Goat with the face of a human : ಮನುಷ್ಯ ಮುಖದ ಆಕೃತಿಯ ವಿಚಿತ್ರ ಮರಿಗೆ ಜನ್ಮ ನೀಡಿದ ಮೇಕೆ

Goat with the face of a human :ಆಡಿನ ಮರಿಗಳು ನೋಡೋಕೆ ಹೇಗಿರುತ್ತವೆ ಅನ್ನೋದನ್ನು ವಿಶೇಷವಾಗಿ ವಿವರಿಸಬೇಕಾಗಿಲ್ಲ. ಆದರೆ ಆಸ್ಸಾಂನ ಗ್ರಾಮವೊಂದರಲ್ಲಿ ಜನಿಸಿದ ಆಡಿನ ಮರಿಯೊಂದು ಇಡೀ ಪ್ರಾಣಿ ಲೋಕದಲ್ಲೇ ಒಂದು ಅಚ್ಚರಿಯನ್ನು ಸೃಷ್ಟಿಸಿದೆ. ಹೌದು…! ಇಲ್ಲಿನ ಆಡೊಂದು ಥೇಟ್​ ಮನುಷ್ಯನ ಮುಖವನ್ನೇ ಹೋಲುವಂತಹ ಮರಿಯೊಂದಕ್ಕೆ ಜನ್ಮ ನೀಡಿದೆ. ಈ ಮರಿಯನ್ನು ಕಂಡ ಗ್ರಾಮಸ್ಥರೆಲ್ಲ ಇದು ದೇವರಿಂದ ಬಂದ ಎಚ್ಚರಿಕೆ ಎಂದು ಹೇಳ್ತಿದ್ದಾರೆ .

ಈಶಾನ್ಯ ಭಾರತದ ಆಸ್ಸಾಂ ರಾಜ್ಯದ ಗಂಗಾಪುರ ಗ್ರಾಮದ ರೈತರಾದ ಶಂಕರ್​ ದಾಸ್​​ ಎಂಬವರಿಗೆ ಸೇರಿದ ಮೇಕೆಯು ಈ ರೀತಿಯ ವಿಚಿತ್ರ ಮರಿಗೆ ಜನ್ಮ ನೀಡುವ ಮೂಲಕ ಭಾರಿ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿದೆ. ಮೇಕೆಯು ಜನ್ಮ ನೀಡಿದ ಎರಡನೇ ಮರಿ ಇದಾಗಿದೆ. ಇದು ಯಾವುದೆ ರೀತಿಯ ಕೂದಲನ್ನು ಹೊಂದಿರದ ಬಿಳಿ ಬಣ್ಣದ ಮನುಷ್ಯ ಮುಖದ ಆಕೃತಿಯ ವಿಚಿತ್ರವಾದ ಆಡೊಂದಕ್ಕೆ ಜನ್ಮ ನೀಡಿದೆ. ಈ ವಿಚಾರ ಗ್ರಾಮದ ತುಂಬೆಲ್ಲ ಮಿಂಚಿನ ವೇಗದಲ್ಲಿ ಸಂಚರಿಸಿದ್ದು ದೂರದ ಊರಿನಿಂದ ಶಂಕರ್​ ದಾಸ್​ ನಿವಾಸಕ್ಕೆ ಆಗಮಿಸಿದವರೆಲ್ಲ ವಿಚಿತ್ರ ಆಡನ್ನು ನೋಡಿ ಆಶ್ಚರ್ಯಚಕಿತರಾದರು.

ಇನ್ನು ಈ ವಿಚಾರವಾಗಿ ಮಾತನಾಡಿದ ಶಂಕರ್​, ಇಷ್ಟೊಂದು ವಿರೂಪವಾಗಿದ್ದರೂ ಸಹ ಆಡು ಜೀವಂತವಾಗಿಯೇ ಜನಿಸಿದೆ. ಮುಖವು ವಿಚಿತ್ರವಾಗಿದ್ದದ್ದು ಮಾತ್ರವಲ್ಲದೇ ಮುಂಗಾಲುಗಳು ಊನವಾಗಿದ್ದರೆ ಹಿಂಗಾಲುಗಳು ಇನ್ನೂ ಬೆಳವಣಿಗೆ ಆಗಿರಲಿಲ್ಲ. ಜನಿಸಿದ ಕೆಲವೇ ನಿಮಿಷಗಳಲ್ಲೇ ಆಡು ಸತ್ತು ಹೋಯಿತು ಎಂದು ಹೇಳಿದರು.

ಆಸ್ಸಾಂನ ವಿವಿಧೆಡೆ ಈ ರೀತಿ ವಿಕಾರವಾದ ಪ್ರಾಣಿಗಳು ಜನಿಸಿದರೆ ಅದನ್ನು ದುರಾದೃಷ್ಟ ಎಂದು ಪರಿಗಣಿಸಲಾಗುತ್ತಂತೆ. ನೆರೆಹೊರೆಯವರೆಲ್ಲ ವಿಷಯ ತಿಳಿಯುತ್ತಿದ್ದಂತೆಯೇ ನಮ್ಮ ಮನೆಗೆ ಧಾವಿಸಿ ಬಂದರು. ಆಡಿನ ವಿಕಾರವಾದ ಮುಖ ಕಂಡು ಅವರೆಲ್ಲ ದಿಗ್ಭ್ರಾಂತರಾದರು ಎಂದು ಶಂಕರ್​ ಹೇಳಿದ್ದಾರೆ.

ಇತ್ತ ನೆರೆಮನೆಯ ರಾಕೇಶ್​ ಕುಮಾರ್​ ಕೂಡ ತಮ್ಮ ಅನುಭವ ಹಂಚಿಕೊಂಡಿದ್ದು ಅನೇಕ ಕಡೆಗಳಲ್ಲಿ ಈ ರೀತಿಯ ವಿಕಾರವಾದ ಪ್ರಾಣಿಗಳು ಜನಿಸಿದರೆ ಅದನ್ನು ದೇವರ ಎಚ್ಚರಿಕೆ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಇದನ್ನು ಓದಿ : iPhone 13 Pro Max : 1 ಲಕ್ಷ ರೂ. ಮೌಲ್ಯದ ಫೋನ್​ ಖರೀದಿಸಿದವನಿಗೆ ದೋಖಾ..!ಬಾಕ್ಸ್​ ತೆರೆದು ನೋಡಿದ ಗ್ರಾಹಕನಿಗೆ ಶಾಕ್​​

ಇದನ್ನೂ ಓದಿ : Rare Pink Fish : ಸಮುದ್ರದಾಳದಲ್ಲಿ ಪತ್ತೆಯಾಯ್ತು ನಡೆದಾಡುವ ಅಪರೂಪದ ಮೀನು

Goat ‘with the face of a human’ seen as a ‘warning from God’ is born in India

Comments are closed.