ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಹೀಗಾಗಿ ಜನರೆಲ್ಲಾ ಮನೆಯೊಳಗೆ ಬಂದಿಯಾಗಿದ್ದಾರೆ. ಈ ಹೊತ್ತಲೇ ಕನ್ನಡದ ಖ್ಯಾತ ಸಂಗೀತ ಮಾಂತ್ರಿಕ ರವಿ ಬಸ್ರೂರು ಅವರು ಕುಂದಾಪುರ ಕನ್ನಡ ಭಾಷೆಯಲ್ಲಿ ಹೊಸ ಆಲ್ಬಮ್ ಸಾಂಗ್ ವೊಂದನ್ನು ಬಿಡುಗಡೆ ಮಾಡಿದ್ದಾರೆ.

ರವಿ ಬಸ್ರೂರು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿರೋ ಮೊಬೈಲ್ ಹಾಡು ಸಖತ್ ವೈರಲ್ ಆಗ್ತಿದೆ. ಮೊಬೈಲ್ ಗೀಳು ಎಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗುತ್ತೆ, ಮಕ್ಕಳ ಕೈಗೆ ಮೊಬೈಲ್ ಸಿಕ್ಕಿ ಏನೇನೆಲ್ಲಾ ಆಗ್ತಿದೆ ಅನ್ನೋದನ್ನು ಸಾಂಗ್ ಮೂಲಕ ಹೇಳಿದ್ದಾರೆ ರವಿ ಬಸ್ರೂರು.

ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕರೆನಿಸಿಕೊಂಡಿರುವ ರವಿ ಬಸ್ರೂರು ಅವರ ಕೆಜಿಎಫ್ -1 ಸಿನಿಮಾದ ಸಂಗೀತ ನಿರ್ದೇಶನಕ್ಕೆ ಇಡೀ ಭಾರತೀಯರೇ ಫಿದಾ ಆಗಿದ್ದರು. ಆದ್ರೀಗ ಕೆಜಿಎಫ್ -2 ಬಿಡುಗಡೆಗೆ ಕಾಯುತ್ತಿದೆ, ಸಂಗೀತ ಪ್ರಿಯರು ಸಂಗೀತ ಮಾಂತ್ರಿಕನ ಮ್ಯೂಸಿಕ್ ಕೇಳೋಕೆ ಕಿವಿ ಅರಳಿಸಿ ಕುಳಿತಿದ್ದಾರೆ.

ಸಾಲದಕ್ಕೆ ಸಾಲು ಸಾಲು ಕನ್ನಡ, ಮಲಯಾಲಂ ಸಿನಿಮಾಕ್ಕೆ ಸಂಗೀತ ನಿರ್ದೇಶಕರಾಗಿರೋ ರವಿ ಬಸ್ರೂರು, ತನ್ನ ಆಡು ಭಾಷೆಯಾಗಿರೋ ಕುಂದಾಪುರ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸೋ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ.

ಕನ್ನಡ, ಮಲಯಾಲಂ ಸಿನಿಮಾಗಳಲ್ಲಿ ಬ್ಯೂಸಿಯಾಗಿರೋ ರವಿ ಬಸ್ರೂರು ಕೊರೊನಾ ಲಾಕ್ ಡೌನ್ ಹೊತ್ತಲ್ಲಿ ಸಿದ್ದ ಪಡಿಸಿರೋ ಮೊಬೈಲ್ ಹಾಡು ನಿಜಕ್ಕೂ ಖುಷಿ ಕೊಡ್ತಿದೆ. ಮಾತ್ರವಲ್ಲ ಸಾಂಗ್ ನ ಕೊನೆಯಲ್ಲಿ ಅಪಘಾತಕ್ಕೆ ಅವರಸದ ವೇಗವೇ ಕಾರಣ.. ನಿಧಾನಗತಿಯ ಬೆಳವಣಿಗೆಯಲ್ಲಿ ಆಲೋಚನೆಗೆ ಅವಕಾಶ ಸಿಕ್ಕಬಹುದಲ್ಲವೆ. ಬುದ್ದಿಗೆ ಬುದ್ದಿ ಕೇಳಲು ತಾಳ್ಮೆ ಹಾಗೂ ಸಮಯ ಮೊದಲು ಕೊಟ್ಟರೆ ಒಳ್ಳೆಯದು. ಅದೇ ಪ್ರಕೃತಿ ತಾನೇ ಸರಿಹೊಂದಿಸಲು ತನ್ನ ಕೈಗೆತ್ತಿಕೊಂಡರೆ ನಾವು ಕೈಕಟ್ಟಿ ಕೂರಬೇಕು. stay safe stay home ಅನ್ನೋ ಸಂದೇಶ ಕೊಟ್ಟಿದ್ದಾರೆ ಸಂಗೀತ ಮಾಂತ್ರಿಕ ರವಿ ಬಸ್ರೂರು.
ಮತ್ಯಾಕೆ ತಡ, ನೀವೂ ಕೂಡ ಮೊಬೈಲ್ ಹಾಡು ಕೇಳಿ ಎಂಜಾಯ್ ಮಾಡಿ…