಪಾತ್ರ ನಿರ್ವಹಿಸುವ ಮೂಲಕ ಅಲ್ಲಿಯೂ ತಮ್ಮ ಛಾಪನ್ನೂ ಮೂಡಿಸಿ ಬಂದವರು ಜೆಕೆ.


ಇದರ ಜೊತೆಯಲ್ಲಿ ಬಾಲಿವುಡ್​ ಅಂಗಳಕ್ಕೂ ಕಾಲಿಡುತ್ತಿರುವ ನಟ ಜೆಕೆ ಪುಷ್ಪ ಐ ಹೇಟ್​ ಟಿಯರ್ಸ್​ನ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಎಲ್ಲಾ ವೃತ್ತಿ ಜೀವನದ ಅಪ್​ಡೇಟ್ಸ್​ ನಡುವೆ ಇದೀಗ ಜೆಕೆ ಮದುವೆ ಆಗ್ತಿದ್ದಾರೆ ಎಂಬ ಸುದ್ದಿಯು ಎಲ್ಲೆಡೆ ಹರಿದಾಡುತ್ತಿದೆ. ಜೆಕೆ ಶೀಘ್ರದಲ್ಲಿಯೇ ಅಪರ್ಣಾ ಸಮಂತಾ ಎಂಬವರ ಜೊತೆ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್​ ಆಗಿದೆ.


ಅಪರ್ಣಾ ಸಮಂತಾ ವೃತ್ತಿಯಲ್ಲಿ ಫ್ಯಾಶನ್​ ಡಿಸೈನರ್​ ಆಗಿದ್ದು ಸಾಕಷ್ಟು ಸೆಲೆಬ್ರಿಟಿಗಳಿಗೆ ಔಟ್​ಫಿಟ್​ ಡಿಸೈನ್​ ಮಾಡಿದ್ದಾರೆ. ಇಬ್ಬರೂ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಖಾತೆಗಳಲ್ಲಿ ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ. ಹೀಗಾಗಿ ಇವರಿಬ್ಬರೂ ಸಧ್ಯದಲ್ಲಿಯೇ ಮದುವೆಯಾಗಬಹುದು ಎಂಬ ಗುಸು ಗುಸು ಎಲ್ಲೆಡೆ ಹರಿದಾಡಿದೆ.

ಇದನ್ನು ಓದಿ : acid attack victim : ಆ್ಯಸಿಡ್​ ಸಂತ್ರಸ್ತೆಗೆ 5ನೇ ಶಸ್ತ್ರಚಿಕಿತ್ಸೆ: ಅನಾರೋಗ್ಯಕ್ಕೊಳಗಾದ ಯುವತಿ ಐಸಿಯುಗೆ ಶಿಫ್ಟ್​

ಇದನ್ನೂ ಓದಿ : rape hubby’s friend :ಪತಿಯೊಂದಿಗೆ ಸಲುಗೆಯಿಂದಿದ್ದ ಮಹಿಳೆಯ ಮೇಲೆ ಗ್ಯಾಂಗ್​​ರೇಪ್​ಗೆ ಸುಪಾರಿ ಕೊಟ್ಟ ಪತ್ನಿ

Comments are closed.