ಸೋಮವಾರ, ಏಪ್ರಿಲ್ 28, 2025
HomeCinemaLamborghini Album : ಲ್ಯಾಂಬೋರ್ಗಿನಿ ಹತ್ತಿದ್ರು ರಚಿತಾರಾಮ್ : ಸಾಥ್ ಕೊಟ್ರು ಚಂದನ್ ನಿವೇದಿತಾ :...

Lamborghini Album : ಲ್ಯಾಂಬೋರ್ಗಿನಿ ಹತ್ತಿದ್ರು ರಚಿತಾರಾಮ್ : ಸಾಥ್ ಕೊಟ್ರು ಚಂದನ್ ನಿವೇದಿತಾ : ಜರ್ನಿ ಹೇಗಿದೆ ಗೊತ್ತಾ

- Advertisement -

ಪಾರ್ಟಿ ಗೆ ಮತ್ತಷ್ಟು ರಂಗೇರಿಸೋ ಹಾಡುಗಳನ್ನು ಸಿದ್ಧಪಡಿಸೋ ಮೂಲಕವೇ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರ್ಯಾಪರ್ ಚಂದನ್ ಶೆಟ್ಟಿ ಹೊಸ ವರ್ಷದ ಗುಂಗಿನಲ್ಲಿರೋರಿಗೆ ಮತ್ತೊಂದು ಹಾಟ್ ಹಾಗೂ ಟ್ರೆಂಡಿ ಹಾಡು ಗಿಫ್ಟ್ ಮಾಡಿದ್ದಾರೆ. ಲಕ್ ಲಕ್ ಲ್ಯಾಂಬೋರ್ಗಿನಿ ( Lamborghini Album ) ಎನ್ನೋ ಈ ಹಾಡು ಹೊಸ ವರ್ಷದ ಪಾರ್ಟಿಗಳಲ್ಲಿ ಮತ್ತಷ್ಟು ರಂಗು ತುಂಬಲಿದೆ. ನಿವೇದಿತಾ ಗೌಡ ಜೊತೆ ಗುಳಿಕೆನ್ನೆಯ ಬೆಡಗಿ ರಚಿತಾರಾಮ್ ಕೂಡ ಈ ಹಾಡಿನಲ್ಲಿ ಬೋಲ್ಡಾಗಿ ಮಿಂಚಿದ್ದಾರೆ.

ಕನ್ನಡದ ರ್ಯಾಪ್ ಹಾಡುಗಳ ಮೂಲಕ ಫೇಮಸ್ ಆಗಿರೋ ರ್ಯಾಪರ್ ಚಂದನ್ ಶೆಟ್ಟಿ ಈಗ ಸಂಗೀತ ನಿರ್ದೇಶಕರಾಗಿಯೂ ಬೆಳೆಯುತ್ತಿದ್ದಾರೆ. ರಿಯಾಲಿಟಿ ಶೋ ನಿರ್ಣಾಯಕರಾಗಿ ವೇದಿಕೆ ಮೇಲೆ ಕಾಣಿಸಿಕೊಳ್ಳೋ ಚಂದನ್ ಸದ್ಯ ಪಾರ್ಟಿ ಪ್ರಿಕ್ ಹಾಡಿನ ಮೂಲಕ ಗಮನ ಸೆಳೆದಿದ್ದಾರೆ. ಹೊಸ ವರ್ಷಕ್ಕಾಗಿ ಚಂದನ್ ಲಕ್‌ಲಕ್ ಲಾಂಬ್ಯೋರ್ಗಿನಿ ಎಂಬ ಹಾಡನ್ನು ರಿಲೀಸ್ ಮಾಡಿದ್ದಾರೆ. ಯೂಟ್ಯೂಬ್ ನಲ್ಲಿ ರಿಲೀಸ್ ಆಗಿರೋ ಈ ಹಾಡು ಸಖತ್ ಸದ್ದು ಮಾಡ್ತಿದೆ.

