ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರುಳಿ ಮುಖ್ಯಭೂಮಿಕೆಯ ಸಿನಿಮಾ ಮದಗಜ(Madhagaja Movie Review ) ರಿಲೀಸ್ ಮೊದಲ ದಿನವೇ ಬಾಕ್ಸಾಫೀಸಿನಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡಿದೆ. ವರ್ಷದ ಕೊನೆಯಲ್ಲಿ ರಿಲೀಸ್ ಆಗಿರುವ ಈ ಬಿಗ್ ಬಜೆಟ್ ಸಿನಿಮಾವು ನಿನ್ನೆ ರಾಜ್ಯದ 800 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಮೂಲಗಳ ಪ್ರಕಾರ ಈ ಸಿನಿಮಾ ತೆರೆ ಕಂಡ ಮೊದಲ ದಿನವೇ ಕೋಟಿ ಕೋಟಿ ಬಾಚಿದೆ ಎನ್ನಲಾಗಿದೆ.
ಆ್ಯಕ್ಷನ್ ಸೀನ್ ಹಾಗೂ ತಾಯಿ ಸೆಂಟಿಮೆಂಟ್ಗಳೆರಡರಲ್ಲಿಯೂ ಶ್ರೀಮುರುಳಿ ಅಮೋಘ ಪ್ರದರ್ಶನ ನೀಡಿದ್ದಾರೆ ಎನ್ನಲಾಗಿದೆ. ಸಿನಿಮಾದಲ್ಲಿ ಮುರುಳಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ನಟಿ ಆಶಿಕಾ ರಂಗನಾಥ್ ಪಕ್ಕಾ ಹಳ್ಳಿ ಹುಡುಗಿ ಸ್ಟೈಲ್ನಲ್ಲಿ ಮಿಂಚಿದ್ದಾರೆ.
ಮೂಲಗಳ ಪ್ರಕಾರ ಮದಗಜ ಸಿನಿಮಾ ಮೊದಲ ದಿನದ ಪ್ರದರ್ಶನದಲ್ಲಿಯೇ 7.5 ಕೋಟಿ ರೂಪಾಯಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ. ಇಂದು ಹಾಗೂ ನಾಳೆ ಸಿನಿಮಾಗಳಲ್ಲಿ ಪ್ರೇಕ್ಷಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಸಿನಿ ತಂಡದ ಲೆಕ್ಕಾಚಾರವಾಗಿದೆ.
ಈ ಸಿನಿಮಾ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಹೈದರಾಬಾದ್ ಹಾಗೂ ವಾರಣಾಸಿಯಲ್ಲಿಯೂ ತೆರೆ ಕಂಡಿದೆ. ಅಲ್ಲದೇ ಮುಂದಿನ ವಾರದಲ್ಲಿ ತೆಲಗು ಹಾಗೂ ತಮಿಳು ಭಾಷೆಯಲ್ಲಿಯೂ ಸಿನಿಮಾ ಪ್ರದರ್ಶನ ಕಾಣಲಿದೆ. ಹಿಂದಿ ಭಾಷೆಯ ರಿಮೇಕ್ಗೂ ಈ ಸಿನಿಮಾ ಸಜ್ಜಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ.
ಎಸ್. ಮಹೇಶ್ ಕುಮಾರ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದರೆ ರಾಬರ್ಟ್ ಸಿನಿಮಾ ಖ್ಯಾತಿಯ ಉಮಾಪತಿ ಬಂಡವಾಳ ಹೂಡಿದ್ದಾರೆ. ಮುಂದಿನ ವಾರದಲ್ಲಿ ಈ ಸಿನಿಮಾ ವಿದೇಶಗಳಲ್ಲೂ ತೆರೆ ಕಾಣಲಿದ್ದು ಚಿತ್ರದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಇದನ್ನು ಓದಿ : Actor Shivaram: ಸ್ಯಾಂಡಲ್‌ವುಡ್ ಹಿರಿಯ ನಟ ಶಿವರಾಂ ವಿಧಿವಶ
Madhagaja Movie Review, first day box office collection