Laal Singh Chaddha : ಆಮೀರ್ ಖಾನ್ರ ಸಿನಿಮಾಗಳು ಅಂದರೆ ಅದು ಬ್ಲಾಕ್ಬಸ್ಟರ್ ಹಿಟ್ ಎಂಬ ಕಾಲವೊಂದಿತ್ತು. ವರ್ಷಕ್ಕೆ ಒಂದೇ ಸಿನಿಮಾ ನೀಡುತ್ತಿದ್ದರೂ ಸಹ ಆಮೀರ್ ಖಾನ್ ವರ್ಷಪೂರ್ತಿ ನೆನಪಿಟ್ಟುಕೊಳ್ಳುವಂತೆ ಇರುತ್ತಿದ್ದವು. ಆದರೆ ಟಾಮ್ ಹ್ಯಾಂಕ್ಸ್ ಅಭಿನಯದ ಫಾರೆಸ್ಟ್ ಗಂಪ್ನ ರಿಮೇಕ್ ಸಿನಿಮಾವಾದ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆಮೀರ್ ಖಾನ್ ಈ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಎಡವಿದ್ದಾರೆ .
ಥಿಯೇಟರ್ನಲ್ಲಿ ಸಿನಿಮಾ ಬಿಡುಗಡೆಗೊಂಡ ಎರಡು ದಿನಗಳಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾವು ಬಾಕ್ಸಾಫೀಸಿನಲ್ಲಿ ಕೇವಲ 19 ಕೋಟಿ ರೂಪಾಯಿಗಳನ್ನು ಗಳಿಸಲಷ್ಟೇ ಶಕ್ತವಾಗಿವೆ. ಆಮೀರ್ ಖಾನ್ರ ದೇಶ ವಿರೋಧಿ ಹೇಳಿಕೆಗಳ ಜೊತೆಯಲ್ಲಿ ಅಕ್ಷಯ್ ಕುಮಾರ್ರ ರಕ್ಷಾ ಬಂಧನ್ ಸಿನಿಮಾ ಕೂಡ ಲಾಲ್ ಸಿಂಗ್ ಚಡ್ಡಾಗೆ ಠಕ್ಕರ್ ನೀಡಿವೆ .
ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಆಮೀರ್ ಖಾನ್ಗೆ ಜೋಡಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಸೌತ್ ಸ್ಟಾರ್ ನಾಗ ಚೈತನ್ಯ ಪಾಲಿಗಿದು ಚೊಚ್ಚಲ ಬಾಲಿವುಡ್ ಸಿನಿಮಾವಾಗಿದೆ. ಈ ಸಿನಿಮಾವನ್ನು ಸೀಕ್ರೆಟ್ ಸೂಪರ್ ಸ್ಟಾರ್ ಖ್ಯಾತಿಯ ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ. ಹಾಗೂ ಅತುಲ್ ಕುಲಕರ್ಣಿ ಕತೆ ಹೆಣೆದಿದ್ದಾರೆ .
ಬಾಕ್ಸಾಫೀಸಿನ ಮಾಹಿತಿಯ ಪ್ರಕಾರ ಲಾಲ್ ಸಿಂಗ್ ಚಡ್ಡಾ ಶುಕ್ರವಾರದ ವೇಳೆಗೆ ಸುಮಾರು 7 ಕೋಟಿ ರೂಪಾಯಿ ನಿವ್ವಳ ಸಂಗ್ರಹವನ್ನು ಹೊಂದಿದೆ. ಈ ಮೂಲಕ 40 ಪ್ರತಿಶತ ಕುಸಿತ ಕಂಡಿದೆ. ಮಾಸ್ ಮಾರ್ಕೆಟ್ನಲ್ಲಿ ಲಾಲ್ ಸಿಂಗ್ ಚಡ್ಡಾ ಚಿತ್ರವು ಅತ್ಯಂತ ಕಳಪೆ ಕಲೆಕ್ಷನ್ ಕಾಣುತ್ತಿದೆ ಎಂದು ವರದಿಯಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್,#LaalSinghChaddha ಮೊದಲ ದಿನದಲ್ಲಿ ಆಘಾತಕಾರಿ ಕಲೆಕ್ಷನ್ ಮಾಡಿದೆ. ಪ್ರೀಮಿಯಂ ಮಲ್ಟಿಪ್ಲೆಕ್ಸ್ಗಳಲ್ಲಿ ಕಲೆಕ್ಷನ್ ಉತ್ತಮವಾಗಿದೆ. ಆದರೆ ಮಾಸ್ ಸರ್ಕ್ಯೂಟ್ಗಳಲ್ಲಿ ದುರ್ಬಲ ಕಲೆಕ್ಷನ್ ಮಾಡುತ್ತಿದೆ. ವೀಕೆಂಡ್ನಲ್ಲಿ ಸಿನಿಮಾ ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ ಎಂದು ಬರೆದುಕೊಂಡಿದ್ದಾರೆ.
ಶುಕ್ರವಾರದಂದು ದೆಹಲಿ ಮೂಲದ ವಕೀಲರೊಬ್ಬರು ಅಮೀರ್ ಖಾನ್, ಪ್ಯಾರಾಮೌಂಟ್ ಪಿಕ್ಚರ್ಸ್ ಹಾಗೂ ಹಲವರ ವಿರುದ್ಧ ಲಾಲ್ ಸಿಂಗ್ ಚಡ್ಡಾದಲ್ಲಿ ಭಾರತೀಯ ಸೇನೆಯನ್ನು ಅಗೌರವಗೊಳಿಸಿದ್ದಾರೆ ಹಾಗೂ ಹಿಂದೂ ಭಾವನೆಗಳನ್ನು ಧಕ್ಕೆಗೊಳಿಸಿದ್ದಾರೆ ಎಂದು ಆರೋಪಿಸಿದ ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾರಿಗೆ ದೂರು ನೀಡಿದ್ದಾರೆ.
ಈ ಸಿನಿಮಾದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಲು ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಸೇನೆಗೆ ಸೇರಲು ಅವಕಾಶ ನೀಡಲಾಯಿತು ಎಂಬ ರೀತಿಯಲ್ಲಿ ಚಿತ್ರಿಸಲಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಹೋರಾಡಲು ದೈಹಿಕವಾಗಿ ಸದೃಢರಾದ ಸಿಬ್ಬಂದಿಯನ್ನೇ ಕಳುಹಿಸಿಕೊಡಲಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಸಿನಿಮಾದ ಮೂಲಕ ಉದ್ದೇಶಪೂರ್ವಕವಾಗಿ ಭಾರತೀಯ ಸೇನಾ ಸಿಬ್ಬಂದಿಯನ್ನು ದೈಹಿಕವಾಗಿ ಅಸಮರ್ಥರು ಎಂದು ತೋರಿಸಲಾಗಿದೆ ಎಂದು ವಕೀಲ ವಿನೀತ್ ಜಿಂದಾಲ್ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : sonia gandhi tests positive :ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ ಪಾಸಿಟಿವ್
ಇದನ್ನೂ ಓದಿ : Union Minister Prahlad Joshi : ‘ಯುವತಿಯರು ಕೆಲಸಕ್ಕಾಗಿ ಮಂಚ ಹತ್ತಬೇಕು’ : ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರಹ್ಲಾದ್ ಜೋಶಿ ಆಕ್ಷೇಪ
Laal Singh Chaddha box office day 2 collection: Aamir Khan’s film falls by 40%, collects ₹7 crore amid controversies