ಸ್ಯಾಂಡಲ್ ವುಡ್ ನಿಂದ ಸದ್ಯ ಬೇರೆಭಾಷೆಗಳಲ್ಲಿ ಮಿಂಚ್ತಿರೋ ನಟಿ ಕೃತಿ ಕರಬಂಧ ಸದ್ಯ ತಮ್ಮ ಹಾಟ್ ಹಾಟ್ ಪೋಟೋ ಶೂಟ್ ನಿಂದಾಗಿ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ. ಒಂದು ಕಾಲದಲ್ಲಿ ಮದುವೆ ಸೇರಿದಂತೆ ಪರ್ಸನಲ್ ವಿಚಾರಕ್ಕೆ ಸುದ್ದಿಯಾಗಿದ್ದ ಕೃತಿ ಕರಬಂಧ (kriti kharbanda), ಸದ್ಯ ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ಡೇಟಿಂಗ್ ನಲ್ಲಿದ್ದಾರೆ.

ಸಿನಿಮಾ ಮಧ್ಯದಲ್ಲಿ ಸದಾ ಟ್ರಿಪ್, ಸ್ವಿಮ್ಮಿಂಗ್ ಅಂತ ಓಡಾಡೋ ಕೃತಿ ಕರಬಂದ್ ತಮ್ಮ ಲೇಟೆಸ್ಟ್ ಅಪ್ಡೇಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡೋಕೆ ಮರೆಯೋದಿಲ್ಲ. ಈಗಲೂ ಅಷ್ಟೇ ಪುಲ್ಕಿತ್ ಸಾಮ್ರಾಟ್ ಜೊತೆ ಡೇಟ್, ಓಟಿಂಗ್ ಅಂತೆಲ್ಲ ಓಡಾಡಿಕೊಂಡಿರೋ ಕೃತಿ ಕರಬಂದ್ ಸಖತ್ ಹಾಟ್ ಪೋಟೋ ಶೇರ್ ಮಾಡಿದ್ದಾರೆ.

ಸ್ವಿಮ್ಮಿಂಗ್ ಫೂಲ್ ನಲ್ಲಿ ಕೃತಿ ವೈಟ್ ಬಿಕನಿಯಲ್ಲಿ ತಮ್ಮ ಸೌಂದರ್ಯ ತೆರೆದಿಟ್ಟಿದ್ದಾರೆ. ತಣ್ಣನೆಯ ನೀರಿನಲ್ಲಿ ಬಿಕನಿ ತೊಟ್ಟು ರಿಲ್ಯಾಕ್ಸ್ ಮಾಡ್ತಿರೋ ಕೃತಿ ಅಲ್ಲೇ ಪ್ರೆಂಚ್ ಪ್ರೈಸ್ ಸವಿಯುತ್ತ ಸಖತ್ ಪೋಸ್ ನೀಡಿದ್ದಾರೆ. ಮತ್ಸ್ಯ ಕನ್ಯೆಯಂತೆ ಕೃತಿಕರಬಂದ್ ಪೋಸ್ ನೀಡಿದ್ದು ಕೃತಿ ಸೌಂದರ್ಯ ಕಂಡ ಅಭಿಮಾನಿಗಳು ಮನಸೋತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೃತಿ ಪೋಟೋಗಳು ಸಖತ್ ವೈರಲ್ ಆಗಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಯಶಸ್ವಿ ಸಿನಿಮಾ ಗೂಗ್ಲಿ ಮೂಲಕ ಕನ್ನಡಕ್ಕೆ ಕಾಲಿಟ್ಟ ಕೃತಿ ಬಳಿಕ ಬಾಲಿವುಡ್ ಗೆ ಹಾರಿದ್ದಾರೆ. ಸದ್ಯ ಸಾಕಷ್ಟು ಬಾಲಿವುಡ್ ಸಿನಿಮಾದಲ್ಲಿ ನಟಿಸಿರೋ ಕೃತಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪೋಟೋಶೂಟ್ ಹಾಗೂ ಹಾಟ್ ರೀಲ್ಸ್ ವಿಡಿಯೋಗಳ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡುತ್ತಲೇ ಇರುತ್ತಾರೆ. ಸದ್ಯ ಇನ್ ಸ್ಟಾಗ್ರಾಂ ನಲ್ಲಿ 7.7 ಮಿಲಿಯನ್ ಫಾಲೋವರ್ಸ್ ಹೊಂದಿರೋ ಕೃತಿ ಕರಬಂಧ ಹೊಸ ಪೋಟೋ ಸಖತ್ ವೈರಲ್ ಆಗಿದ್ದು, ಪಡ್ಡೆಹೈಕಳ ನಿದ್ದೆ ಕದ್ದಿದೆ.
ಇದನ್ನೂ ಓದಿ : ಹರಿತವಾದ ಕಥೆ, ರೋಚಕ ತಿರುವುಗಳ ‘ಧರಣಿ ಮಂಡಲ ಮಧ್ಯದೊಳಗೆ’ ಟೀಸರ್ ರಿಲೀಸ್
ಇದನ್ನೂ ಓದಿ : Sai Pallavi : ವಿರಾಟಪರ್ವಂ ರಿಲೀಸ್ ಹೊತ್ತಿನಲ್ಲಿ ಸಾಯಿಪಲ್ಲವಿ ವಿವಾದ : ಹೈದ್ರಾಬಾದ್ ನಟಿ ವಿರುದ್ಧ FIR
kriti kharbanda Photoshoot in Cold water