ಮಂಗಳವಾರ, ಏಪ್ರಿಲ್ 29, 2025
HomeCinemaLeena Manimegalai : ಕಾಳಿಮಾತೆ ಕೈಲಿ ಸಿಗರೇಟ್ ವಿವಾದ : ನಿರ್ದೇಶಕಿಗೆ ರಕ್ಷಣೆ ನೀಡಿದ ಸುಪ್ರೀಂ...

Leena Manimegalai : ಕಾಳಿಮಾತೆ ಕೈಲಿ ಸಿಗರೇಟ್ ವಿವಾದ : ನಿರ್ದೇಶಕಿಗೆ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್

- Advertisement -

ನಿರ್ದೇಶಕಿ ಲೀನಾ ಮಣಿಮೇಗಲೈ (Leena Manimegalai) ಅವರ ನಿರ್ದೇಶನದಲ್ಲಿ ಮುಡಿ ಬಂದ ಕಾಳಿ ಸಾಕ್ಷ್ಯ ಸಿನಿಮಾದ ಪೋಸ್ಟರ್‌ನಲ್ಲಿ ಎಲ್‌ಜಿಬಿಟಿಕ್ಯೂ ಧ್ವಜ ಹಿಡಿದು ಸಿಗರೇಟು ಸೇದುತ್ತಿರುವ ಚಿತ್ರಣವನ್ನು ಮೂಡಿಸಲಾಗಿತ್ತು. ಕಾಳಿಮಾತೆ ಕೈಯಲ್ಲಿ ಸಿಗರೇಟ್‌ ಕೊಟ್ಟ ಪೋಸ್ಟರ್‌ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕಿ ಲೀನಾ ಮಣಿಮೇಗಲೈ ಅವರ ಮೇಲೆ ದೂರು ದಾಖಲಾಗಿತ್ತು. ಸದ್ಯ ಸುಪ್ರೀಂ ಕೋರ್ಟ್‌ ನಿರ್ದೇಶಕಿ ಲೀನಾ ಮೇಲೆ ಯಾವುದೇ ಬಲವಂತ ಕ್ರಮ ಕೈಗೊಳ್ಳದಿರುವಂತೆ ಮಧ್ಯಂತರ ರಕ್ಷಣೆ ನೀಡಿದೆ.

ತಮ್ಮ ಸಿನಿಮಾದ ಪೋಸ್ಟರ್‌ನಲ್ಲಿ ಕಾಳಿ ಮಾತೆಯ ಕೈಗೆ ಸಿಗರೇಟು ಕೊಟ್ಟಿರುವ ವಿಚಾರಕ್ಕಾಗಿ ಭಾರೀ ವಿವಾದವನ್ನು ನಿರ್ದೇಶಕಿ ಲೀನಾ ಎದುರಿಸಬೇಕಾಯಿತು. ಹೀಗಾಗಿ ನಿರ್ದೇಶಕಿ ಲೀನಾ ತಮ್ಮ ಮೇಲಿನ ದೂರಗಳನ್ನು ವಜಾ ಮಾಡಬೇಕೆಂದು ಸುಪ್ರೀಂ ಕೋರ್ಟ್‌ ಮೆಟ್ಟಿಲನ್ನು ಏರಿದ್ದರು. ಹಾಗೆಯೇ ರಾಜ್ಯದ ನಾನಾ ಭಾಗಗಳಲ್ಲಿ ದಾಖಲಾದ ಎಫ್‌ಐಆರ್‌ಗಳನ್ನು ರದ್ದು ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಮನಗಂಡ ಸುಪ್ರೀಂ ಕೋರ್ಟ್‌, ಬಲವಂತವಾಗಿ ಏನೂ ಕ್ರಮ ಕೈಗೊಳ್ಳದಂತೆ ತಿಳಿಸಿದೆ.

ನಿರ್ದೇಶಕಿ ಲೀನಾ ಅವರು ತಮ್ಮ ಸಿನಿಮಾದ ಪೋಸ್ಟರ್‌ನಲ್ಲಿ ಕಾಳಿ ಮಾತೆಯ ಕೈಗೆ ಸಿಗರೇಟು ಕೊಟ್ಟಿದ್ದಲ್ಲದೇ, ತೃತೀಯ ಲಿಂಗಿಗಳನ್ನು ಸೂಚಿಸುವಂತಹ ಬಾವುಟವನ್ನು, ಕಾಳಿ ಮಾತೆಯ ಮತ್ತೊಂದು ಕೈಗೆ ಕೊಟ್ಟಿದ್ದರು. ಹೀಗಾಗಿ ಸಿನಿಮಾದ ಈ ಪೋಸ್ಟರ್‌ ಸಾಕಷ್ಟು ವಿವಾದಕ್ಕೆ ಗುರಿಯಾಯಿತು. ದೇಶದ ನಾನಾ ರಾಜ್ಯಗಳು ನಿರ್ದೇಶಕಿ ಲೀನಾವನ್ನು ಬಂಧಿಸಿ, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಹಲವಾರು ದೂರುಗಳನ್ನು ದಾಖಲಿಸಲಾಗಿತು. ಹೀಗಾಗಿ ತಮ್ಮ ಮೇಲೆ ಆಪಾದನೆಗಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ಇದನ್ನೂ ಓದಿ : ಬ್ಲಾಕ್‌ ಕೋಬ್ರಾ ದುನಿಯಾ ವಿಜಯ್‌ ಗೆ 49ನೇ ಹುಟ್ಟುಹಬ್ಬ : ಹುಟ್ಟೂರಿನಲ್ಲೇ ಸಂಭ್ರಮ ಆಚರಿಸಿಕೊಂಡ ನಟ

ಇದನ್ನೂ ಓದಿ : ವಾರಿಸು ಸಿನಿಮಾದ ಭರ್ಜರಿ ಯಶಸ್ಸು : ಖುಷಿಯಲ್ಲಿ ನಟಿ ರಶ್ಮಿಕಾ ಮಂದಣ್ಣ

ಇದನ್ನೂ ಓದಿ : Actress Prema : ಕಂಕಣಭಾಗ್ಯ ಕರುಣಿಸುವಂತೆ ಕೊರಗಜ್ಜನಿಗೆ ಮೊರೆಹೋದ ನಟಿ ಪ್ರೇಮ

ತಾವು ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ಆಗುವಂತೆ ಪೋಸ್ಟರ್‌ ಯಾರಿಗೂ ನೋವು ತರುವಂತಹ ಉದ್ದೇಶ ಹೊಂದಿರಲಿಲ್ಲ ಎಂದು ತಮ್ಮ ವಕೀಲರ ಮೂಲಕ ನ್ಯಾಯಲಯಕ್ಕೆ ಮನದಟ್ಟು ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಕುಟುಂಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಕೂಡ ಒಡ್ಡುತ್ತಿದ್ದಾರೆ ಅವರ ಮೇಲೆ ಕ್ರಮ ತಗೆದುಕೊಳ್ಳಬೇಕು ಎಂದು ಅರ್ಜಿಯಲ್ಲಿ ಅವರು ಮನವಿ ಮಾಡಿದ್ದರು.

Leena Manimegalai : Kalimate Kylie Cigarette Controversy : Supreme Court Protects Director

RELATED ARTICLES

Most Popular