Protest against pathan: ಪಠಾಣ್ ವಿರುದ್ಧ ಜನಾಕ್ರೋಶ: ಶಾರೂಕ್‌ ಖಾನ್ ಭಾವಚಿತ್ರ ದಹಿಸಿ ಪ್ರತಿಭಟನೆ

ಮಧ್ಯಪ್ರದೇಶ: (Protest against pathan) ಮುಂಬರುವ ಬಾಲಿವುಡ್ ಚಿತ್ರ ಪಠಾನ್ ಮತ್ತು ಅದರ ಹಾಡು ಬೇಷರಂ ರಂಗ್ ವಿರುದ್ಧ ಸಂಘಟನೆಯ ಕಾರ್ಯಕರ್ತರು ಮಧ್ಯಪ್ರದೇಶದ ಇಂದೋರ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ರಾಜ್ಯ ಸಚಿವ ನರೋತ್ತಮ್ ಮಿಶ್ರಾ ಅವರು “ಆಕ್ಷೇಪಾರ್ಹ ದೃಶ್ಯಗಳು” ಮತ್ತು ಕೇಸರಿ ವೇಷಭೂಷಣಗಳ ಬಳಕೆಗಾಗಿ ಚಲನಚಿತ್ರವನ್ನು ನಿಷೇಧಿಸುವಂತೆ ಕರೆ ನೀಡಿದ್ದು, ಕೆಲವೇ ಗಂಟೆಗಳಲ್ಲಿ ಪ್ರತಿಭಟನೆ ನಡೆಯಿತು.

ವೀರ ಶಿವಾಜಿ ಗ್ರೂಪ್‌ನ ಕಾರ್ಯಕರ್ತರು ರಸ್ತೆಯಲ್ಲಿ ಜಮಾಯಿಸಿ ನಟರಾದ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ (Protest against pathan) ನಡೆಸಿದರು ಎಂದು ಪಿಟಿಐ ವರದಿ ಮಾಡಿದೆ. ಬೇಷರಮ್ ರಂಗ್ ಹಾಡಿನ ವಿಷಯದಿಂದ ಹಿಂದೂ ಸಮುದಾಯವು ಮನನೊಂದಿದೆ ಎಂದು ಆರೋಪಿಸಿ ಮುಂದಿನ ವರ್ಷ ಜನವರಿಯಲ್ಲಿ ತೆರೆಗೆ ಬರಲಿರುವ ಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಲಾಗಿದೆ.

2023 ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಪಠಾನ್‌ನ ಮೊದಲ ಹಾಡು ಬೇಷರಂ ರಂಗ್ ಇತ್ತೀಚೆಗೆ ತೆರೆ ಕಂಡಿತ್ತು. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ದೀಪಿಕಾ ಪಡುಕೋಣೆ ಮತ್ತು ನಾಯಕ ನಟ ಶಾರುಖ್ ಖಾನ್ ಅವರ ಉಡುಪಿನ ಬಣ್ಣವನ್ನು ನೋಡಿ, ಆ ದೃಶ್ಯವನ್ನು ಸರಿಪಡಿಸಲು ಹೇಳಿದ್ದು, ಇದರ ನಂತರದಲ್ಲಿ ಪಠಾಣ್‌ ಸಾಂಗ್‌ ಭಾರೀ ಚರ್ಚೆಗೆ ಕಾರಣವಾಯಿತು. ಹಾಡಿನಲ್ಲಿರುವ ಕೆಲವು ದೃಶ್ಯಗಳನ್ನು ಸರಿಪಡಿಸದಿದ್ದರೆ, ರಾಜ್ಯದಲ್ಲಿ ಚಲನಚಿತ್ರ ಪ್ರದರ್ಶನದ ಬಗ್ಗೆ ಸರ್ಕಾರ ಕೆಲವು ನಿಲುವುಗಳನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ಮಿಶ್ರಾ ಹೇಳಿದರು.

ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಅಕ್ಟೋಬರ್‌ನಲ್ಲಿ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಬಾಲಿವುಡ್ ಚಲನಚಿತ್ರವಾದ ಆದಿಪುರುಷ ನಿರ್ಮಾಪಕರಿಗೆ ಹಿಂದೂ ಧಾರ್ಮಿಕ ವ್ಯಕ್ತಿಗಳನ್ನು “ತಪ್ಪು” ರೀತಿಯಲ್ಲಿ ತೋರಿಸುವ ದೃಶ್ಯಗಳನ್ನು ತೆಗೆದುಹಾಕದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದರು. ಇದೀಗ ಪಠಾಣ್‌ ಸಿನಿಮಾದ ಸಾಂಗ್‌ನಲ್ಲಿಯೂ ಕೂಡ ಕೆಲವು ದೃಶ್ಯಗಳನ್ನು ಸರಿಪಡಿಸಿಕೊಳ್ಳಬೇಕು ಇಲ್ಲದೆ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : Actor Shashikumar: ಮತ್ತೆ ಚುನಾವಣೆಗೆ ನಟ ಶಶಿಕುಮಾರ್ ಸಜ್ಜು: ಕ್ಷೇತ್ರ ಯಾವುದು? ಟಿಕೆಟ್ ಸಿಗುತ್ತಾ?

(Protest against Pathan) The activists of the organization staged a protest against the upcoming Bollywood film Pathan and its song Besharam Rang in Indore, Madhya Pradesh on Wednesday. Minister of State Narottam Mishra called for the film to be banned for “objectionable scenes” and use of saffron costumes, sparking protests within hours.

Comments are closed.