ಬಾಲಿವುಡ್ ನಟಿ ಕೃತಿ ಸನೂನ್ರಿಗೆ ಮಿಮಿ ಸಿನಿಮಾದ ಬಳಿಕ ಅದೃಷ್ಟವೇ ಬದಲಾದಂತೆ ಕಾಣುತ್ತಿದೆ. 7 ವರ್ಷಗಳ ಸಿನಿ ಪಯಣದಲ್ಲಿ ಬ್ಲಾಕ್ ಬಸ್ಟರ್ ಸಿನಿಮಾ ಮಿಮಿ ಕೃತಿ ಜೀವನವನ್ನೇ ಬದಲಾಯಿಸಿದೆ. ಮಿಮಿ ಸಿನಿಮಾದ ದೊಡ್ಡ ಮಟ್ಟದ ಯಶಸ್ಸಿನ ಬಳಿಕ ಕೃತಿ ಸನೂನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ . ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪರಂ ಸುಂದರಿ(Param Sundari) ಹಾಡೊಂದು ಬೇರೊಂದು ಕಾರಣಕ್ಕೆ ಸುದ್ದಿ ಮಾಡುತ್ತಿದೆ.
ಬಾಡಿಗೆ ತಾಯಿ ಪಾತ್ರದಲ್ಲಿ ಕೃತಿ ಸನೂನ್ ನಟಿಸಿದ್ದ ಮಿಮಿ ಸಿನಿಮಾದ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಿತೋ ಅದೇ ರೀತಿಯಲ್ಲಿ ಪರಮ ಸುಂದರಿ ಹಾಡು ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಮಕ್ಕಳು , ಯುವತಿಯರೆನ್ನದೇ ಎಲ್ಲರ ಬಾಯಲ್ಲೂ ಪರಮ ಸುಂದರಿ ಹಾಡು ಗುನುಗುವಂತಾಗಿದೆ. ಅನೇಕರು ಇದೇ ಹಾಡಿಗೆ ಕೃತಿ ಸನೂನ್ರಂತೆ ನೃತ್ಯವನ್ನೂ ಮಾಡಿದ್ದಾರೆ.
ಆದರೆ ಈ ಹಾಡಿನ ಕಾರಣದಿಂದಾಗಿ ಕೃತಿ ಇದೀಗ ಅಭಿಮಾನಿಯೊಬ್ಬರ ಬಳಿ ಕ್ಷಮೆಯಾಚಿಸುವಂತಾಗಿದೆ..! ಹೌದು..! ಪರಮ ಸುಂದರಿ ಎಂಬ ಹಾಡಿನಿಂದ ಅಭಿಮಾನಿಯೊಬ್ಬ ನನ್ನ ಜೀವನವೇ ಹಾಳಾಯ್ತು ಎಂದಿದ್ದು ಇದನ್ನು ಕೇಳಿದ ಕೃತಿ ಸನೂನ್ ಅಭಿಮಾನಿ ಬಳಿ ಕ್ಷಮೆಯಾಚಿಸಿದ್ದಾರೆ.
ಪರಂ ಚಹ್ಯಾ ಎಂಬವರು ಪರಮ ಸುಂದರಿ ಹಾಡಿನ ಬಗ್ಗೆ ಟ್ವೀಟ್ ಮಾಡಿದ್ದಾರೆ.ನನ್ನ ಬಾಲ್ಯದ ದಿನಗಳಲ್ಲಿ ಯಾವುದೂ ನನ್ನನ್ನು ಕೆಣಕಲು ಸಾಧ್ಯವಾಗುತ್ತಿರಲಿಲ್ಲ. ಅನೇಕರು ನನ್ನ ಹೆಸರನ್ನು ಆಡಿಕೊಂಡರೂ ನಾನು ತಲೆಯೇ ಕೆಡಿಸಿಕೊಳ್ತಿರಲಿಲ್ಲ. ಆದರೆ ಅದ್ಯಾವಾಗ ಈ ಪರಮ ಸುಂದರಿ ಹಾಡು ರಿಲೀಸ್ ಆಯ್ತೋ ಅಂದಿನಿಂದ 1000ಕ್ಕೂ ಅಧಿಕ ಬಾರಿ ನನಗೆ ಈ ಹಾಡಿನ ಸಾಲುಗಳ ಮೂಲಕ ಗೇಲಿ ಮಾಡಲಾಗ್ತಾ ಇದೆ. ಯಾಕೆ ಕೃತಿ ನೀವು ಈ ರೀತಿ ಮಾಡಿದ್ರಿ..? ನನ್ನ ಜೀವನವನ್ನೇಕೆ ಹಾಳು ಮಾಡಿದ್ರಿ..? ಎಂದು ನಗುತ್ತಾ ಟ್ವೀಟಾಯಿಸಿದ್ದಾರೆ.
As a kid nothing ever bothered me in school. I wasn't angry on anyone who teased my last name or my name itself.
— ParamChhaya (@maijadoohoon) November 25, 2021
Since the time Kriti Sanon's Param Sundri dropped, I have been bullied by the song atleast 1000 times already.
Why did you do this @kritisanon
Why ruin my life 😂😂
ಈ ಫನ್ನಿ ಟ್ವೀಟ್ ಕೃತಿ ಸನೂನ್ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಯ್ಯೋ..! ಕ್ಷಮಿಸಿ ಎಂದು ಪರಂ ಚಹ್ಯಾಗೆ ಕೃತಿ ಸನೂನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಟ್ವೀಟ್ ಸ್ಕ್ರೀನ್ಶಾಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಕೇಕ್ನಂತೆ ಸೇಲ್ ಆಗ್ತಿದೆ.
Kriti Sanon Apologises to Man Who Accused Actor of ‘Ruining’ His Life: ‘Why Did You Do This?’
ಇದನ್ನು ಓದಿ :Madhagaja : ರಾಜ್ಯದ 800 ಸ್ಕ್ರೀನ್ಗಳಲ್ಲಿ ತೆರೆಕಂಡ ಬಹುನಿರೀಕ್ಷಿತ ಮದಗಜ ಸಿನಿಮಾ..!