Mandira Bedi : ಇದು ಸೋಶಿಯಲ್ ಮೀಡಿಯಾ ಯುಗ. ನೀವು ಹಾಕುವ ಒಂದೊಂದು ಪೋಸ್ಟ್ಗಳು ಪ್ರಪಂಚದ ಇನ್ಯಾವುದೋ ಮೂಲೆಯಲ್ಲಿ ಕುಳಿತ ವ್ಯಕ್ತಿ ಕೂಡ ತನ್ನ ಮೊಬೈಲ್ ಪರದೆಯ ಮೇಲೆ ನೋಡಬಹುದು. ಅದರಲ್ಲೂ ಸೆಲೆಬ್ರಿಟಿಗಳ ಮೇಲೆಂತೂ ಜನರ ಕಣ್ಣು ಇದ್ದೇ ಇರುತ್ತದೆ. ಬಹುಶಃ ಇದೇ ಕಾರಣಕ್ಕೆ ಬಾಲಿವುಡ್ ನಟಿ ಹಾಗೂ ಟೆಲಿವಿಷನ್ ನಿರೂಪಕಿ ಮಂದಿರಾ ಬೇಡಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಯರ್ರಾಬಿರ್ರಿ ಟ್ರೋಲ್ಗೆ ಒಳಗಾಗುತ್ತಿದ್ದಾರೆ.
ಬಾಲಿವುಡ್ ನಟಿ ಹಾಗೂ ನಿರೂಪಕಿ ಮಂದಿರಾ ಬೇಡಿ ಕಳೆದ ವರ್ಷ ಜುಲೈ ತಿಂಗಳಲ್ಲಿ ತಮ್ಮ ಪತಿ ಹಾಗೂ ನಿರ್ಮಾಪಕ ರಾಜ್ ಕೌಶಲ್ರನ್ನು ಕಳೆದುಕೊಂಡಿದ್ದರು. ಈ ವೇಳೆಯಲ್ಲಿ ಮಂದಿರಾ ಬೇಡಿಗೆ ಸೋಶಿಯಲ್ ಮೀಡಿಯಾದಲ್ಲಿ ಅನುಕಂಪಗಳ ಸುರಿಮಳೆಯೇ ಹರಿದುಬಂದಿತ್ತು . ಆದರೆ ಇದೀಗ ಇದೇ ಮಂದಿರಾ ಬೇಡಿಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಿಡಿಶಾಪ ಹಾಕ್ತಿದ್ದಾರೆ.ಇದಕ್ಕೆ ಕಾರಣ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಫೋಟೋಗಳು.
ಇನ್ಸ್ಟಾಗ್ರಾಂನಲ್ಲಿ ಸದಾ ಸಕ್ರಿಯವಾಗಿರುವ ಮಂದಿರಾ ಬೇಡಿ ನೀಲಿ ಬಣ್ಣದ ಬಿಕನಿಯನ್ನು ತೊಟ್ಟು ತನ್ನ ಆತ್ಮೀಯ ಸ್ನೇಹಿತನೊಂದಿಗೆ ಪೂಲ್ಗೆ ಇಳಿದು ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಮಂದಿರಾ, ಹುಟ್ಟು ಹಬ್ಬದ ಶುಭಾಶಯಗಳು ಆದಿ.ನೀನು ನನಗೆ ಎಷ್ಟು ಮುಖ್ಯ ಎಂಬುದನ್ನು ಈ ಫೋಟೋಗಳೇ ಹೇಳುತ್ತವೆ. ನಾವು ಒಬ್ಬರನ್ನೊಬ್ಬರು ಎಷ್ಟು ಸಮಯಗಳಿಂದ ತಿಳಿದಿದ್ದೇವೆ ಹಾಗೂ ನಮ್ಮ ನಡುವಿನ ಬಾಂಧವ್ಯ ಏನು ಎಂಬುದನ್ನು ಈ ಫೋಟೋಗಳೇ ಹೇಳುತ್ತವೆ ಎಂದು ಬರೆದುಕೊಂಡಿದ್ದರು.
ನಾನು ನಿನ್ನನ್ನು ಎಷ್ಟು ನಂಬುತ್ತೇನೆ. ನಿನ್ನ ಬಳಿಕ ಪ್ರೀತಿ, ಸಂತೋಷ ಹಾಗೂ ಯಶಸ್ಸು ಹರಿದು ಬರಲಿ. ನಾನು ನಿನ್ನನ್ನು ಪ್ರೀತಿಸುತ್ತೇನೆ. 17ನೇ ವರ್ಷದಿಂದ ನನ್ನ ಪ್ರೀತಿಯ ಸ್ನೇಹಿತ ಎಂದು ಶೀರ್ಷಿಕೆ ನೀಡಿದ್ದರು. ಈ ಫೋಟೋ ಪೋಸ್ಟ್ ಮಾಡಿದ್ದೇ ತಡ ನೆಟ್ಟಿಗರು ಮಂದಿರಾಬೇಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿನ್ನ ಪತಿ ಸತ್ತು ಇನ್ನು ಒಂದು ವರ್ಷ ಕೂಡ ಕಳೆದಿಲ್ಲ. ಸ್ವಲ್ಪ ಸಮಯವಾದರೂ ಕಾಯಬಹುದಿತ್ತು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನಿಮ್ಮ ಗಂಡ ಸತ್ತು ಹೋಗಿದ್ದಾರೆ ಅಲ್ಲವೇ..? ಇದ್ಯಾರು ಎಂದೆಲ್ಲ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ನೆಗೆಟಿವ್ ಕಮೆಂಟ್ಗಳಿಂದ ಬೇಸತ್ತ ಮಂದಿರಾ ಕಮೆಂಟ್ ಆಯ್ಕೆಯನ್ನೇ ಆಫ್ ಮಾಡಿದ್ದಾರೆ.
ಇದನ್ನು ಓದಿ : chief minister basavaraj bommai : ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ಸಿಗರೇ ಬಂಧನಕ್ಕೊಳಗಾಗುತ್ತಿದ್ದಾರೆ : ಸಿಎಂ ಬೊಮ್ಮಾಯಿ
Mandira Bedi gets brutally trolled for sharing a pool picture with male friend: ‘Arre tumhare pati ko mare huwe kuch hi samay hua ha thoda sabr kar leti’