ಬಾಲಿವುಡ್ ನಲ್ಲಿ ಸದ್ಯ ಮದುವೆ,ಮಕ್ಕಳ ಸುದ್ದಿಯೇ ಸದ್ದು ಮಾಡ್ತಿದೆ. ಹಿಂದಿ ಕಿರುತೆರೆ ಆಕ್ಷ್ಟರ್ ಕಪಲ್ಸ್ ಧೀರಜ್ ಧೂಪರ್ (Dheeraj Dhoopar ) ಹಾಗೂ ನಟಿ ವಿನಯಾ ಸದ್ಯ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದು, ತಮ್ಮ ಕುಟುಂಬದ ವ್ಯಾಪ್ತಿ ವಿಸ್ತಾರವಾಗ್ತಿದೆ ಅನ್ನೋ ಖುಷಿ ಹಂಚಿಕೊಂಡಿದ್ದಾರೆ. ಕುಂಡಲಿ ಭಾಗ್ಯ ಸೀರಿಯಲ್ ನಟ ಧೀರಜ್ ಧೂಪರ್ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಹಂಚಿಕೊಂಡಿದ್ದು ತಾವಿಬ್ಬರೂ ಪೋಷಕರಾಗುತ್ತಿದ್ದೇವೆ ಎಂದು ಘೋಷಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ರೋಮ್ಯಾಂಟಿಕ್ ಪಿಕ್ ಮೂಲಕ ಈ ಸಿಹಿಸುದ್ದಿ ಹಂಚಿಕೊಂಡಿರುವ ಜೋಡಿ ಅದರೊಂದಿಗೆ ಸುಂದರ ಪೋಟೊವನ್ನು ಶೇರ್ ಮಾಡಿದೆ. ಮಗುವಿನ ಸ್ಕ್ಯಾನಿಂಗ್ ಕಾಪಿಯನ್ನು ಹಂಚಿಕೊಂಡಿರೋ ಈ ಜೋಡಿ ನಾವು 2022 ರ ಅಗಸ್ಟ್ ನಲ್ಲಿ ನಮ್ಮ ಕುಟುಂಬಕ್ಕೆ ಹೊಸ ಪುಟ್ಟ ಅತಿಥಿಯೊಬ್ಬರನ್ನು ಸ್ವಾಗತಿಸಲಿದ್ದೇವೆ ಎಂದು ಪೋಸ್ಟ್ ಬರೆದಿದ್ದಾರೆ.

ಸಧ್ಯ ರೋಮ್ಯಾಂಟಿಕ್ ಜೋಡಿಗಳ ಫೆವರಿಟ್ ಟ್ರಿಪ್ ಸ್ಪಾಟ್ ಎನ್ನಿಸಿರುವ ಮಾಲ್ಡೀವ್ಸ್ ನಲ್ಲಿರೋ ಈ ಜೋಡಿ ಅಲ್ಲಿಂದಲೇ ಈ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಧೀರಜ್ ಹಾಗೂ ವಿನಯಾ ಜೋಡಿ ಸದಾ ತಮ್ಮ ಪೋಟೋ ವಿಡಿಯೋಗಳನ್ನು ಅಭಿಮಾನಿಗಳಿಗಾಗಿ ಶೇರ್ ಮಾಡುತ್ತಲೇ ಇರುತ್ತಾರೆ. ಈಗಲೂ ಕೂಡ ಪರಸ್ಪರ ಚುಂಬಿಸುತ್ತಿರುವ ಪೋಟೋದ ಜೊತೆ ಮಗುವಿನ ಸ್ಕ್ಯಾನಿಂಗ್ ಕಾಪಿ ಇಟ್ಟು ಹೊಸ ಅತಿಥಿಯ ಸ್ವಾಗತವನ್ನು ಜಗಜ್ಜಾಹಿರುಗೊಳಿಸಿದ್ದಾರೆ.

ಈ ಜೋಡಿ ಹಂಚಿಕೊಂಡ ಸಿಹಿಸುದ್ದಿಗೆ ಹಲವಾರು ನಟರು- ಅಭಿಮಾನಿಗಳು, ಸ್ನೇಹಿತರು ಶುಭಕೋರಿದ್ದು ಕೆಲವರು ಈ ಹೊತ್ತಿನಲ್ಲಿ ಪ್ರಯಾಣವೇಕೇ ಜೋಪಾನ ಎಂದೆಲ್ಲ ಕಮೆಂಟ್ ಮಾಡಿದ್ದಾರೆ ಸದ್ಯ ಏಕ್ತಾ ಕಪೂರ್ ಕುಂಡಲಿ ಭಾಗ್ಯದಲ್ಲಿ ಬ್ಯುಸಿಯಾಗಿದ್ದಾರೆ ನಟ ಧೀರಜ್ ಧೂಪರ್. ಇಲ್ಲಿ ಅವರಿಗೆ ಶೃದ್ಧಾ ಆರ್ಯಾ ನಾಯಕಿಯಾಗಿದ್ದಾರೆ. ಪರಸ್ಪರ ಪ್ರೀತಿಸುವ ಜೋಡಿಯೊಂದು ಪರಿಸ್ಥಿತಿಯ ಕೈಗೊಂಬೆಯಾಗಿ ಅಗಲಿ ಪರಿತಪಿಸುವ ಕತೆಯನ್ನು ಈ ಕುಂಡಲಿ ಭಾಗ್ಯ ಹೇಳುತ್ತಿದೆ.
ಇದನ್ನೂ ಓದಿ : ಕೆಜಿಎಫ್-2 ಗೆ ಸೆನ್ಸಾರ್ ಬೋರ್ಡ್ U/A ಗ್ರೀನ್ ಸಿಗ್ನಲ್ : ಪ್ರಮೋಶನ್ ಗೆ ಖಾಸಗಿ ವಿಮಾನ ಏರಿದ ಯಶ್
ಸಶುರಾಲ್ ಸಿಮಾರ್ ಕಾ ಧಾರಾವಾಹಿಯಲ್ಲೂ ತಮ್ಮ ಮನಸೆಳೆಯುವ ನಟನೆಯಿಂದ ಗುರುತಿಸಿಕೊಂಡಿದ್ದರು ನಟ ಧೀರಜ್ ಧೂಪರ್. ಇನ್ನು ನಟಿ ವಿನಯಾ ಕೂಡ ಕಸ್ತೂರಿಯಿಂದ ತಮ್ಮ ನಟನೆ ಆರಂಭಿಸಿದ್ದು, ಕುಚ್ ಇಸ್ ತರ, ಅತ್ವಾನ್ ವಚನ್ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈಗ ಸದ್ಯ ಈ ಜೋಡಿ ಪೋಷಕರಾಗೋ ಸಂಭ್ರಮ ದಲ್ಲಿ ಎಂಜಾಯ್ ಮಾಡ್ತಿದ್ದಾರೆ.
ಇದನ್ನೂ ಓದಿ : ರಾಜಮೌಳಿ ಮುಂದಿನ ಚಿತ್ರದ ನಾಯಕ ಇವರೇನಾ…?ಕುತೂಹಲ ಮೂಡಿಸಿದ ಮುಂದಿನ ಚಿತ್ರ
Kundali Bhagya’s Dheeraj Dhoopar wife Vinny Arora Good News