Actor Shivaram Profile : ಚಿತ್ರರಂಗದ ಪಾಲಿನ ‘ಶಿವರಾಮಣ್ಣ’; ಅಗಲಿದ ಹಿರಿಯ ನಟನ ಜೀವನಗಾಥೆ ಇಲ್ಲಿದೆ

ಬೆಂಗಳೂರು: ಕನ್ನಡದ ಹಿರಿಯ ನಟ ಶಿವರಾಂ (Kannada Actor Shivaram) ತಮ್ಮ 84ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಮೇರು ನಟನೆಯ ಮೂಲಕ ಪ್ರಸಿದ್ಧಿ ಪಡೆದಿದ್ದ ಅವರು ಸುಮಾರು ಆರು ದಶಕಗಳಿಂದ ನಾಯಕ, ಪೋಷಕ ನಟನಾಗಿ ಸಕ್ರಿಯವಾಗಿ ಕಿರಿತೆರೆ ಹಾಗೂ ಹಿರಿತೆರೆಗಳಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ ಇವರು ನಿರ್ಮಾಪಕನಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ.

ಮದ್ರಾಸಿನ ಬ್ರಾಹ್ಮಣ ಕುಟುಂಬದಲ್ಲಿ 1938 ಜನವರಿ 28 ರಂದು ಜನಿಸಿದ ಇವರು, ತಮ್ಮ ಪ್ರೈಮರಿ ವಿದ್ಯಾಭ್ಯಾಸದ ಬಳಿಕ ಸಹೋದರ ಶ್ರೀ ಕಂಠೇಶ್ವರ ಅಯ್ಯಂಗಾರ್ ಜೊತೆ ಬೆಂಗಳೂರಿಗೆ ಹೋಗುತ್ತಾರೆ. ಅಲ್ಲಿ ಗುಬ್ಬಿ ವೀರಣ್ಣ ಅವರ ನಟನೆಯಿಂದ ಪ್ರಭಾವಿತರಾಗಿ, ನಟನೆ ಹಾಗೂ ನಿರ್ಮಾಣದತ್ತ ಒಲವು ತೋರುತ್ತಾರೆ.

ಶಿವರಾಂ ಅವರ ನಟನೆಯ ಚಿತ್ರಗಳು:
1958 ರಿಂದ 1965 ವರೆಗೆ ಶಿವರಾಂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪೋಷಕ ನಟನಾಗಿ ಕಲ್ಯಾಣ್ ಅವರ ಚಿತ್ರ “ಬೆರೆತ ಜೀವ” ದ ಮೂಲಕ ಸಿನಿ ಪಯಣ ಆರಂಭಿಸಿದ ಇವರು, ಸುಮಾರು 6 ದಶಕಗಳಿಂದ ಕಿರಿ ಹಾಗೂ ಹಿರಿ ತೆರೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಶಿವರಾಂ ನಟನೆಯ ಶರಪಂಜರ’, ‘ನಾಗರಹಾವು’ , ‘ಶುಭಮಂಗಳ’, ‘ಚಲಿಸುವ ಮೋಡಗಳು’ , ‘ಶ್ರಾವಣ ಬಂತು’ , ‘ಹಾಲು ಜೇನು’, ‘ಹೊಂಬಿಸಿಲು’, ‘ಹೊಸ ಬೆಳಕು’, ‘ಗುರು ಶಿಷ್ಯರು’ , ‘ಸಿಂಹದಮರಿ ಸೈನ್ಯ’ , ‘ಮಕ್ಕಳ ಸೈನ್ಯ’, ‘ಆಪ್ತಮಿತ್ರ’, ‘ಹುಚ್ಚ’, ಬಜರಂಗಿ, ‘ಹೃದಯವಂತ’ ಮುಂತಾದ ಸಿನಿಮಾಗಳು ಪ್ರಮುಖವಾದವು.

ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಗೃಹಭಂಗ’, ರವಿಕಿರಣ್ ನಿರ್ದೇಶಿಸಿದ ‘ಬದುಕು’ ಧಾರಾವಾಹಿಯಲ್ಲೂ ಶಿವರಾಂ ಅಭಿನಯಿಸಿದ್ದಾರೆ. ಇದಿಷ್ಟೇ ಅಲ್ಲದೆ, ಶಿವರಾಂ ಅವರು ಸಹೋದರ ಎಸ್.ರಾಮನಾಥನ್‍ ಅವರ ಜೊತೆ ‘ರಾಶಿ ಬ್ರದರ್ಸ್’ ಎಂಬ ಸಂಸ್ಥೆ ಕಟ್ಟಿ, ಈ ಮೂಲಕ ಕನ್ನಡ, ಹಿಂದಿ ಚಿತ್ರಗಳನ್ನು ಕೂಡ ನಿರ್ಮಿಸಿದ್ದಾರೆ. ಇವುಗಳ ಪೈಕಿ ಡಾ. ರಾಜ್ ಕುಮಾರ್ ನಟನೆಯ 175ನೇ ಸಿನೆಮಾ ‘ನಾನೊಬ್ಬ ಕಳ್ಳ’, ರಜನಿಕಾಂತ್ ನಟನೆಯ ‘ಧರ್ಮ ದುರೈ’ ಜನ ಮನ್ನಣೆಗೆ ಪಾತ್ರವಾಗಿವೆ. ರಾಶಿ ಬ್ರದರ್ಸ್ ನಿರ್ದೇಶನದ ‘ ಗೇರಫ್ತರ್’ ಬಾಲಿವುಡ್ ಚಿತ್ರ ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಹಾಗೂ ರಜನಿಕಾಂತ್ ಈ ಮೂರು ದಿಗ್ಗಜರು ಒಟ್ಟಾಗಿ ನಟಿಸಿದ ಏಕೈಕ ಚಿತ್ರವಾಗಿದೆ.

ತಮ್ಮ ರಾಶಿ ಬ್ರದರ್ಸ್ ಸಂಸ್ಥೆ ಮೂಲಕ ‘ಗೆಜ್ಜೆಪೂಜೆ’, ‘ಉಪಾಸನೆ’, ‘ನಾನೊಬ್ಬ ಕಳ್ಳ’, ‘ಡ್ರೈವರ್ ಹನುಮಂತು, ‘ಬಹಳ ಚೆನ್ನಾಗಿದೆ’ ಸಿನಿಮಾ ನಿರ್ಮಿಸಿದ್ದಾರೆ. ಸಿಂಗೀತಮ್ ಶ್ರೀನಿವಾಸರಾವ್ ನಿರ್ದೇಶನದ ರಾಜಕುಮಾರ್ ನಟನೆಯ ಏಳು ಚಿತ್ರಗಳಿದ್ದು, ಈ ಏಳರಲ್ಲೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಕನ್ನಡದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜೊತೆಯೂ ಕೆಲಸ ಮಾಡಿದ್ದು, ಚಿತ್ರ ರಂಗದಲ್ಲಿ ಶಿವರಾಮಣ್ಣ ಎಂದೇ ಕರೆಯಲ್ಪಟ್ಟ ಹೆಗ್ಗಳಿಕೆ ಅವರದ್ದಾಗಿತ್ತು.

ಪ್ರಶಸ್ತಿಗಳು
2010-11 ರಲ್ಲಿ ಕರ್ನಾಟಕ ಸರ್ಕಾರ ನೀಡುವ ಡಾ. ರಾಜ್ ಕುಮಾರ್ ಲೈಫ್ ಟೈಂ ಆಚಿವ್‌ಮೆಂಟ್ ಅವಾರ್ಡ್ ಹಾಗೂ 2013 ರ ಪದ್ಮಭೂಷಣ ಡಾ. ಸರೋಜಾದೇವಿ ನ್ಯಾಷನಲ್ ಅವಾರ್ಡ್‌ಗೂ ಶಿವರಾಂ ಅವರು ಭಾಜನರಾಗಿದ್ದರು.

ಇದನ್ನೂ ಓದಿ : Actor Shivaram: ಸ್ಯಾಂಡಲ್‌ವುಡ್‌ ಹಿರಿಯ ನಟ ಶಿವರಾಂ ವಿಧಿವಶ

ಇದನ್ನೂ ಓದಿ : ದೇಶದಲ್ಲಿ ನಾಲ್ಕನೇ ಓಮಿಕ್ರಾನ್​ ರೂಪಾಂತರಿ ಪತ್ತೆ..!ಮೊದಲ ಪ್ರಕರಣ ವರದಿ ಮಾಡಿದ ಮಹಾರಾಷ್ಟ್ರ

ಇದನ್ನೂ ಓದಿ : ಚಿತ್ರಮಂದಿರಗಳಲ್ಲಿ ಘೀಳಿಟ್ಟ ‘ಮದಗಜ’ : ಹೇಗಿತ್ತು ಗೊತ್ತಾ ಮೊದಲ ದಿನದ ಬಾಕ್ಸಾಫೀಸ್​ ಕಲೆಕ್ಷನ್​..?

(Sandalwood senior Actor Shivaram passes away at 84 here his profile)

Comments are closed.