Karnataka Cabinet Expansion : ಮುಗಿಯದ ಸಂಪುಟ ಸಂಕಟ : ಸಚಿವ ಸ್ಥಾನಾಕಾಂಕ್ಷಿಗಳಿಗೆ ಕಹಿಯಾದ ಯುಗಾದಿ

ಬೆಂಗಳೂರು : ತಗ್ಗಿದ ಕೊರೋನಾದಿಂದ ಈ ಭಾರಿ ಜನರ ಪಾಲಿಗೆ ಯುಗಾದಿ ಸಂಭ್ರಮ ತಂದಿದ್ದರೇ ರಾಜ್ಯ ಸರ್ಕಾರದ ಸಚಿವ ಸ್ಥಾನಾಕಾಂಕ್ಷಿಗಳ ಪಾಲಿಗೆ ಯುಗಾದಿ ಕಹಿಯಾಗಿದೆ. ಬಿಜೆಪಿ ಹೈಕಮಾಂಡ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದಿಂದ ಗರಿಗೆದರಿದ್ದ ಸಂಪುಟ ವಿಸ್ತರಣೆಯ (Karnataka Cabinet Expansion ಕನಸು ಕನಸಾಗಿಯೇ ಉಳಿದಿದ್ದು, ಸಚಿವ ಸ್ಥಾನದ ಆಕಾಂಕ್ಷಿಕತರು ಮತ್ತೆ ಮುನಿಸಿಕೊಂಡಿದ್ದಾರೆ.

ಹೌದು, ಯುಗಾದಿ ಬೊಮ್ಮಾಯಿ ಸಂಪುಟ ವಿಸ್ತರಣೆಯೊಂದಿಗೆ ಶಾಸಕರ ಪಾಲಿಗೆ ಸಿಹಿಯಾಗುವ ನೀರಿಕ್ಷೆ ಮೂಡಿಸಿತ್ತು. ಆದರೆ ಯುಗಾದಿ ಹಬ್ಬಕ್ಕೂ ಸಿಹಿ ಸುದ್ದಿ ಸಿಕ್ಕಿಲ್ಲ. ಅಮಿತ್ ಷಾ ರಾಜ್ಯಕ್ಕೆ ಬಂದು ಹೋದರೂ, ಸಂಪುಟ ವಿಸ್ತರಣೆಗಿಲ್ಲ ಭಾಗ್ಯವಿಲ್ಲ ಎಂಬಂತಾಗಿದ್ದು, ಕೋರ್ ಕಮಿಟಿ ಸಭೆಯಲ್ಲಿ ಈ ವಿಚಾರವನ್ನು ಚರ್ಚೆಯೇ ಮಾಡದೇ ಅಮಿತ್ ಶಾ ತಮ್ಮ ಸಭೆ ಮುಗಿಸಿದ್ದಾರೆ. ಇನ್ನೂ ಕೋರ್ ಕಮಿಟಿ ಸಭೆ ಬಳಿಕ ಶಾ ಸಿಎಂ ಜೊತೆ ಪ್ರತ್ಯೇಕ ಚರ್ಚೆ ಹಾಗೂ ಸಭೆ ನಡೆಸಿದ್ದರು. ಈ ವೇಳೆ ಸಂಪುಟದ ಬಗ್ಗೆ ಪ್ರಸ್ತಾಪ ಮಾಡಿದ್ದಾರಂತೆ. ಆದರೆ ಈಗಲೇ ಸಂಪುಟ ವಿಸ್ತರಣೆಗೆ (Cabinet Expansion) ಗ್ರೀನ್ ಸಿಗ್ನಲ್ ನೀಡಿಲ್ಲ. ಬದಲಾಗಿ ದೆಹಲಿಗೆ ಬಂದು ಸಂಪುಟದ ಬಗ್ಗೆ ಮಾತಾಡಲು ಸೂಚನೆ ನೀಡಿದ್ದಾರಂತೆ.

