ಮುಂದಿನ ವರ್ಷದಿಂದ ಆರ್‌ಸಿಬಿ, ಸಿಎಸ್‌ಕೆ, ಮುಂಬೈ, ಕೆಕೆಆರ್ ಆದಾಯ ಡಬಲ್

ಬೆಂಗಳೂರು: ಇಲ್ಲಿಯವರೆಗಿನದ್ದು ಒಂದು ಲೆಕ್ಕ, ಇನ್ನು ಮುಂದೆ ಮತ್ತೊಂದು ಲೆಕ್ಕ. ಇದು ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ (Richest t20 leagues in the world) ಎಂಬ ಖ್ಯಾತಿಯ ಐಪಿಎಲ್ (IPL) ಟೂರ್ನಿಯ ಕೋಟಿ ಕೋಟಿ ಲೆಕ್ಕ. ಐಪಿಎಲ್ ಟೂರ್ನಿಗೆ ಸರಿಸಾಟಿಯಾಗಿ ನಿಲ್ಲುವ ಮತ್ತೊಂದು ಕ್ರಿಕೆಟ್ ಲೀಗ್ ಈ ಭೂಮಂಡಲದಲ್ಲೇ ಇಲ್ಲ. ಸಾವಿರಾರು ಕೋಟಿಗಳ ವ್ಯವಹಾರ ಮಾಡುವ ಐಪಿಎಲ್ ಟೂರ್ನಿ ಈಗ ಬ್ರಾಡ್ ಕಾಸ್ಟಿಂಗ್ ರೈಟ್ಸ್ (Ipl broadcasting rights) ವಿಚಾರದಲ್ಲೂ ದಾಖಲೆ ನಿರ್ಮಿಸಿದೆ. ಮುಂಬೈನಲ್ಲಿ ನಡೆದ ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ ಬರೋಬ್ಬರಿ 48 ಸಾವಿರ ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆ. ಟಿವಿ ರೈಟ್ಸ್ ಮತ್ತು ಡಿಜಿಟಲ್ ರೈಟ್ಸ್ ಮೊತ್ತ ಈ ಬಾರಿ ಡಬಲ್ ಆಗಿದ್ದು, ಬಿಸಿಸಿಐ ಭಾರೀ ಲಾಭ (IPL revenue) ಮಾಡಿಕೊಳ್ಳಲಿದೆ.

ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ 48,000+ ಕೋಟಿಗೆ ಬಿಡ್ಡಿಂಗ್ ಆಗಿರುವುದರಿಂದ ಬಿಸಿಸಿಐಗೆ ಭಾರೀ ಲಾಭ ಬರಲಿದೆ. ಹಾಗಾದ್ರೆ ಈ ಲಾಭದಲ್ಲಿ ಐಪಿಎಲ್ ಫ್ರಾಂಚೈಸಿಗಳಿಗೂ ಪಾಲಿದ್ಯಾ.? ನೂರಾರು ಕೋಟಿ ರೂಪಾಯಿ ಬಂಡವಾಳ ಹಾಕಿ ತಂಡ ಖರೀದಿಸಿರುವ ಫ್ರಾಂಚೈಸಿಗಳಿಗೆ ಈ ಲಾಭದಲ್ಲಿ ಪಾಲೆಷ್ಟು? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಐಪಿಎಲ್’ನಲ್ಲಿ ಒಟ್ಟು 10 ಫ್ರಾಂಚೈಸಿಗಳಿವೆ. ಈ ಪೈಕಿ ಎರಡು ಫ್ಲಾಂಚೈಸಿಗಳು ಈ ವರ್ಷ ಐಪಿಎಲ್”ಗೆ ಕಾಲಿಟ್ಟಿವೆ. ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಮತ್ತು ಮೊದಲ ವರ್ಷದಲ್ಲೇ ಚಾಂಪಿಯನ್ ಪಟ್ಟಕ್ಕೇರಿದ ಗುಜರಾತ್ ಟೈಟನ್ಸ್ (Gujarat Titans). ಇನ್ನು ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಐಪಿಎಲ್’ಗೆ ಪದಾರ್ಪಣೆ ಮಾಡಿದ್ದು. 2013ರಲ್ಲಿ. ಇನ್ನುಳಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers Bangalore), 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings), 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians), 2 ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders), ಒಂದು ಬಾರಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ (Rajasthan Royals), ಪಂಜಾಬ್ ಕಿಂಗ್ಸ್ (Punjab Kings), ಡೆಲ್ಲಿ ಕ್ಯಾಪಿಟಲ್ಸ್ (Dehli Capitals) ತಂಡಗಳು 2008ರಿಂದಲೂ ಐಪಿಎಲ್’ನಲ್ಲಿ ಆಡುತ್ತಿವೆ.

ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿರುವ ಕಾರಣ ಐಪಿಎಲ್ ಫ್ರಾಂಚೈಸಿಳ ಆದಾಯವೂ ಡಬಲ್ ಆಗಲಿದೆ. 2022ರ ಟೂರ್ನಿಯಲ್ಲಿ 10 ಫ್ರಾಂಚೈಸಿಗಳು ಮೀಡಿಯಾ ರೈಟ್ಸ್ ಆದಾಯದಿಂದ ತಲಾ 201.65 ಕೋಟಿ ರೂ. ಆದಾಯ ಗಳಿಸಿದ್ದವು. ಮುಂದಿನ ವರ್ಷ ಮೀಡಿಯಾ ರೈಟ್ಸ್ ಆದಾಯದಿಂದ ಪ್ರತೀ ಫ್ರಾಂಚೈಸಿ ತಲಾ 400 ಕೋಟಿ ರೂಪಾಯಿಗಳನ್ನು ಜೇಬಿಗಿಳಿಸಲಿವೆ. 2025ರ ಟೂರ್ನಿಯ ಹೊತ್ತಿಗೆ ಈ ಆದಾಯ 500 ಕೋಟಿ ತಲುಪುವ ನಿರೀಕ್ಷೆಯಿದೆ. ಸದ್ಯದ ಬ್ರಾಡ್ ಕಾಸ್ಟಿಂಗ್ ರೈಟ್ಸ್”ನ ಕೊನೆಯ ವರ್ಷವಾದ 2027ರಲ್ಲಿ ಈ ಆದಾಯ 550 ಕೋಟಿ ರೂಪಾಯಿ ತಲುಪುವ ಸಾಧ್ಯತೆಯಿದೆ.

ಇದನ್ನೂ ಓದಿ : ರಣಜಿ ಟ್ರೋಫಿಯಲ್ಲಿ ಭರ್ಜರಿ ಶತಕ ಬಾರಿಸಿದ ಆರ್‌ಸಿಬಿ ಸ್ಟಾರ್

ಇದನ್ನೂ ಓದಿ : Rahul Tripathi : ರಾಂಚಿ To ಜಮ್ಮು To ಮಹಾರಾಷ್ಟ್ರ ; ಆರ್ಮಿ ಆಫೀಸರ್ ಮಗ.. ಯಾರು ಈ ರಾಹುಲ್ ತ್ರಿಪಾಠಿ ?

RCB, CSK, Mumbai and KKR IPL revenue doubled from next year

Comments are closed.