ಈಗಾಗಲೇ ಮೂರೇ ಮೂರು ಪೆಗ್ಗಿಗೆ, ಚಾಕಲೇಟ್ ಗರ್ಲ್,ಪಾರ್ಟಿ ಫ್ರಿಕ್ ಸೇರಿದಂತೆ ಹಲವು ಹಾಡುಗಳನ್ನು ರಿಲೀಸ್ ಮಾಡಿರೋ ಚಂದನ್ ಕನ್ನಡದ ಪಡ್ಡೆಗಳ ಹಾಟ್ ಫೆವರಿಟ್‌
ಈಗ ರಿಲೀಸ್ ಆಗಿರೋ ಲಕ್ ಲಕ್ ಲ್ಯಾಂಬೋರ್ಗಿನಿ ಕೂಡ ಸಖತ್ ಹಿಟ್ ಆಗೋ ಸೂಚನೆ ನಡೆದಿದೆ. ಸಾಲು ಸಾಲು ಸಿನಿಮಾ ಶೂಟಿಂಗ್, ಪ್ರಮೋಶನ್ ನಡುವೆ ಬ್ಯುಸಿಯಾಗಿದ್ದರೂ ಕನ್ನಡದ ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ ಈ ವಿಡಿಯೋ ಸಾಂಗ್ ನಲ್ಲಿ ಮೈಬಳುಕಿಸಿ ಕುಣಿದಿದ್ದಾರೆ.

ಕೇವಲ ಹಾಡಿನಲ್ಲಿ ಕಾಣಿಸಿಕೊಂಡಿರೋದು ಮಾತ್ರವಲ್ಲ ಸಖತ್ ಬೋಲ್ಡ್ ಕಾಸ್ಟ್ಯೂಮ್ ನಲ್ಲೂ ಮಿಂಚಿದ್ದಾರೆ. ಚಂದನ್ ಪತ್ನಿ ಹಾಗೂ ಬೇಬಿ ಡಾಲ್ ಖ್ಯಾತಿಯ ನಿವೇದಿತಾ ಗೌಡ ಕೂಡಾ ಈ ಹಾಡಿನಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ನಂದಕಿಶೋರ್ ಈ ಹಾಡನ್ನು ನಿರ್ದೇಶಿಸಿದ್ದು, ಆರ್ ಕೇಶವ್ ಹಾಡು ನಿರ್ಮಿಸಿದ್ದಾರೆ.ಹೈ ಎನರ್ಜಿ ಜೊತೆ ಮತ್ತೊಮ್ಮೆ ಯೂತ್ ಗೆ ಮೋಡಿ ಮಾಡಲು ಚಂದನ್ ಶೆಟ್ಟಿ ಹಾಡು ಹಾಗೂ ಡ್ಯಾನ್ಸ್ ಜೊತೆಗೆ ತೆರೆ ಮೇಲೆ ಬಂದಿದ್ದು ಹೊಸ ವರ್ಷದಲ್ಲಿ ಈ ಹಾಡಿಗೆ ಯುವಜನತೆ ಕುಣಿದು ಎಂಜಾಯ್ ಮಾಡೋದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ : Badava Rascal Movie Promotion : ಹಾಸನ, ಚಿಕ್ಕಮಗಳೂರಲ್ಲಿ ಡಾಲಿ ಹವಾ : ಅಭಿಮಾನಕ್ಕೆ ಚಿರ ಋಣಿ ಎಂದ ನಟ

ಇದನ್ನೂ ಓದಿ : Disha Patani Bikini Photoshoot : ಬಾಯ್ ಪ್ರೆಂಡ್ ಜೊತೆ ಟ್ರಿಪ್, ಬಿಕನಿ ಪೋಸ್: ಸೋಷಿಯಲ್ ಮೀಡಿಯಾಗೆ ನಶೆ ಏರಿಸಿದ ದಿಶಾ ಪಟಾಣಿ

(Lamborghini Album Rachita Ram and Nivedita Gowda support Chandan Shetty)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular