Hit and drag case: ಬಾನೆಟ್‌ ಮೇಲೆ ಯುವಕನನ್ನು 1 ಕಿ.ಮೀ. ಎಳೆದೊಯ್ದ ಕಾರು ಚಾಲಕಿ

ಬೆಂಗಳೂರು: (Hit and drag case) ಮಹಿಳೆಯೊಬ್ಬರು ತನ್ನ ಕಾರಿನ ಬಾನೆಟ್‌ ಮೇಲೆ ಯುವಕ ಬಿದ್ದಿರುವುದು ತಿಳಿದಿದ್ದರೂ ಕೂಡ ಕಾರು ನಿಲ್ಲಿಸದೇ ಸುಮಾರು ಒಂದು ಕಿಲೋಮೀಟರ್ ವರೆಗೆ ವ್ಯಕ್ತಿಯನ್ನು ಎಳೆದೊಯ್ದಿರುವ ಘಟನೆ ಬೆಂಗಳೂರಿನ ಜ್ಞಾನ ಭಾರತಿ ನಗರದಲ್ಲಿ ನಡೆದಿದೆ.

ಜ್ಞಾನ ಭಾರತಿ ನಗರ ಪ್ರದೇಶದಲ್ಲಿ ಎರಡು ಕಾರುಗಳು – ಟಾಟಾ ನಿಕ್ಸನ್ ಮತ್ತು ಮಾರುತಿ ಸ್ವಿಫ್ಟ್ – ಒಂದಕ್ಕೊಂದು ಡಿಕ್ಕಿ ಹೊಡೆದಿದ್ದು, ಟಾಟಾ ನಿಕ್ಸನ್ ಕಾರನ್ನು ಪ್ರಿಯಾಂಕಾ ಎಂಬ ಮಹಿಳೆ ಓಡಿಸುತ್ತಿದ್ದಳು. ದರ್ಶನ್ ಎನ್ನುವ ವ್ಯಕ್ತಿಯೊಬ್ಬರು ಸ್ವಿಫ್ಟ್ ಕಾರನ್ನು ಚಲಾಯಿಸುತ್ತಿದ್ದರು. ಕಾರು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ದರ್ಶನ್ ಕಾರನ್ನು ನಿಲ್ಲಿಸಲು ಹೇಳಿದಾಗ , ಪ್ರಿಯಾಂಕ ಅಸಭ್ಯ ಚಿಹ್ನೆ ತೋರಿಸಿ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾರೆ.

ದರ್ಶನ್‌ ಪ್ರಿಯಾಂಕ ಅವರ ಕಾರನ್ನು ಅಡ್ಡಗಟ್ಟಿದರು ಕೂಡ ಲೆಕ್ಕಿಸದೇ ಕಾರು ಚಲಾಯಿಸುತ್ತಲೇ ಇದ್ದರು. ಹೀಗೆ ನಡೆಯುವಾಗ ದರ್ಶನ್‌ ತನ್ನನ್ನು ರಕ್ಷಿಸಿಕೊಳ್ಳಲು ಕಾರಿನ ಬ್ಯಾನೆಟ್‌ ಮೇಲೆ ಹಾರಿದ್ದು, ಇದನ್ನು ತಿಳಿದಿದ್ದರು ಕೂಡ ಪ್ರಿಯಾಂಕ ಕಾರು ನಿಲ್ಲಿಸದೇ ಒಂದು ಕಿಲೋಮೀಟರ್‌ ವರೆಗೂ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ.

ಸುಮಾರು ಒಂದು ಕಿ.ಮೀ. ದೂರದಲ್ಲಿ ಪ್ರಿಯಾಂಕ ಕಾರು ನಿಲ್ಲಿಸಿದ್ದು, ದರ್ಶನ್‌ ಹಾಗೂ ಆತನ ಸ್ನೇಹಿತರು ಪ್ರಿಯಾಂಕ ಅವರ ಕಾರಿನ ಭಾಗಗಳನ್ನು ಒಡೆದಿದ್ದಾರೆ. ಇದೀಗ ಈ ಪ್ರಕರಣದ ಕುರಿತು ಎರಡೂ ಕಡೆಯವರಿಂದ ದೂರು ದಾಖಲಾಗಿದ್ದು, ಪ್ರಿಯಾಂಕಾ ವಿರುದ್ಧ ಐಪಿಸಿಯ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದರೆ, ಮಹಿಳೆಯ ನಮ್ರತೆಗೆ ಆಕ್ರೋಶ ವ್ಯಕ್ತಪಡಿಸಿದ್ದಕ್ಕಾಗಿ ಪೊಲೀಸರು ದರ್ಶನ್ ಮತ್ತು ಅವರ ಸ್ನೇಹಿತರ ವಿರುದ್ಧ ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ : Drug case- 9 suspended: ಮಂಗಳೂರು ಡ್ರಗ್ಸ್‌ ಪ್ರಕರಣ: 2 ವೈದ್ಯರು, 7 ವೈದ್ಯಕೀಯ ವಿದ್ಯಾರ್ಥಿಗಳ ಅಮಾನತು

ಇದನ್ನೂ ಓದಿ : KSRTC bus-Bike Accident: ಕೆಎಸ್‌ ಆರ್‌ ಟಿಸಿ ಬಸ್‌ – ಬೈಕ್‌ ಢಿಕ್ಕಿ: ಪ್ರತ್ಯೇಕ ಪ್ರಕರಣ ಬೈಕ್‌ ಸವಾರರು ಸ್ಥಳದಲ್ಲೇ ಸಾವು

Hit and drag case: A young man was dragged for 1 km on the bonnet. The driver of the towed car

Comments are closed.