ಸೋಮವಾರ, ಏಪ್ರಿಲ್ 28, 2025
HomeCinemaManoranjan Prabhakar: ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಮನೋರಂಜನ್‌ ಪ್ರಭಾಕರ್‌ ನಿಧನ

Manoranjan Prabhakar: ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಮನೋರಂಜನ್‌ ಪ್ರಭಾಕರ್‌ ನಿಧನ

- Advertisement -

ಬೆಂಗಳೂರು: (Manoranjan Prabhakar) ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಮನೋರಂಜನ್‌ ಪ್ರಭಾಕರ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಬುಧವಾರ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಮನೋರಂಜನ್‌ ಅವರು ಅಗಲಿದ್ದು, ಅವರ ಅಂತ್ಯಕ್ರಿಯೆ ಗುರುವಾರ ನಡೆಯಲಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಮನೋರಂಜನ್‌ (Manoranjan Prabhakar) ಅವರು ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಬುಧವಾರ ನಿಧನರಾಗಿದ್ದಾರೆ. ಪಂಡಿತ್‌ ಬಿ. ಎನ್‌ ಪಾರ್ಥಸಾರಥಿ ನಾಯ್ಡು ಹಾಗೂ ಗೋವಿಂದಮ್ಮ ದಂಪತಿಯ ಮಗನಾಗಿ ಜನಿಸಿದ ಮನೋರಂಜನ್‌ ಸಂಗೀತ ಪರಂಪರೆಯ ಕುಟುಂಬದಲ್ಲಿ ಜನಿಸಿದ್ದರು. ಎಪ್ಪತ್ತರ ದಶಕದ ಆರಂಭದಲ್ಲಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಮನೋರಂಜನ್‌ ಅವರು ಮನೋರಂಜನ್‌ ಮತ್ತು ತಂಡದ ಹೆಸರಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿದ್ದರು.

1980 ರ ಅವಧಿಯಲ್ಲಿ ಈ ತಂಡವನ್ನು ಹೆಸರಾಂತ ತಂಡವನ್ನಾಗಿ ನಿರ್ಮಿಸಿದರು. ಅಲ್ಲದೆ ಇವರು ಸುಮಾರು 800 ಕ್ಕೂ ಹೆಚ್ಚು ಸಂಗೀತದ ಆಲ್ಬಂಗಳನ್ನು ನೀಡಿದ್ದಾರೆ. 90 ರ ದಶಕದಲ್ಲಿ ಆದರ್ಶ ಇನ್ಸ್ಟಿಟ್ಯೂಟ್ ನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ 2003 ರಲ್ಲಿ ತಮ್ಮದೇ ಆದ ಶ್ರುತಿಲಯ ಕಲ್ಚರಲ್‌ ಅಕಾಡೆಮಿ, ಹಾಗೂ ಶ್ರುತಿಲಯ ಇನ್ಸ್ಟಿಟ್ಯೂಟ್‌ ಆಫ್‌ ಮ್ಯೂಸಿಕ್‌ ಸಂಸ್ಥೆಯನ್ನು ಆರಂಭಿಸಿ ಸಂಗೀತಾಸಕ್ತರಿಗೆ ತರಬೇತಿಯನ್ನು ನೀಡುತ್ತಿದ್ದರು.

ಇದೀಗ ಅವರ ಸಾವು ಕನ್ನಡ ಸಂಗೀತ ಕ್ಷೇತ್ರಕ್ಕೆ ಅಪಾರ ನಷ್ಟವನ್ನುಂಟುಮಾಡಿದೆ. ಅವರ ಸಾವಿಗೆ ಹಲವರು ಸಂತಾಪವನ್ನು ಸೂಚಿಸಿದ್ದು, ಇಡೀ ಕನ್ನಡ ಸಂಗೀತ ಕ್ಷೇತ್ರವನ್ನು ಮನೋರಂಜನ್‌ ಅವರು ಅಗಲಿದ್ದಾರೆ.

ಇದನ್ನೂ ಓದಿ : Protest against pathan: ಪಠಾಣ್ ವಿರುದ್ಧ ಜನಾಕ್ರೋಶ: ಶಾರೂಕ್‌ ಖಾನ್ ಭಾವಚಿತ್ರ ದಹಿಸಿ ಪ್ರತಿಭಟನೆ

ಇದನ್ನೂ ಓದಿ : Actor Shashikumar: ಮತ್ತೆ ಚುನಾವಣೆಗೆ ನಟ ಶಶಿಕುಮಾರ್ ಸಜ್ಜು: ಕ್ಷೇತ್ರ ಯಾವುದು? ಟಿಕೆಟ್ ಸಿಗುತ್ತಾ?

ಇದನ್ನೂ ಓದಿ : Shiva Rajkumar join politics : ರಾಜಕೀಯಕ್ಕೆ ಬರ್ತಾರಾ ಶಿವರಾಜ್ ಕುಮಾರ್ ? ಇಲ್ಲಿದೆ ಎಕ್ಸಕ್ಲೂಸಿವ್ ಡಿಟೇಲ್ಸ್

(Manoranjan Prabhakar) Renowned Kannada music director Manoranjan Prabhakar passed away on Wednesday due to illness. Manoranjan is survived by his wife, son and daughter and his relatives said that his funeral will be held on Thursday.

RELATED ARTICLES

Most Popular