ಸ್ವಲ್ಪ ಸಮಯದವರೆಗೆ ಚಿತ್ರಮಂದಿರಗಳಲ್ಲಿ ಓಡಿದ ನಂತರ, ಅಡಿವಿ ಶೇಶ್ ಅಭಿನಯದ ‘ಮೇಜರ್’ (Major movie)ಚಿತ್ರ ಈಗ ಒಟಿಟಿಯಲ್ಲಿ(OTT) ರಿಲೀಸ್ ಆಗಲು ಹೊರಟಿದೆ. 2008 ರ ಮುಂಬೈ ಸರಣಿ ದಾಳಿಯ ಸಮಯದಲ್ಲಿ ತನ್ನ ಜೀವನ್ಮರಣ ಹೋರಾಟದಲ್ಲಿ ಜೀವ ಕಳೆದುಕೊಂಡ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಕಥೆಯನ್ನು ಹೇಳುವ ಚಿತ್ರವು ಜುಲೈ 3 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಮಾಡಲು ಸಿದ್ಧವಾಗಿದೆ.
ಈ ಕುರಿತು ಅದಿವಿ “ಅತ್ಯಂತ ಆಶೀರ್ವಾದ ಪಡೆದಿದ್ದೇವೆ. ಮಿಲಿಯನ್ಗಟ್ಟಲೆ ಜನರು #ಮೇಜರ್ ಅನ್ನು ಥಿಯೇಟರ್‌ಗಳಲ್ಲಿ ನೋಡಿದ್ದಾರೆ, ಈಗ #MajorTheFilm ಜುಲೈ 3 ರಂದು @NetflixIndia ನಲ್ಲಿ ರಿಲೀಸ್ ಆಗಲಿದೆ . ನಿಮಗೆ ಆ ವ್ಯಕ್ತಿ ಹೆಸರು ತಿಳಿದಿದೆ. ಈಗ ನೀವು ಅವರ ಕಥೆಯನ್ನು ತಿಳಿಯುವಿರಿ.” ಎಂದು ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.
ಶಶಿ ಕರಣ್ ಟಿಕ್ಕಾ ನಿರ್ದೇಶನದ ‘ಮೇಜರ್’ ಚಿತ್ರದಲ್ಲಿ ಸೋಭಿತಾ ಧೂಳಿಪಾಲ, ಸಾಯಿ ಮಂಜ್ರೇಕರ್, ಪ್ರಕಾಶ್ ರಾಜ್, ರೇವತಿ ಮತ್ತು ಮುರಳಿ ಶರ್ಮಾ ಕೂಡ ನಟಿಸಿದ್ದಾರೆ. ಚಿತ್ರದ ಕುರಿತು ಮಾತನಾಡಿದ ಅದಿವಿ, ‘ಮೇಜರ್’ ಕೇವಲ ಚಿತ್ರವಲ್ಲ. ಇದು ಒಂದು ಭಾವನೆ, ಇದು ನನ್ನ ಜೀವನದ ಅತ್ಯುತ್ತಮ ಕೆಲಸ. ಇದು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನ ಕಥೆಯಾಗಿದ್ದು, ನಾವು ಮಾಡಿದ್ದಕ್ಕಾಗಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯಿಂದ ಈ ಪದಕವನ್ನು ಪಡೆದುಕೊಂಡಿದ್ದೇವೆ” ಎಂದಿದ್ದಾರೆ.
“ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಶನಲ್ ಪ್ರೊಡಕ್ಷನ್ಸ್, ಜಿಎಂಬಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಎ+ಎಸ್ ಮೂವೀಸ್‌ನಿಂದ ಬ್ಯಾಂಕ್‌ರೋಲ್ ಆಗಿರುವ ಮೇಜರ್
ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ಜೂನ್ 3 ರಂದು ಬಿಡುಗಡೆಯಾಯಿತು. ಚಿತ್ರದಲ್ಲಿ, ಅಡಿವಿ ತಾಜ್ ಮಹಲ್ ಹೋಟೆಲ್‌ನಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಮತ್ತು 14 ಒತ್ತೆಯಾಳುಗಳನ್ನು ರಕ್ಷಿಸುವಾಗ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಾತ್ರವನ್ನು ನಟಿಸಿದ್ದಾರೆ.
ಇದನ್ನು ಓದಿ: Avocado Health Benefits: ಅವಕಾಡೊ ಹಣ್ಣಿನ ಬಗ್ಗೆ ಕೇಳಿದ್ದೀರಾ! ಇದನ್ನ ತಿಂದರೆ ಹೃದ್ರೋಗ ನಿಮ್ಮ ಬಳಿ ಸುಳಿಯಲ್ಲ.
International Joke Day: ಮನ್ನಸ್ಸನ್ನು ಹಗುರಾಗಿಸುವ ಹಾಸ್ಯದ ದಿನವಿಂದು !
Doctor’s Day 2022: ಜೀವ ಉಳಿಸುವ ವೈದ್ಯರ ದಿನವಿಂದು; ಈ ದಿನದ ಇತಿಹಾಸ, ಮಹತ್ವ ಏನು ಗೊತ್ತಾ!
( major movie release in OTT soon)