Malaika Arora : ಮುಂಬೈನಲ್ಲಿ ಇತ್ತೀಚಿಗೆ ನಡೆದ ಫೆಮಿನಾ ಮಿಸ್ ಇಂಡಿಯಾ 2022 ಸಮಾರಂಭದಲ್ಲಿ ಕನ್ನಡತಿ ಉಡುಪಿ ಮೂಲದ ಸಿನಿ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಮಲೈಕಾ ಅರೋರಾ ಅಮೆರಿಕನ್ ಮಾಡೆಲ್ ಕಿಮ್ ಕಾರ್ಡಶಿಯಾನ್ ಅವರ ನೋಟವನ್ನು ನಕಲು ಮಾಡಲು ಹೋಗಿ ನೆಟ್ಟಿಗರಿಂದ ಸಖತ್ ಟ್ರೋಲ್ ಆಗ್ತಿದ್ದಾರೆ . ಸೆಲಬ್ರಿಟಿ ಡಿಸೈನರ್ ಮೇನಕಾ ಹರಿ ಸಿಂಘಾನಿ ವಿನ್ಯಾಸಗೊಳಿಸಿರುವ ಮಿನುಗುವ, ಡೀಪ್ ನೆಕ್ಲೈನ್ ಹೊಂದಿರುವ ಫಿಶ್ ಟೈಲ್ ಸಿಥ್ರೂ ಗೌನ್ ಇದಾಗಿದೆ. ನ್ಯೂಡ್ ಮೇಕಪ್, ನುಣುಪಾದ ಕೂದಲು ಹಾಗೂ ಕೆಂಪು ಬಣ್ಣದ ನೇಲ್ಪೇಯಿಂಟ್ಗಳನ್ನು ಮಲೈಕಾ ಅರೋರಾ ಧರಿಸಿದ್ದರು.

‘ಫಿಟ್ನೆಸ್ ಕ್ವೀನ್’ ಎಂದು ಕರೆಯಲ್ಪಡುವ ಮಲೈಕಾ ಅವರು ನಟರಾದ ನೇಹಾ ಧೂಪಿಯಾ ಮತ್ತು ಡಿನೋ ಮೋರಿಯಾ ಅವರೊಂದಿಗೆ ಗಾಲಾ ಸಮಾರಂಭದಲ್ಲಿ ತೀರ್ಪುಗಾರರ ಸದಸ್ಯರಲ್ಲಿ ಒಬ್ಬರಾಗಿದ್ದರು. ಇದು ಸೀ-ಥ್ರೂ ಗೌನ್ ಆಗಿದ್ದರಿಂದ, ಅವಳ ವ್ಯತಿರಿಕ್ತ ಒಳಉಡುಪುಗಳು ನೆಟಿಜನ್‌ಗಳಿಂದ ಗಮನ ಸೆಳೆದವು.
ನೀಳವಾದ ಕಂಠರೇಖೆಯನ್ನು ಹೊಂದಿದ್ದ ಈ ಡ್ರೆಸ್ಗೆ ಮಲೈಕಾ ಅರೋರಾ ಚೋಕರ್ ಧರಿಸಿದ್ದರು. ಎದೆಯ ಸೀಳುಗಳನ್ನು ಸ್ಪಷ್ಟವಾಗಿ ತೋರಿಸುತ್ತಿದ್ದ ಡ್ರೆಸ್ ಇದಾಗಿದ್ದು ಮಲೈಕಾ ಮೈಮಾಟ ಸಂಪೂರ್ಣವಾಗಿ ಕಾಣುವಷ್ಟು ಫಿಟ್ ಆಗಿತ್ತು. ಈ ಕಾರ್ಯಕ್ರಮದಲ್ಲಿ ಮಲೈಕಾ ಅರೋರಾ ಜ್ಯೂರಿ ಮೆಂಬರ್ ಆಗಿದ್ದರು. ಮಲೈಕಾ ಅರೋರಾ ಜೊತೆಯಲ್ಲಿ ನೇಹಾ ಧೂಪಿಯಾ ಹಾಗೂ ಡಿನೋ ಮೋರಿಯಾ ಕೂಡ ನಿರ್ಣಾಯಕರ ಸ್ಥಾನ ಅಲಂಕರಿಸಿದ್ದರು. ಇದು ಸೀಥ್ರೂ ಗೌನ್ ಆಗಿದ್ದರಿಂದ ಮಲೈಕಾ ಧರಿಸಿದ್ದ ಒಳ ಉಡುಪು ಸ್ಪಷ್ಟವಾಗಿ ಗೋಚರವಾಗುತ್ತಿತ್ತು.
ಮಲೈಕಾ ಅರೋರಾ ಉಡುಪನ್ನು ಅಮೆರಿಕದ ಮಾಡೆಲ್ ಕಿಮ್ ಕಾರ್ಡಶಿಯಾನ್ರ ಪಾರದರ್ಶಕ ಗೌನ್ ನೋಟಕ್ಕೆ ಹೋಲಿಕೆ ಮಾಡಲಾಗಿದೆ. ಮಲೈಕಾ ಕಿಮ್ ಕಾರ್ಡಶಿಯಾನ್ ಆಗಲು ಯತ್ನಿಸುತ್ತಿದ್ದಾಳೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಇನ್ನೂ ಕೆಲವರು ನೀವು ಬ್ರಾ ಹಾಗೂ ಒಳ ಉಡುಪು ಮಾತ್ರ ಧರಿಸಿ ಬಂದಿದ್ದರೂ ಸಾಕಿತ್ತು ಎಂದಿದ್ದಾರೆ.
ಇದನ್ನು ಓದಿ : kishore pattikonda hospitalised : ‘ಜೇಮ್ಸ್’ ಸಿನಿಮಾ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆಸ್ಪತ್ರೆಗೆ ದಾಖಲು : ಸ್ಥಿತಿ ಗಂಭೀರ
ಇದನ್ನೂ ಓದಿ : Racist Abuse : ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತೀಯರಿಗೆ ಇಂಗ್ಲೀಷರಿಂದ ಜನಾಂಗೀಯ ನಿಂದನೆ !
Malaika Arora trolled for ‘trying to be Kim Kardashian’ as she wears THIS under a see-through gown