ಹೀಗಾಗಿ ಶಾ ಸೂಚನೆಯಂತೆ ದೆಹಲಿಗೆ ಹೋಗಲು ಸಿಎಂ ನಿರ್ಧರಿಸಿದ್ದು, ಯುಗಾದಿ ಹಬ್ಬದ ನಂತರ ದೆಹಲಿಗೆ ತೆರಳಲು ಸಿಎಂ ಸಿದ್ಧತೆ ನಡೆಸಿದ್ದಾರೆ. ಸಿಎಂ ದೆಹಲಿಗೆ ತೆರಳಿದ ಬಳಿಕ ಸಿಎಂ ಸಮ್ಮುಖದಲ್ಲಿ ಅಮಿತ್ ಶಾ ಜೆ.ಪಿ.ನಡ್ಡಾ ಜೊತೆ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚಿಸಲಿದ್ದು, ಅಲ್ಲೇ ಸಂಪುಟ ವಿಸ್ತರಣೆಯ ಭವಿಷ್ಯ ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ.

ಈ ವಿದ್ಯಮಾನ ಸರ್ಕಾರದ ಕೊನೆ ದಿನಗಳಲ್ಲಾದರೂ ಸಚಿವರಾಗೋಣ ಎಂಬ ನೀರಿಕ್ಷೆಯಲ್ಲಿದ್ದ ಶಾಸಕರುಗಳಿಗೆ ನಿರಾಸೆ ತಂದಿದ್ದು, ಇನ್ನೂ ಇರೋದೆ ಒಂದು ವರ್ಷ. ಇನ್ಯಾವಾಗ ನಾವು ಸಚಿವರಾಗೋದು? ಇನ್ನು ಸಚಿವ ಸ್ಥಾನಕ್ಕೆ ಆಸೆ ಪಡೋ ಬದಲು ಕ್ಷೇತ್ರಗಳಿಗೆ ಹೋಗಿ ಮುಂದಿನ ಚುನಾವಣೆ ಸಿದ್ಧತೆ ಮಾಡಿಕೊಳ್ಳೋದೇ ಜಾಣತನ ಎಂದು ಸಚಿವ ಸ್ಥಾನಾಕಾಂಕ್ಷಿಗಳು ಹೇಳ್ತಿದ್ದಾರೆ.

ಈ ಹಿಂದೆಯೂ ಹೊಸ ವರ್ಷಕ್ಕೆ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಸಿಗಲಿದೆ ಎನ್ನಲಾಗಿತ್ತು. ಬಳಿಕ ಪಂಚ ರಾಜ್ಯ ಚುನಾವಣೆ ಬಳಿಕ ಸಚಿವ ಸ್ಥಾನ ಎನ್ನಲಾಗಿತ್ತು. ಈಗ ಯುಗಾದಿ ಕಳೆದರೂ ಸಚಿವ ಸ್ಥಾನ ಹಂಚಿಕೆ ಸಂಪುಟ ವಿಸ್ತರಣೆಯ ಮಾತೇ ಇಲ್ಲ. ಹೀಗಾಗಿ ಬಿಜೆಪಿ ಪಾಳಯದಲ್ಲಿ ಮತ್ತೇ ಅತೃಪ್ತಿ ಮೂಡಲಾರಂಭಿಸಿದೆ.

ಇದನ್ನೂ ಓದಿ :  ನಿಮ್ಮ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಆಗಿದೆಯಾ ? ಮೊಬೈಲ್‌ನಲ್ಲೇ ಚೆಕ್‌ ಮಾಡಿ

ಇದನ್ನೂ ಓದಿ :  ಶಿವಮೊಗ್ಗ ಹರ್ಷ ಕೊಲೆ ಪ್ರಕರಣ : ಕೋಮು ಗಲಭೆ ಸೃಷ್ಟಿಸುವ ಹುನ್ನಾರ : ಎನ್‌ಐಎ ವರದಿ

Karnataka Cabinet Expansion, bad news for minister Aspirants

Comments are closed.