sharmila mandre : ಶಿರಡಿ ಸಾಯಿ ಬಾಬಾನ ದರ್ಶನ ಪಡೆದ ನಟಿ ಶರ್ಮಿಳಾ ಮಾಂಡ್ರೆ

sharmila mandre : ಸ್ಯಾಂಡಲ್​ವುಡ್​​ನ ಬೇಡಿಕೆಯ ನಟಿಗಳಲ್ಲಿ ಒಬ್ಬರಾದ ನಟಿ ಶರ್ಮಿಳಾ ಮಾಂಡ್ರೆ ಅಂದಕ್ಕೆ ಸೋಲದವರಿಲ್ಲ. ಶೀಘ್ರದಲ್ಲಿಯೇ ನಟಿ ಶರ್ಮಿಳಾ ಮಾಂಡ್ರೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಗಾಳಿಪಟ 2 ಸಿನಿಮಾ ಕೂಡ ರಿಲೀಸ್​ ಆಗಲಿದೆ. ಇದಕ್ಕೂ ಮುನ್ನ ನಟಿ ಶರ್ಮಿಳಾ ಮಾಂಡ್ರೆ ತಮ್ಮೆಲ್ಲ ಶೂಟಿಂಗ್​ ಶೆಡ್ಯೂಲ್​ಗಳಿಗೆ ಬ್ರೇಕ್​ ಹಾಕಿ ಶಿರಡಿ ಸಾಯಿಬಾಬಾನ ಮಂದಿರಕ್ಕೆ ತೆರಳಿದ್ದಾರೆ .


ಈ ಸಂಬಂಧ ನಟಿ ಶರ್ಮಿಳಾ ಮಾಂಡ್ರೆ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.ಬಿಳಿ ಬಣ್ಣದ ಸಲ್ವಾರ್​ ಧರಿಸಿರುವ ನಟಿ ಶರ್ಮಿಳಾ ದೇವಸ್ಥಾನದ ಎದುರು ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದು ಈ ಫೋಟೋಗೆ ಶಿರಡಿಯಲ್ಲಿ ಅದ್ಭುತವಾದ ದರ್ಶನ ಪಡೆದಿದ್ದೇನೆ ಎಂದು ಶೀರ್ಷಿಕೆ ನೀಡಿದ್ದಾರೆ . ಈ ಫೊಟೋಗೆ 12 ಸಾವಿರಕ್ಕೂ ಅಧಿಕ ಲೈಕ್ಸ್​ಗಳು ಬಂದಿವೆ,


ಕನ್ನಡದಲ್ಲಿ ಸಜನಿ ಸಿನಿಮಾದಲ್ಲಿ ಧ್ಯಾನ್​ಗೆ ನಾಯಕನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ ನಟಿ ಶರ್ಮಿಳಾ ಮಾಂಡ್ರೆ ಬಳಿಕ ಸಾಕಷ್ಟು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಕಾಲಾಂತರದಲ್ಲಿ ಕನ್ನಡ ಚಿತ್ರರಂಗದಿಂದ ಮರೆಯಾಗಿದ್ದ ನಟಿ ಶರ್ಮಿಳಾ ಮಾಂಡ್ರೆ ಇದೀಗ ಮತ್ತೆ ಗಾಳಿಪಟ 2 ಸಿನಿಮಾದ ಮೂಲಕ ಕನ್ನಡ ಸಿನಿ ರಸಿಕರನ್ನು ರಂಜಿಸಲು ಶೀಘ್ರದಲ್ಲಿಯೇ ಬೆಳ್ಳಿ ತೆರೆಗೆ ಬರಲಿದ್ದಾರೆ. ಇದರ ಜೊತೆಯಲ್ಲಿ ದಸರಾ ಹಾಗೂ ಅನಂತ್​ ನಾಗ್​ ಜೊತೆಯಲ್ಲಿ ಮಂಡಲ ಸಿನಿಮಾಗಳಲ್ಲಿ ನಟಿಸಲು ಕೂಡ ನಟಿ ಶರ್ಮಿಳಾ ಮಾಂಡ್ರೆ ಸಹಿ ಹಾಕಿದ್ದಾರೆ.

ಇದನ್ನು ಓದಿ : ಬೆನ್ನು ಬಿಡದೆ ಫಾಲೋ ಮಾಡಿದ ಕ್ಯಾಮರಾಮೆನ್‌ಗೆ ಸೀರಿಯಸ್ ಲುಕ್ ಕೊಟ್ಟ ಕಿಂಗ್ ಕೊಹ್ಲಿ

ಇದನ್ನೂ ಓದಿ :KL Rahul Health Report : ರಾಹುಲ್‌ಗೆ ಜರ್ಮನಿಯಲ್ಲಿ ಆಪರೇಷನ್ ಸಕ್ಸಸ್.. ಪ್ರಿಯತಮನ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ ಪ್ರೇಯಸಿ

sharmila mandre in shiradi

Comments are closed.